ದಲಿತ ಸಮಾಜದ ಮಗಳು ಮಿಸ್ ಇಂಡಿಯಾ ಆಗಿ ಆಯ್ಕೆ : ಸಾವಿರ ಸ್ಪರ್ಧಿಗಳನ್ನು ಹಿಂದಿಕ್ಕಿ ಮಿಸ್ ಇಂಡಿಯಾ ಆದ ವರ್ಷಾ
ವರ್ಷಾ ಬಾಲ್ಯದಿಂದಲೇ ಕಿವುಡ ಮತ್ತು ಮೂಕ ಆಗಿದ್ದಾಳೆ. ಈ ಸ್ಪರ್ಧೆಯಲ್ಲಿ ವರ್ಷಾ ಮಾತ್ರ ಕಿವುಡ, ಮೂಕ ಸ್ಪರ್ಧಿಯಾಗಿದ್ದರು. ವರ್ಷಾಳ ಈ ಗೆಲುವು ಇತಿಹಾಸ ಸೃಷ್ಟಿಸಿದೆ. ಬಹುಜನರ ಮಾಧ್ಯಮಗಳಲ್ಲಿ ವರ್ಷಾಳ ಯಶಸ್ಸಿನ ಬಗ್ಗೆ ಸುದ್ದಿ ಮಾಡಿವೆ. ಮುಖ್ಯವಾಹಿನಿ ಜಾತಿವಾದಿ ಮಾಧ್ಯಮಗಳು ಈ ಬಗ್ಗೆ ಜಾಣ ಮೌನ ವಹಿಸಿವೆ ಎಂದು ಬಹುಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ : ಇಂದೋರ್‌ನ ಕಿವುಡ ಮತ್ತು ಮೂಕ ವಿದ್ಯಾರ್ಥಿನಿ ವರ್ಷಾ ಡೋಂಗ್ರೆ ‘ಮಿಸ್ ಇಂಡಿಯಾ ಪ್ರಶಸ್ತಿ’ ಗೆಲ್ಲುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. 5 ನೇ ಆಗಸ್ಟ್ ರಂದು ಉತ್ತರಪ್ರದೇಶದ ಆಗ್ರಾದಲ್ಲಿ ನಡೆದ ಸಾಮಾನ್ಯ ಸ್ಪರ್ಧಿಗಳ ‘ಸ್ಟಾರ್ ಲೈನ್ ಮಿಸ್ ಇಂಡಿಯಾ ಸ್ಪರ್ಧೆ’ಯಲ್ಲಿ ಸಾವಿರ ಸ್ಪರ್ಧಿಗಳನ್ನು ಹಿಂದಿಕ್ಕಿ ವರ್ಷಾ ಈ ಪ್ರಶಸ್ತಿಯನ್ನು ಪಡೆದರು. ಈ ಸಾಧನೆಯಿಂದ ವರ್ಷಾ ಡೋಂಗ್ರೆ ಅವರ ಹೆಸರನ್ನು ಚರ್ಚೆಗೆ ಬಂದಿದೆ. ವರ್ಷಾಳ ಈ ಗೆಲುವು ಹಲವು ವಿಷಯಗಳಲ್ಲಿ ವಿಶಿಷ್ಟವಾಗಿದೆ. ವಾಸ್ತವವಾಗಿ, ವರ್ಷಾ ಬಾಲ್ಯದಿಂದಲೂ ಕಿವುಡ ಮತ್ತು ಮೂಗ. ಅಂದರೆ, ಅವಳು ಮಾತನಾಡಲು ಮತ್ತು ಕೇಳಲು ಸಾಧ್ಯವಿಲ್ಲ. ಈ ಸ್ಪರ್ಧೆಯಲ್ಲಿ ವರ್ಷಾ ಮಾತ್ರ ಕಿವುಡ-ಮೂಕ ಸ್ಪರ್ಧಿಯಾಗಿದ್ದರು. ವರ್ಷಾಳ ಈ ಗೆಲುವು ಒಂದು ಇತಿಹಾಸವನ್ನು ಸೃಷ್ಟಿಸಿದೆ. ವರ್ಷಾ ಈ ಹಿಂದೆ ಕಿವುಡ ಮತ್ತು ಮೂಗರಿಗೆ ಮಿಸ್ ಎಂಪಿ ಪ್ರಶಸ್ತಿಯನ್ನು ಗೆದ್ದಿದ್ದಳು. ಮತ್ತೊಂದು ವಿಶೇಷವೆಂದರೆ ವರ್ಷಾ ದಲಿತ ಸಮಾಜದ ಮಗಳು ಆಗಿದ್ದಾಳೆ.
