ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಸರ್ಕಾರ ಗಮನ ಹರಿಸಲಿ _ ಸಿದ್ದಲಿಂಗ ಶ್ರೀ.

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಸರ್ಕಾರ ಗಮನ ಹರಿಸಲಿ _ ಸಿದ್ದಲಿಂಗ ಶ್ರೀ.

 

 

ತುಮಕೂರು – ಅತಿಥಿ ಉಪನ್ಯಾಸಕರ ನ್ಯಾಯ ಸಮ್ಮತ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ಗಮನ ಹರಿಸಲಿ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿರುವ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ಕನಿಷ್ಠ ವೇತನಕ್ಕೆ ಗರಿಷ್ಠ ಕೆಲಸ ನಿರ್ವಹಿಸುವ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದರು.

 

 

 

 

 

ಕಳೆದ ಹಲವು ದಿನಗಳಿಂದ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅನಿರ್ದಿಷ್ಟಅವಧಿ ಮುಷ್ಕರ ನಡೆಸುತ್ತಿದ್ದು ಸರ್ಕಾರದ ಗಮನ ಸೆಳೆಯಲು ರಾಜ್ಯ ಅತಿಥಿ ಉಪನ್ಯಾಸಕರ ಸಂಘದಿಂದ ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿನ ವರೆಗೂ ಬೃಹತ್ ಪಾದಯಾತ್ರೆ ಕೈಗೊಂಡಿದ್ದು ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸಿದ್ಧಲಿಂಗ ಶ್ರೀಗಳು ಇದುವರೆಗೂ ಕೆಲಸ ನಿರ್ವಹಿಸಿರುವ ಹಲವರು ವಯೋ ನಿವೃತ್ತಿ ಹಂಚಿನಲ್ಲಿ ಇದ್ದಾರೆ ಇದುವರೆಗೂ ಶಿಕ್ಷಣಕ್ಕಾಗಿ ಶಿಕ್ಷಣ ಕ್ಷೇತ್ರಕ್ಕಾಗಿ ದುಡಿದಿರುವ ಹಲವು ಅತಿಥಿ ಉಪನ್ಯಾಸಕರು ನ್ಯಾಯಯುತವಾದ ಭರವಸೆ ಇಟ್ಟುಕೊಂಡು ಬೃಹತ್ ಪಾದಯಾತ್ರೆ ಕೈಗೊಂಡಿದ್ದು ಅವರ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದರು.

 

 

 

ಹಲವಾರು ವರ್ಷಗಳಿಂದ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗಾಗ ಸರ್ಕಾರದ ಗಮನ ಸೆಳೆಯುತ್ತಲೇ ಇದ್ದಾರೆ ಆದರೆ ಈ ಬಾರಿ ವಿಶೇಷವಾಗಿ ಪಾದಯಾತ್ರೆ ಮೂಲಕ ಸರ್ಕಾರ ದ ಗಮನ ಸೆಳೆಯಲು ಮುಂದಾಗಿದ್ದು ಇನ್ನು ದೇಶಕ್ಕೆ ಆರೋಗ್ಯ, ಶಿಕ್ಷಣ, ಕೃಷಿ ಈ ಮೂರು ಅಂಶಗಳು ದೇಶದ ಅಭಿವೃದ್ಧಿಗೆ ಬಹಳ ಮುಖ್ಯವಾದವು ಹಾಗಾಗಿ ಶಿಕ್ಷಣ ಆರೋಗ್ಯ ಕೃಷಿ ಚೆನ್ನಾಗಿದ್ದರೆ ದೇಶ ಸಮೃದ್ಧಿ ಆಗಿರುತ್ತದೆ ಎಂದು ತಿಳಿಸಿದ ಅವರು ಅತಿಥಿ ಉಪನ್ಯಾಸಕರ ಬೇಡಿಕೆ ಸರ್ಕಾರದ ಗಮನಕ್ಕೂ ಬಂದಿದ್ದು ಸರ್ಕಾರ ಸಹ ಅತಿಥಿ ಉಪನ್ಯಾಸಕರ ಪಾದಯಾತ್ರೆಗೆ ಹಾಗೂ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ತಮಗೂ ಇದೆ ಎಂದರು.

 

 

 

ಸರ್ಕಾರ ಒಂದು ವರ್ಷದ ಅವಧಿಗೆ ಅತಿಥಿ ಉಪನ್ಯಾಸಕರನ್ನ ನೇಮಿಸಿಕೊಂಡು ಕೇವಲ ಎಂಟು ತಿಂಗಳ ಅವರಿಗೆ ಸಂಬಳ ನೀಡುತ್ತಿರುವುದು ಸರ್ಕಾರದ ಗಮನಕ್ಕೂ ಸಹ ಬಂದಿದೆ ಇನ್ನು ರಾಜ್ಯದ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ಸಹ ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳಿಗೆ ಅಂದು ಪತ್ರ ಬರೆದು ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಈಡೇರಿಸಬೇಕು ಎಂದು ಕಾರವಾಗಿ ಪತ್ರವನ್ನು ಬರೆದು ಸರ್ಕಾರದ ಗಮನ ಸೆಳೆದಿದ್ದರು ಹಾಗಾಗಿ ಈ ಬಾರಿ ಸಿದ್ದರಾಮಯ್ಯ ರವರ ನೇತೃತ್ವದ ಸರ್ಕಾರವೇ ಆಡಳಿತ ನಡೆಸುತ್ತಿದ್ದು ಸಿದ್ದರಾಮಯ್ಯನವರು ಸಹ ಅತಿಥಿ ಉಪನ್ಯಾಸಕರ ನ್ಯಾಯ ಸಮತ ಬೇಡಿಕೆಗಳ ಈಡೇರಿಕೆಗಾಗಿ ಸಹಕರಿಸಲಿದ್ದಾರೆ ಎನ್ನುವ ಭರವಸೆ ತಮಗೂ ಇದೇ ಎಂದರು.

 

 

ಇನ್ನು ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಅತ್ಯಮೂಲ್ಯವಾದದ್ದು ಇನ್ನು ಸೇವಾ ಭದ್ರತೆ ಇಲ್ಲದೆ ಕೆಲಸ ನಿರ್ವಹಿಸಲು ಹೇಗೆ ಸಾಧ್ಯ ