ಎಂ.ಎಲ್. ಎ ಟಿಕೆಟ್ ಆಕಾಂಕ್ಷಿ ಗೋವಿಂದರಾಜುಗೆ ಟಾಂಗ್ ಕೊಟ್ಟ ಜೆಡಿಎಸ್ ಮುಖಂಡ ನರಸೇಗೌಡರು. 

ಎಂ.ಎಲ್. ಎ ಟಿಕೆಟ್ ಆಕಾಂಕ್ಷಿ ಗೋವಿಂದರಾಜುರವರಿಗೆ ಟಾಂಗ್ ಕೊಟ್ಟ ಜೆಡಿಎಸ್ ಮುಖಂಡ ನರಸೇಗೌಡರು. 

 

 

ತುಮಕೂರು_ಇನ್ನು ಪಕ್ಷದ ಮುಖಂಡರುಗಳು ಹೇಳಿಕೆಗಳನ್ನು ನೀಡುವಾಗ ಎಚ್ಚರದಿಂದರಬೇಕು ಇನ್ನು ತಾವು ನೀಡುವ ಹೇಳಿಕೆಗಳು ಮುಖಂಡರಿಗೆ, ಕಾರ್ಯಕರ್ತರಿಗೆ ಪಕ್ಷಕ್ಕೆ ಮುಜುಗರ ತರಬಾರದು ಎಂದು ತುಮಕೂರು ನಗರ ಜೆಡಿಎಸ್ ಮುಖಂಡ ನರಸೇಗೌಡರು ತಿಳಿಸಿದ್ದಾರೆ.

 

 

 

ಇನ್ನು ತುಮಕೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಇನ್ನು ಜೆಡಿಎಸ್ ಪಕ್ಷಕ್ಕಾಗಿ ತಳಮಟ್ಟದ ಕಾರ್ಯಕರ್ತರು ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿ ಪಕ್ಷವನ್ನು ಮುನ್ನಡೆಸಿಕೊಂಡು ಬಂದಿದ್ದು ಪಕ್ಷದ ಬೆಳವಣಿಗೆಗೆ ಸಾಕಷ್ಟು ಹಿರಿಯ ನಾಯಕರು,ಕಿರಿಯ ನಾಯಕರು, ಕಾರ್ಯಕರ್ತರು, ಮುಖಂಡರುಗಳು ಪಕ್ಷಕ್ಕಾಗಿ ಹಗಲಿರುಳು ಶ್ರಮ ಹಾಕಿದ್ದಾರೆ ಅಂತಹ ಮುಖಂಡರನ್ನು ಪಕ್ಷದ ಯಾವುದೇ ನಾಯಕರು ಕಡೆಗಣಿಸಬಾರದು ಎಂದರು.

 

 

ಇನ್ನು ತುಮಕೂರು ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ವತಿಯಿಂದ ತಾನು ಕೂಡ ಆಕಾಂಕ್ಷಿಯಾಗಿದ್ದು ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ತಲೆಬಾಗುತ್ತೇನೆ ಪಕ್ಷಕ್ಕೆ ದ್ರೋಹ ಬಗೆಯುವ ಯಾವ ಕೆಲಸವನ್ನು ಸಹ ನಾನು ಮಾಡುವುದಿಲ್ಲ ಇನ್ನು ಜೆಡಿಎಸ್ ಪಕ್ಷಕ್ಕಾಗಿ ಇಪ್ಪತ್ತು ವರ್ಷಗಳ ಕಾಲ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದು ತಾನು ಕೂಡ ಈ ಬಾರಿಯ ತುಮಕೂರು ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ವತಿಯಿಂದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದ ಅವರು

 

 

ಇನ್ನು ಪಕ್ಷದ ಮುಖಂಡರು ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಗೋವಿಂದರಾಜುರವರ  ಹೇಳಿಕೆಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೆಲ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ಇನ್ನು ತುಮಕೂರು ನಗರದಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ ಸಾಕಷ್ಟು ಮುಖಂಡರು ಕಾರ್ಯಕರ್ತರು ಇದ್ದಾರೆ ಇನ್ನು ಪಕ್ಷಕ್ಕೆ ಸಂಬಂಧಿಸಿದಂತೆ ಕೆಲವರು ಏಕಪಕ್ಷೀಯವಾಗಿ ಕೆಲವು ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಹೇಳಿಕೆ ಕೊಟ್ಟಿದ್ದು ಇಂತಹ ಹೇಳಿಕೆಗಳನ್ನು ಕೊಡುವುದು ಸೂಕ್ತವಲ್ಲ ಇನ್ನೂ ತಾನು ಕೂಡ ಸ್ನೇಹಿತನಾಗಿ ಪಕ್ಷದ ಮುಖಂಡನಾಗಿ ತಿಳಿಸುವುದು ಏನೆಂದರೆ ತಮ್ಮ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರತರುವಂತೆ ಆಗಬಾರದು ಎಂದು ಹೇಳುವ ಮೂಲಕ ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಗೋವಿಂದರಾಜುರವರಿಗೆ ನೇರ ಟಾಂಗ್ ನೀಡಿದ್ದಾರೆ.

