ಕುಟುಂಬ ರಾಜಕಾರಣಕ್ಕೆ ತೆರೆ ಎಳೆದು ಇತಿಹಾಸ ಬರೆದ ಎಂ ಆರ್ ಮಂಜುನಾಥ್

ಕುಟುಂಬ ರಾಜಕಾರಣಕ್ಕೆ ತೆರೆ ಎಳೆದು ಇತಿಹಾಸ ಬರೆದ ಎಂ ಆರ್ ಮಂಜುನಾಥ್

ಹನೂರು :-ವಿಧಾನಸಭಾ ಕ್ಷೆತ್ರದಲ್ಲಿ ಭರ್ಜರಿ ಜಯ ಸಾಧಿಸಿದ ಎಮ್ ಆರ್ ಮಂಜುನಾಥ್ ಸ್ವತಂತ್ರ ಬಂದ ಕಾಲದಿಂದಲೂ ಕೂಡ ಕುಟುಂಬ ರಾಜಕಾರಣದ ಹಿಡಿತದಲ್ಲಿದ್ದ ಶಾಸಕ ಸ್ಥಾನವನ್ನು ಇತಿಹಾಸದಲ್ಲೆ ಅತಿ ಹೆಚ್ಚು ಮತಗಳನ್ನು ಪಡೆದು

 

 

 

 

 

 

 

 

 

ಜಯಶೀಲರಾದ ಎಮ್ ಆರ್ ಮಂಜುನಾಥ್. ಮೇ 13 ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಎಣಿಕೆ ಪ್ರಾರಂಭ ಆದ ಪ್ರತಿ ಕ್ಷಣದಿಂದಲೂ ಕೂಡ ಮೊದಲೇ ಸುತ್ತಿನಿಂದ 19ನೇ ಸುತ್ತಿನ ತನಕ ಕೂಡ ಮುನ್ನಡೆ

 

 

 

 

 

 

 

 

 

ಕಾಯ್ದುಕೊಂಡು 75034 ಮತಗಳನ್ನು ಪಡೆದು 17340 ಮತಗಳ ಅಂತರದಲ್ಲಿ ಐತಿಹಾಸಿಕ ಗೆಲುವನ್ನು ಸಾಧಿಸಿದ್ದಾರೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು ಮತಗಳನ್ನು ಪಡೆದಂತ ಏಕೈಕ ವ್ಯಕ್ತಿ ಎಂ ಆರ್ ಮಂಜುನಾಥ್ ರವರು ಇತಿಹಾಸ ಪುಟ ಸೇರಿದ್ದಾರೆ. ಕ್ಷೆತ್ರದ ಜನರ ಜೊತೆ ನಿರಂತರ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದ ಮಂಜುನಾಥ್ ಗೆ ಮತದಾರರು

 

 

 

 

 

 

 

 

 

 

ಈ ಬಾರಿ ಅದ್ಭುತ ಕೊಡುಗೆ ನೀಡಿದ್ದಾರೆ ನಂತರ ಕೊಳ್ಳೇಗಾಲದಿಂದ ಹಿಡಿದು ಮಹದೇಶ್ವರ ಬೆಟ್ಟದ ತನಕ ಎಂ ಆರ್ ಮಂಜುನಾಥ್ ರವರಿಗೆ ಪ್ರತಿ ಗ್ರಾಮದಲ್ಲೂ ಮಹಿಳೆಯರು ಜೆಡಿಎಸ್ ಪಕ್ಷದ ಕಾರ್ಯಕರ್ತರು ಅದ್ಭುತವಾದ ಸ್ವಾಗತ ಕೋರಿ ನೆಚ್ಚಿನ ನಾಯಕನಿಗೆ ಶುಭಾಶಯ ಕೋರಿದರು ಜಯಭೇರಿ ಬಾರಿಸಿದ ನಂತರ ಶ್ರೀ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳಿ ತಾಳುಬೆಟ್ಟದಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಕಾಲು ನಡಿಗೆಯಲ್ಲಿ ಪಾದಯಾತ್ರೆ ಮಾಡಿ ಮಾದೇಶ್ವರ ರ ದರ್ಶನ ಮಾಡಿ ಆಶೀರ್ವಾದ ಪಡೆದರು

 

 

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version