ಜನಸ್ನೇಹಿಯಾಗಿ ಆಡಳಿತ ನಡೆಸಿದ ಆತ್ಮತೃಪ್ತಿ ತಮಗಿದೆ _ಮೇಯರ್ ಬಿ.ಜಿ.ಕೃಷ್ಣಪ್ಪ.

ಜನಸ್ನೇಹಿಯಾಗಿ ಆಡಳಿತ ನಡೆಸಿದ ಆತ್ಮತೃಪ್ತಿ ತಮಗಿದೆ _ಮೇಯರ್ ಬಿ.ಜಿ.ಕೃಷ್ಣಪ್ಪ.

 

 

ತುಮಕೂರು_ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್ಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದ್ದು ಇನ್ನು ತನ್ನ ಒಂದುವರೆ ವರ್ಷದ ಮೇಯರ್ ಅವಧಿಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದ ತೃಪ್ತಿ ತಮಗಿದೆ ಎಂದು ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಬಿ.ಜಿ ಕೃಷ್ಣಪ್ಪ ತಿಳಿಸಿದ್ದಾರೆ.

 

 

ಇನ್ನು ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣಾ ಕಣ ರಂಗೆರಿದ್ದು ನಾಳೆ ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಕಣ ಸಿದ್ದಗೊಂಡಿರುವ ಹಿನ್ನೆಲೆಯಲ್ಲಿ ತಮ್ಮ ಅಧಿಕಾರ ಕೊನೆ ಕೊಳ್ಳುವ ಅವಧಿಯ ಮುನ್ನ ದಿನವಾದ ಗುರುವಾರದಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್ಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದ್ದು ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದ ಅವರು ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಹಲವು ಬಡಾವಣೆಯ ಮುಖ್ಯ ರಸ್ತೆಗಳನ್ನ ಸ್ಮಾರ್ಟ್ ಸಿಟಿಯನ್ನು ಒಳಗೊಂಡಂತೆ ಹಲವು ಯೋಚನೆಗಳ ಮೂಲಕ ಹಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು. ಇದರ ಜೊತೆಯಲ್ಲಿ ಪಾರ್ಕ್ಗಳು, ಚರಂಡಿ, ಬೀದಿ ದೀಪ ನಿರ್ವಹಣೆ ಸೇರಿದಂತೆ ಹಲವು ಕೆಲಸಗಳನ್ನು ತುಮಕೂರಿನ ನಾಗರಿಕರಿಗೆ ಅನುಕೂಲವಾಗುವ ದೃಷ್ಟಿ ಹಿನ್ನೆಲೆಯಲ್ಲಿ ಕಾಮಗಾರಿಗಳನ್ನ ನಿರ್ವಹಿಸಲಾಗಿದೆ ಎಂದರು.

 

 

 

ಇನ್ನು ತಮ್ಮ ಅಧಿಕಾರದ ಅವಧಿ ಒಂದುವರೆ ವರ್ಷ ಪೂರ್ಣಗೊಂಡಿದ್ದು ಇನ್ನೂ ನನ್ನ ಅಧಿಕಾರದ ಅವಧಿ ಫೆಬ್ರವರಿ 25 ರಂದು ಕೊನೆಗೊಳ್ಳಬೇಕಿತ್ತು, ಆದರೆ ಅನಿವಾರ್ಯ ಕಾರಣದಿಂದ ಆರು ತಿಂಗಳ ಕಾಲ ಹೆಚ್ಚುವರಿಯಾಗಿ ತನಗೆ ಮೇಯರ್ ಆಗಿ ಮುಂದುವರೆಯಲು ಸದಾ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಎಂದರು.

 

 

 

ಇನ್ನು ನನ್ನ ಒಂದುವರೆ ವರ್ಷದ ಅವಧಿಯಲ್ಲಿ ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್ ಗಳ ಸದಸ್ಯರು ,ಶಾಸಕರು ,ಸಂಸದರು ಅಧಿಕಾರಿಗಳು ಹಾಗೂ ತುಮಕೂರು ನಗರದ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಎಲ್ಲರೂ ಸಹಕರಿಸಿದ್ದು ಎಲ್ಲರಿಗೂ ಧನ್ಯವಾದಗಳು ತಿಳಿಸಿದ್ದಾರೆ.

 

 

ಇನ್ನು ನಾಲ್ಕು ಸಾಮಾನ್ಯ ಸಭೆ ಎರಡು ಬಜೆಟ್ ಸೇರಿದಂತೆ ಹಲವು ಕೆಲಸಗಳನ್ನು ನಿರ್ವಹಿಸಲಾಗಿದ್ದು ತುಮಕೂರು ನಗರದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೆಲಸವನ್ನ ನಿರ್ವಹಿಸಲು ಸಹಕರಿಸಿದ ಎಲ್ಲರಿಗೂ ಚಿರಋಣಿಯಾಗಿರುತ್ತೇನೆ ಎಂದಿದ್ದಾರೆ.

 

 

 

ತಮ್ಮ ಅವಧಿಯಲ್ಲಿ ಸಂಪೂರ್ಣ ಕೆಲಸಗಳನ್ನು ನಿರ್ವಹಿಸದೆ ಇದ್ದರೂ ಉತ್ತಮವಾಗಿ ಒಳ್ಳೆಯ ಆಡಳಿತ ನೀಡಿದ್ದೇನೆ . ಮುಂದಿನ ದಿನದಲ್ಲಿ ಸಹ ಮುಂಬರುವ ನಾಯಕರು ಸಹ ಜನರಿಗೆ ತೊಂದರೆಯಾಗದಂತೆ ಸದಸ್ಯರು ಅಧಿಕಾರಿಗಳು ಸಹ ಜನಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version