 

 

ಇನ್ನು ಚುನಾವಣೆ ಸಮೀಪಿಸುತ್ತಿದ್ದಂತೆ ತಾವು ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಕಳೆದ ನಾಲ್ಕು ವರ್ಷಗಳಿಂದ ತಾವು ಎಲ್ಲಿದ್ರಿ… ಇನ್ನು ನಗರದ ಜನರು ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಿದರು ಅಂತಹ ಸಮಯದಲ್ಲಿ ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡರು ಸಾರ್ವಜನಿಕರಿಗೆ ಸಾಕಷ್ಟು ಸಮಾಜ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಸಾರ್ವಜನಿಕರ ಸಹಾಯಕ್ಕೆ ಮುಂದಾದರು ಅಂತಹ ಸಮಯದಲ್ಲಿ ತಾವು ಎಲ್ಲಿದ್ದೀರಿ ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಈಗ ಕಾಣಿಸಿಕೊಳ್ಳುತ್ತಿರುವ ಬಗ್ಗೆ ತುಮಕೂರು ನಗರದ ಜನತೆಗೆ ಚೆನ್ನಾಗಿ ಗೊತ್ತಿದೆ ಇನ್ನು ತಾವೇ ಪಕ್ಷದ ಆಕಾಂಕ್ಷಿಗಳಿಗೆ ಮೇ ತಿಂಗಳ ಗಡುವು ನೀಡಿರುವ ಬಗ್ಗೆ ಕೆಲ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾದ ಬಗ್ಗೆ ತಾವು ಕೂಡ ಗಮನಿಸಿದ್ದೇವೆ ಇನ್ನು ಆಕಾಂಕ್ಷಿಗಳಿಗೆ ತಾವೇ ಆಹ್ವಾನ ನೀಡಿ ತಮ್ಮನ್ನು ಭೇಟಿ ಮಾಡಿ ಎನ್ನುವ ಹೇಳಿಕೆಗಳನ್ನು ನೀಡಿದ್ದೀರಿ ಇಂತಹ ಹೇಳಿಕೆಗಳು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಬೇಸರ ತರುತ್ತಿದೆ ಇಂತಹ ನಾಯಕರ ಬಗ್ಗೆ ತುಮಕೂರು ನಗರದ ಎಲ್ಲರಿಗೂ ಗೊತ್ತಿದ್ದು ಇಂತಹ ಹೇಳಿಕೆಗಳನ್ನು ನೀಡುವ ಬದಲು ಪಕ್ಷಕ್ಕಾಗಿ ಎಲ್ಲರೂ ಸೇರಿ ದುಡಿಯೋಣ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿ ಪಕ್ಷಕ್ಕಾಗಿ ಕೆಲಸ ಮಾಡೋಣ ಇನ್ನು ಮುಂಬರುವ ಚುನಾವಣೆಗೆ ಇನ್ನೂ ಒಂದು ವರ್ಷಗಳ ಕಾಲ ಕಾಲಾವಕಾಶವಿದ್ದು ಪಕ್ಷದ ವತಿಯಿಂದ ಹಲವರು ಆಕಾಂಕ್ಷಿಗಳಿದ್ದಾರೆ ಚುನಾವಣೆ ಮುನ್ನ ಪಕ್ಷವನ್ನು ಸಂಘಟನೆ ಮಾಡಿ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗೋಣ ಎಂದು ಜೆಡಿಎಸ್ ಮುಖಂಡ ಗೋವಿಂದರಾಜುರವರಿಗೆ ರವರಿಗೆ ಎಚ್ಚರಿಕೆ ನೀಡುವ ಮೂಲಕ ತಾನು ಕೂಡ ಈ ಬಾರಿಯ ತುಮಕೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ ಎಂದರೆ ತಪ್ಪಾಗಲಾರದು.

 

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version