ಹಸಿರು ಕ್ರಾಂತಿಗೆ ಪಣತೊಟ್ಟ ಗೃಹರಕ್ಷಕ ಪಡೆ.
ರಾಜ್ಯಾದ್ಯಂತ ಗೃಹರಕ್ಷಕ ದಳದ ವತಿಯಿಂದ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ರಾಜ್ಯಾದ್ಯಂತ ನೆಡುವ ಮೂಲಕ ಹಸಿರುಕ್ರಾಂತಿಗೆ ರಾಜ್ಯ ಗೃಹರಕ್ಷಕ ದಳದ ಪಡೆ ಮುಂದಾಗಿದ್ದು ಇದರ ಮುಂದುವರಿದ ಭಾಗವಾಗಿ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಗೃಹರಕ್ಷಕ ದಳದ ಸಿಬ್ಬಂದಿಗಳು ಇಂದು ಮಧುಗಿರಿ ವ್ಯಾಪ್ತಿಯ ವಜ್ರದ ಹಳ್ಳಿ ಮುಖ್ಯರಸ್ತೆಯಿಂದ ವಿಠಲಾಪುರ ಗ್ರಾಮದವರೆಗೆ ರಸ್ತೆ ಬದಿಯಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೃಹರಕ್ಷಕ ದಳದ ಸಿಬ್ಬಂದಿಗಳು ಇಂದು ಇನ್ನೂರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ .
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಮಧುಗಿರಿ ಗೃಹರಕ್ಷಕದಳದ ಘಟಕಡವ್ಅಧಿಕಾರಿ ಗಳಾದ ನಾಗಭೂಷಣ ಅವರು ಮಾತನಾಡಿ ದೇಶದ ಪ್ರತಿಯೊಬ್ಬ ನಾಗರಿಕನು ಸಹ ಪರಿಸರ ರಕ್ಷಣೆಗೆ ಕಾಳಜಿವಹಿಸಬೇಕು ಅದನ್ನು ಉತ್ತಮ ರೀತಿಯಲ್ಲಿ ಲಾಲನೆ ಪೋಷಣೆ ಮಾಡಿದರೆ ಅದರಿಂದ ನಮಗೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಆದ್ದರಿಂದ ಪ್ರತಿಯೊಬ್ಬ ಗೃಹರಕ್ಷಕ ದಳದ ಸಿಬ್ಬಂದಿಯೂ ಉತ್ತಮ ಕಾರ್ಯಗಳಲ್ಲಿ ಭಾಗವಹಿಸಬೇಕು ಹಸಿರು ಕ್ರಾಂತಿಗೆ ಮುಂದಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗೃಹರಕ್ಷಕದಳದ ಗೃಹ ರಕ್ಷಕರು ಹಾಗೂ ಗೃಹರಕ್ಷಕಿಯರು ಪಾಲ್ಗೊಂಡಿದ್ದರು