ಒಳ್ಳೆಯ ದೃಷ್ಟಿಯಿಂದ ಶಾಲೆ ತೆರೆಯಲಾಗುತ್ತಿದೆ -ಸಚಿವ ಬಿ.ಸಿ ನಾಗೇಶ್.

ಒಳ್ಳೆಯ ದೃಷ್ಟಿಯಿಂದ ಶಾಲೆ ತೆರೆಯಲಾಗುತ್ತಿದೆ -ಸಚಿವ ಬಿ.ಸಿ ನಾಗೇಶ್.

 

ಮಕ್ಕಳ ಶೈಕ್ಷಣಿಕ ವ್ಯವಸ್ಥೆ ತೀರಾ ಹದಗೆಟ್ಟಿದ್ದು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ತೀರ ಇದು ಅದನ್ನ ಸಹಜಸ್ಥಿತಿಗೆ ತರಬೇಕಾದ್ದು ನಮ್ಮ ಕರ್ತವ್ಯ ಹಾಗೂ ತಜ್ಞರ ವರದಿಯಂತೆ ಶಾಲೆ ಪ್ರಾರಂಭ ಮಾಡಲು ಸರ್ಕಾರ ಮುಂದಾಗಿದೆ ಎಂದರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.

 

ಇಂದು ತುಮಕೂರಿನ ಕರೀಕೆರೆ ಗ್ರಾಮದಲ್ಲಿ ಸ್ವತಂತ್ರ ದಿನಾಚರಣೆಯಂದು ಧ್ವಜ ಹಾರಿಸಲು ಹೋಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದ ಅದಕ್ಕೆ ಸಂಬಂಧಿಸಿದಂತೆ ಇಂದು ಕರಿಕೆರೆ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು ನಂತರ ಒಂದು ಲಕ್ಷ ರೂಗಳ ಪರಿಹಾರದ ಚೆಕ್ ಅನ್ನು ಕುಟುಂಬಕ್ಕೆ ನೀಡಿದರು

 

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಬಿಸಿ ನಾಗೇಶ್ ರವರು ಕಳೆದ ತಿಂಗಳು ನಡೆಸಿದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು ಆದರೆ ಪರೀಕ್ಷೆಯಲ್ಲಿ ಪಾಲ್ಗೊಂಡ ಯಾವುದೇ ವಿದ್ಯಾರ್ಥಿಗೆ ತೊಂದರೆಯಾದ ಉದಾಹರಣೆ ಇಲ್ಲ ಇನ್ನು ಕೋವಿಡ್ ಮನುಷ್ಯನ ಜೀವನದ ಒಂದು ಭಾಗವಾಗಿದೆ ಅದರ ಪಯಣ ನಮ್ಮ ಜೊತೆ ಮುಂದುವರೆಯಲಿದ್ದು ಅದಕ್ಕೆ ತಕ್ಕಂತೆ ಸಾಕಷ್ಟು ಅಗತ್ಯ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ತೆರೆಯಲಾಗುತ್ತಿದೆ ಹಾಗೂ ಶಾಲೆಗಳನ್ನು ತೆರೆಯುವ ಅನಿವಾರ್ಯತೆ ಕೂಡ ಹೆಚ್ಚಿದೆ ಇಲ್ಲವಾದರೆ ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಿಂದ ತೊಂದರೆ ಅನುಭವಿಸಲಿದ್ದಾರೆ ಎಂದರು.

 

ಇನ್ನು ಕರೋನಾ ಮೊದಲನೇ ಅಲೆಯಲ್ಲಿ ಮಾಸ್ಕ್ ಸ್ಯಾನಿಟೈಸರ್ ಗಳ ಕೊರತೆ ಉಂಟಾಗಿತ್ತು, ಎರಡನೇ ಅಲೆಯಲ್ಲಿ ವೆಂಟಿಲೇಟರ್ ಹಾಗೂ ಆಕ್ಸಿಜನ್ ಕೊರತೆ ಇತ್ತು ಆದರೆ ಈಗ ವ್ಯಾಕ್ಸಿಂನ್ ಬಂದಿದೆ ಹಾಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾರ್ವಜನಿಕರಿಗೆ ಲಸಿಕೆ ನೀಡಲು ಹಂತಹಂತವಾಗಿ ಕಾರ್ಯಾರೂಪಿಸಿ ಸಾರ್ವಜನಿಕರಿಗೆ ಲಸಿಕೆ ನೀಡಲು ಮುಂದಾಗಿದೆ ಈಗಾಗಲೇ ರಾಜ್ಯಾದ್ಯಂತ ಶೇಕಡ ಐವತ್ತಕ್ಕೂ ಹೆಚ್ಚು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ ಎಂದರು.

 

 

ತಜ್ಞರ ವರದಿ ಪ್ರಕಾರ ಶಾಲೆ ಪ್ರಾರಂಭ

ಕಳೆದ ಬಾರಿ ತಜ್ಞರ ವರದಿ ಪ್ರಕಾರ ತೊಂದರೆ ಎದುರಾಗಲಿದೆ ಎಂದು ತಿಳಿಸಿದರು ಆದರೆ ಈಗ ನೀಡಿರುವ ವರದಿಯ ಪ್ರಕಾರ ಶಾಲೆಗಳನ್ನು ತೆರೆದಲ್ಲಿ ಮಕ್ಕಳಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿರುವ ಹಿನ್ನಲೆಯಲ್ಲಿ ಶಾಲೆಗಳನ್ನು ತೆರೆಯಲಾಗುತ್ತಿದೆ ಎಂದರು

 

ಸರ್ಕಾರದ ಮಾರ್ಗಸೂಚಿ ಅನ್ವಯ ಶಾಲೆಗಳನ್ನು ತೆರೆಯಲಾಗುತ್ತಿದೆ ಹಾಗೇನಾದರೂ ಶಾಲೆಗಳಲ್ಲಿ ಒಂದು ಪ್ರಕರಣ ದಾಖಲಾದರೂ ಸಂಪೂರ್ಣ ಶಾಲೆ ಸ್ಯಾನಿಟೈಜ ಮಾಡಲಾಗುವುದು ಹಾಗೂ ಒಂದು ವಾರಗಳವರೆಗೂ ಶಾಲೆಗಳನ್ನು ಮುಚ್ಚಲಾಗುತ್ತದೆ ಎಂದರು.

 

ಫಲಿತಾಂಶ ನೋಡಿ ಮುಂದುವರೆಯಲಾಗುವುದು.

ಸರ್ಕಾರ ಈಗ ಪ್ರೌಢ ಶಾಲೆಗಳನ್ನು ತೆರೆಯಲು ಸರ್ಕಾರ ಮುಂದಾಗಿದ್ದು ಇದಕ್ಕೆ ಉತ್ತಮ ಫಲಿತಾಂಶ ದೊರಕಿದ್ದೆ ಆದರೆ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಒಂದರಿಂದ ಏಳನೇ ತರಗತಿಯವರೆಗೆ ಶಾಲೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version