ಆದಾಗ್ಯೂ, ವರ್ಷಾಳ ಈ ಯಶಸ್ಸಿನ ಬಗ್ಗೆ ಮನುವಾದಿ ಮಾಧ್ಯಮಗಳು ಜಾಣ ಮೌನ ವಹಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಬಹುಜನ ಸಮಾಜದಿಂದ ನಡೆಸಲ್ಪಡುವ ಮಾಧ್ಯಮಗಳಲ್ಲಿ ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ಹಾಗೂ ವೆಬ್‌ಸೈಟ್‌ಗಳಿಂದ ಈ ಬಗ್ಗೆ ಸುದ್ದಿಯ ಪ್ರಚಾರ ಮತ್ತು ಪ್ರಸಾರ ಮಾಡಲಾಗಿದೆ. ಆದರೆ, ಮುಖ್ಯವಾಹಿನಿಯ ಮಾಧ್ಯಮಗಳು ಎಂದು ಕರೆಯಲ್ಪಡುವವರು ಕಿವುಡ ಮತ್ತು ಮೂಕ ಹುಡುಗಿಯ ಐತಿಹಾಸಿಕ ಯಶಸ್ಸನ್ನು ದೇಶಕ್ಕೆ ಹೇಳದೇ ತಮ್ಮ ಜಾತಿವಾದಿ ಬುದ್ಧಿ ತೋರಿಸಿವೆ ಎಂದು ಬಹುಜನರು ಸಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರ್ಷಾ ಪ್ರಸ್ತುತ ಬಿ.ಕಾಂ ಎರಡನೇ ವರ್ಷದಲ್ಲಿ ಓದುತ್ತಿದ್ದಾಳೆ ಎಂದು ತಿಳಿದುಬಂದಿದೆ.
ವರ್ಷಾಳ ಈ ಯಶಸ್ಸು ಸುಲಭವಾಗಿರಲಿಲ್ಲ. ವರ್ಷಾ ಬಹಳ ಕಷ್ಟ ಮತ್ತು ಹೋರಾಟದಿಂದ ಈ ಹಂತವನ್ನು ತಲುಪಿದ್ದಾಳೆ. ವರ್ಷಾಳ ಪೋಷಕರು ಮತ್ತು ಸಹೋದರಿ ಕೂಡ ಕಿವುಡರು. ಈ ಕಾರಣದಿಂದಾಗಿ ವರ್ಷಾ ಸಾಮಾನ್ಯ ಮಕ್ಕಳಂತೆ ಬೆಳೆದಿಲ್ಲ. ಬದಲಾಗಿ, ಬಾಲ್ಯದಲ್ಲಿಯೇ ಕಷ್ಟಗಳು ಎದುರಿಸಿದ್ದಳು. ವರ್ಷಾ, ಈ ತೊಂದರೆಗಳಿಂದ ಹೆದರುವ ಬದಲು, ಅವರೊಂದಿಗೆ ಸ್ನೇಹ ಬೆಳೆಸಿದಳು ಮತ್ತು ತನ್ನ ಹುರುಪಿನಿಂದ ಇಂದು ಈ ಸ್ಥಾನವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾಳೆ.
ವರ್ಷಾ ತನ್ನ ಮರಣದ ನಂತರ ಅಂಗಾಂಗಗಳನ್ನು ದಾನ ಮಾಡುವುದಾಗಿ ಆಗಸ್ಟ್ 13 ರಂದು ‘ವಿಶ್ವ ಅಂಗಾಂಗ ದಾನ ದಿನ’ದಂದು ವರ್ಷಾ ಘೋಷಿಸಿದ್ದರಿಂದ ಆಯ್ಕೆಯಲ್ಲಿನ ಮಾನವೀಯ ಮೌಲ್ಯಗಳನ್ನು ಏನೆಂದು ತಿಳಿಯಬಹುದಾಗಿದೆ. “ನಾನು ಮೂಕ ಮತ್ತು ಕಿವುಡನಾಗಿದ್ದರೂ, ನನ್ನ ಮರಣದ ನಂತರ ನನ್ನ ಮೂತ್ರಪಿಂಡ, ಕಣ್ಣುಗಳು ಮತ್ತು ಇತರ ಅಂಗಗಳು ಮತ್ತೊಬ್ಬರ ಉಪಯೋಗಕ್ಕೆ ಬರಬಹುದು, ಇದಕ್ಕಿಂತ ದೊಡ್ಡ ಸಂಪತ್ತು ನನಗೆ ಬೇರೊಂದಿಲ್ಲ” ಎಂದು ವರ್ಷಾ ಈ ಬಗ್ಗೆ ಮಾಧ್ಯಮ ಒಂದಕ್ಕೆ ಮಾತನಾಡುತ್ತ ಹೇಳಿದ್ದಾಳೆ.
ಮಿಸ್ ಇಂಡಿಯಾ ಆದ ನಂತರ ವರ್ಷಾಳ ಕನಸು ಮಿಸ್ ಯೂನಿವರ್ಸ್ ಆಗುವುದು. ಇಂದೋರ್ ನ ಕಲೆಕ್ಟರ್ ವರ್ಷಾಗೆ ‘ಮಿಸ್ ಯೂನಿವರ್ಸ್’ ತಯಾರಿಸಲು ಸಾಮಾಜಿಕ ನ್ಯಾಯ ಇಲಾಖೆಯಿಂದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ, ವರ್ಷಾ ಅವರ ಕುಟುಂಬವು ತನ್ನ ‘ಮಿಸ್ ಯೂನಿವರ್ಸ್’ ತಯಾರಿಗಾಗಿ ಆರ್ಥಿಕವಾಗಿ ಸಹಾಯ ಮಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ.