ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರಿಗೆ ಬುದ್ಧಿ ಭ್ರಮಣೆ ಆಗಿದೆ _ಎಂ.ಪಿ ರೇಣುಕಾಚಾರ್ಯ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರಿಗೆ ಬುದ್ಧಿ ಭ್ರಮಣೆ ಆಗಿದೆ _ಎಂ.ಪಿ ರೇಣುಕಾಚಾರ್ಯ.

ಮಹಾಲಯ ಅಮಾವಾಸ್ಯೆ ಪ್ರಯುಕ್ತ ಟೆಂಪಲ್ ರನ್ ನಲ್ಲಿ ಬ್ಯುಸಿಯಾಗಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ರವರು ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಕುಟುಂಬ ದೊಂದಿಗೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆ ನಮಿಸಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದರು.

 

ಇದೇ ಸಂದರ್ಭದಲ್ಲಿ ಮಾತನಾಡಿದ ರೇಣುಕಾಚಾರ್ಯ ರವರು ಹೊನ್ನಾಳಿ ಕ್ಷೇತ್ರದ ಜನತೆಯ ಆಶೀರ್ವಾದದಿಂದ ಕಳೆದ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅವಧಿಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದು ಅದರಂತೆ ಬದಲಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ರವರ ಸಂಪುಟದಲ್ಲೂ ಸಹ ರಾಜಕೀಯ ಕಾರ್ಯದರ್ಶಿಯಾಗಿ ಮುಂದುವರೆದೂರುವುದು ಸಂತೋಷವನ್ನುಂಟು ಮಾಡಿದೆ ಅದಕ್ಕಾಗಿ ಪಕ್ಷದ ವರಿಷ್ಠರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

 

 

ಉಪ ಚುನಾವಣೆ ಘೋಷಣೆ ಯಾಗಿದೆ ಗೆಲ್ಲುವುದು ನಮ್ಮ ಗುರಿ.

 

ರಾಜ್ಯದಲ್ಲಿ ಈಗ ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು ಅದಕ್ಕಾಗಿ ನಮ್ಮ ಪಕ್ಷ ತಯಾರಿ ಕೈಗೊಂಡಿದ್ದು ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಗಳ ಸಲಹೆಯಂತೆ ಉಪಚುನಾವಣೆಯಲ್ಲಿ ತಾನು ಸಕ್ರಿಯನಾಗಿ ತೊಡಗಿಸಿ ಕೊಳ್ಳಲ್ ಇದ್ದೇನೆ ಎಂದರು ಇನ್ನು ಎರಡು ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.

 

 

 

ಪಕ್ಷದ ವತಿಯಿಂದ ಎಲ್ಲಾ ಸ್ಥಾನಮಾನ ಸಿಕ್ಕಿದೆ.

 

ಹೊನ್ನಳ್ಳಿ ಕ್ಷೇತ್ರದ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದು ಅದರಲ್ಲಿ 2004, 2008 ಹಾಗೂ 2018ರಲ್ಲಿ ಒಬ್ಬ ಸಾಮಾನ್ಯ ಶಿಕ್ಷಕನ ಮಗನ್ನಾಗಿ ಇದ್ದ ತನ್ನನ್ನು ಪಕ್ಷ ಗುರುತಿಸಿ ಕ್ಯಾಬಿನೆಟ್ ಸಚಿವರನ್ನಾಗಿ ಹಾಗೂ ಮುಕ್ಯಮಂತಿಗಳ ರಾಜಕೀಯ ಕಾರ್ಯದರ್ಶಿಗಳನ್ನಾಗಿ ಮಾಡಿರುವುದು ಸಂತೋಷ ತಂದಿದೆ ಇದರಲ್ಲಿ ಯಾವುದೇ ಅತೃಪ್ತಿ ಯಾವುದು ಇಲ್ಲ ಎಂದರು.

