ಅನುದಾನ ರಹಿತ ಶಾಲಾ ಕಾಲೇಜುಗಳ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ಗೆ ವಿಧಾನಪರಿಷತ್ ಶಾಸಕರ ಒತ್ತಾಯ

ಕೊರೋನ ಸಂಕಷ್ಟದಲ್ಲಿರುವ ಶಿಕ್ಷಕರು ಹಾಗೂ ಸಿಬ್ಬಂದಿಗಳ ಜೀವನ ಅತಂತ್ರವಾಗಿದ್ದು ಆರ್ಥಿಕವಾಗಿ ಕಂಗೆಟ್ಟಿದ್ದು ಜೀವನ ನಡೆಸಲು ಕಷ್ಟವಾಗಿದೆ ಇದನ್ನು ಅರಿತ ವಿಧಾನಪರಿಷತ್ ಶಾಸಕರು  ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿಶೇಷ ಪ್ಯಾಕೇಜ್ ಗೆ ಒತ್ತಾಯ ಮಾಡಿದರು.

ಇಂದು ಮಾನ್ಯ ವಿಧಾನ ಪರಿಷತ್ ನ ಶಾಸಕರುಗಳಾದ ಶ್ರೀ ಚಿದಾನಂದ್ ಎಂ ಗೌಡ ರವರು, ಡಾ. ವೈ.ಎ. ನಾರಾಯಣಸ್ವಾಮಿ ಯವರು,

ಶ್ರೀ ಅರುಣ ಶಹಾಪೂರ, ಶ್ರೀ ಪುಟ್ಟಣ್ಣ, ಶ್ರೀ ಸುಶೀಲ್ ನಮೋಶಿ, ಶ್ರೀ ಹನುಮಂತ ‌ನಿರಾಣಿ ರವರು ಹಾಗೂ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಬಿ. ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿ , ಅನುದಾನ ರಹಿತ ಶಾಲಾ ಕಾಲೇಜುಗಳ ಸಿಬ್ಬಂದಿಗಳು. ಲಾಕ್ ಡೌನ್ ಸಂಕಷ್ಟದಿಂದಾಗಿ ತಮ್ಮ ಜೀವನ ನಡೆಸುವುದು ಸಹ ಅತ್ಯಂತ ಕಠಿಣವಾಗಿರುವುದರಿಂದ

ವಿಶೇಷ ಆರ್ಥಿಕ ಪ್ಯಾಕೇಜ್ ಹಾಗೂ ಸಿಬ್ಬಂದಿಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಹಾಗೂ ಇನ್ನಿತರೆ ವಿಷಯಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಯಿತು.

 

ಈ ವಿಷಯಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಇವರಿಗೆ ಈ ಆರ್ಥಿಕ ಪ್ಯಾಕೇಜ್ ಗೆ ತಗಲುವ ವೆಚ್ಚ ಅಂದಾಜು ಎಷ್ಟಾಗಬಹುದು ಎಂಬ ಮಾಹಿತಿ ಪಡೆಯಲಾಯಿತು. ಇದಕ್ಕೆ ಮಾನ್ಯ ಶಿಕ್ಷಣ ಸಚಿವರು ಹಾಗೂ ಮಾನ್ಯ ಮುಖ್ಯ ಮುಖ್ಯಮಂತ್ರಿಗಳು ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಸಂದರ್ಭದಲ್ಲಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ನೌಕರರ ಪರವಾಗಿ

ಮಾನ್ಯ ಮುಖ್ಯ ಮಂತ್ರಿಗಳಿಗೂ, ಮಾನ್ಯ ಶಿಕ್ಷಣ ಸಚಿವರಿಗೂ ಹಾಗೂ ಈ ಸಂದರ್ಭದಲ್ಲಿ ಹಾಜರಿದ್ದ ವಿಧಾನ ಪರಿಷತ್ ಸದಸ್ಯರಿಗೆ ಸಮಸ್ತ ಶಿಕ್ಷಕರ ಪರವಾಗಿ ಧನ್ಯವಾದ ತಿಳಿಸಿದರು.

One thought on “ಅನುದಾನ ರಹಿತ ಶಾಲಾ ಕಾಲೇಜುಗಳ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ಗೆ ವಿಧಾನಪರಿಷತ್ ಶಾಸಕರ ಒತ್ತಾಯ

  1. Being an teacher we are providing classes to students to develop them to become a good citizen to society with lot of knowledge, we are sharing knowledge by putting effort but we are not useful to private schools and government because we are not getting even single NP from school or grants from government, so we are useful to Students, Schools, Society and Government but we are worthless to all of them…

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version