ಅಣಗಳ್ಳಿ ದೊಡ್ಡಿ ಗ್ರಾಮದ ಬಹುತೇಕ ಜನರು ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
ಹನೂರು :- ವಿಧಾನಸಭಾ ಕ್ಷೆತ್ರದ ಜನಪ್ರಿಯ ಅಭ್ಯರ್ಥಿ ಎಂದೇ ಖ್ಯಾತಿಯಾಗಿರುವ ಜೆಡಿಎಸ್ ಪಕ್ಷದ ಎಮ್ ಆರ್ ಮಂಜುನಾಥ್ ರವರ ಮಾನವೀಯ ಗುಣಗಳನ್ನು ಮೆಚ್ಚಿ ಸಾಲು ಸಾಲಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಯಾಗುತ್ತಿದ್ದಾರೆ ಅದೇ ರೀತಿ ಬಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಣಗಳ್ಳಿ ದೊಡ್ಡಿ ಗ್ರಾಮದ ಬಹುತೇಕ ಮುಖಂಡರು. ಮಹಿಳೆಯರು.ಯಜಮಾನರು.ಮಂಜುನಾಥ್ ರವರ ಕಾರ್ಯವೈಖರಿ ಮೆಚ್ಚಿ ಅಣಗಳ್ಳಿ ದೊಡ್ಡಿ ಹಾಗೂ ಪಳನಿ ಸ್ವಾಮಿ ದೊಡ್ಡಿ ಗ್ರಾಮಸ್ಥರು ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸಿ ಮಂಜುನಾಥ್ ರವರ ಪತ್ನಿ ನಂದಿನಿ ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ .
ಇದೆ ವೇಳೆ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು ಶಿವಮೂರ್ತಿ ಸತತವಾಗಿ ಐದಾರು ವರ್ಷದಿಂದ ಕ್ಷೆತ್ರದ ಜನರ ಕಷ್ಟ ಸುಖಗಳಿಗೆ ನಿರಂತರವಾಗಿ ಎಮ್ ಆರ್ ಮಂಜುನಾಥ್ ಅಣ್ಣ ರವರು ಸ್ಪಂದಿಸುತ್ತ ಬಂದಿದ್ದಾರೆ ಮುಂದಿನ ದಿನಗಳಲ್ಲಿ ಕ್ಷೆತ್ರದ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕದ ಪ್ರಾದೇಶಿಕ ಪಕ್ಷ ರೈತರ ಪಕ್ಷ ಬಡ ಜನರ ಪಕ್ಷ ಜೆಡಿಎಸ್ ಪಕ್ಷಕ್ಕೆ ನಿಮ್ಮೆಲ್ಲರ ಸಹಕಾರ ಬೇಕೇ ಬೇಕು ಎಚ್ ಡಿ ಕುಮಾರಸ್ವಾಮಿರವರು ಗ್ರಾಮೀಣ ಭಾಗದ ಬಡಜನರಿಗೆ ಹಲವಾರು ವಿಶೇಷ ಯೋಜನೆಗಳನ್ನು ಪಂಚರತ್ನ ರಥ ಯಾತ್ರೆಯ ಮೂಲಕ ಇಡೀ ರಾಜ್ಯದ ಜನರಿಗೆ ಪರಿಚಯಿಸುತ್ತಿದ್ದಾರೆ.
ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ ಹಾಗಾಗಿ ದಯಮಾಡಿ ತಾವೆಲ್ಲರೂ ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮಂಜುನಾಥ್ ಪರ ನಾವು ಖಂಡಿತವಾಗಿ ಬೆಂಬಲಿಸುತ್ತೇವೆ ಆದರೆ ನೀವು ಗೆದ್ದ ಮೇಲೆ ಬೇರೆಯವರ ರೀತಿ ಮೋಸ ಮಾಡದೆ ಕ್ಷೇತ್ರದ ಹಾಗೂ ಗ್ರಾಮದ ಅಭಿವೃದ್ಧಿಗಾಗಿ ಕೆಲಸ ಮಾಡಿ ಎಂದು ಮಂಜುನಾಥ್ ಪತ್ನಿ ನಂದಿನಿ ರವರಿಗೆ ಗ್ರಾಮಸ್ಥರು ಹೇಳಿದರು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಶಿವಮೂರ್ತಿ. ನವೀನ್. ಶ್ರೀನಿವಾಸ್. ಜಯಮ್ಮ ಕೆಂಪಮ್ಮ ಮಂಜಮ್ಮ ಸರೋಜ ಸೌಮ್ಯ ಚಂದ್ರಮ್ಮ ಜಯಮಾಲಾ ಪ್ರತಿಮಾ ಇನ್ನು ಹಲವಾರು ಜೆಡಿಎಸ್ ಮುಖಂಡರು ಇದ್ದರು
ವರದಿ :- ನಾಗೇಂದ್ರ ಪ್ರಸಾದ್