 

 

ಸಂಕಷ್ಟ ಕಾಲದಲ್ಲಿ ಎದೆಕೊಟ್ಟು ನಿಲ್ಲುವುದು ರಾಷ್ಟ್ರೀಯ ಸ್ವಯಂಸೇವಕ ಸಂಘ

 

ಬಿಜೆಪಿ ಹಾಗೂ ಸಂಘ ಪರಿವಾರ ನಮ್ಮ ದೇಶದ ಸಂಸ್ಕೃತಿ ಉಳಿಸುವ ಪ್ರಯತ್ನ ಮಾಡುತ್ತಿದ್ದು ಆರೆಸ್ಸೆಸ್ ಹಾಗೂ ಸಂಘ ಪರಿವಾರ ದೇಶಕ್ಕೆ ಹಾಗೂ ನಾಡಿಗೆ ವಿಪತ್ತು ಬಂದಾಗ ಎದೆ ಕೊಟ್ಟು ನಿಲ್ಲುತ್ತದೆ ಎಂದರು.

 

ಆರೆಸ್ಸೆಸ್ ಲಾಬಿ ಮಾಡಲ್ಲ

 

ಇನ್ನು ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ರವರು ಐಎಎಸ್ ಐಪಿಎಸ್ ಮಾಡಲು ಆರೆಸ್ಸೆಸ್ ಲಾಬಿ ನಡೆಸುತ್ತದೆ ಎಂದು ನೀಡಿರುವ ಹೇಳಿಕೆ ಖಂಡನೀಯ

 

ಐಎಎಸ್ ಐಪಿಎಸ್ ಮಾಡಲು ಅಭ್ಯರ್ಥಿಗಳು ಸಾಕಷ್ಟು ಶ್ರಮ ಹಾಕಿ ಓದಿರುತ್ತಾರೆ ಅಭ್ಯರ್ಥಿಗಳ ಆಯ್ಕೆ ಅವರು ಪಡೆದಿರುವ ಅಂಕಗಳ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ ಇದರಲ್ಲಿ ಅರ್ ಎಸ್ ಎಸ್ ಎಂದು ಲಾಬಿ ಮಾಡಲ್ಲ ಎಂದರು.

 

 

ಕುಮಾರಸ್ವಾಮಿ ರವರಿಗೆ ಬುದ್ಧಿ ಭ್ರಮಣೆಯಾಗಿದೆ.

 

ಎಲ್ಲೋ ಒಂದು ಕಡೆ ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿ ಆಯ್ಕೆಯಾಗಿದ್ದರು ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಗಳು ಆದರು ನಂತರ 2018ರಲ್ಲಿ ಬಿಎಸ್ವೈ ಸರ್ಕಾರ ಅಧಿಕಾರಕ್ಕೆ ಬರುತ್ತೆ ಅನ್ನೋ ಒಂದೇ ಒಂದು ಕಾರಣದಿಂದ ಕಾಂಗ್ರೆಸ್ನವರು ದೇವೇಗೌಡರ ಕಾಲಿಗೆ ಬಿದ್ದು ಕುಮಾರಸ್ವಾಮಿಗೆ ಅಧಿಕಾರ ಕೊಟ್ಟರು.

 

ಈಗ ಅಧಿಕಾರ ಇಲ್ಲ ಎಚ್ ಡಿ ಕುಮಾರಸ್ವಾಮಿ ಅವರು ನೀರಿನಲ್ಲಿದ್ದ ಮೀನು ಆಚೆ ಬಂದ ಹಾಗೆ ಆಗಿದ್ದು ಹತಾಶೆ ಆಗಿದೆ ಅದರಿಂದ ಎಚ್ ಡಿ ಕುಮಾರಸ್ವಾಮಿ ರವರಿಗೆ ಹತಾಶೆ ಹಾಗೂ ಬುದ್ಧಿಭ್ರಮಣೆ ಕಾಡುತ್ತಿದೆ ಎಂದರು.

 

ಹಾಗಾಗಿ ಹೆಚ್ ಡಿ ಕುಮಾರಸ್ವಾಮಿ ರವರು ಹುಚ್ಚುಹುಚ್ಚಾಗಿ ಅರ್ .ಎಸ್.ಎಸ್ ಬಗ್ಗೆ ನೀಡುತ್ತಿರುವ ಹೇಳಿಕೆಯನ್ನು ಖಂಡಿಸುವುದಾಗಿ ತಿಳಿಸಿದರು ಹಾಗಾಗಿ ಆರೆಸ್ಸೆಸ್ ಹಾಗೂ ಬಿಜೆಪಿ ಪಕ್ಷದ ಬಗ್ಗೆ ಕುಮಾರಸ್ವಾಮಿ ರವರು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version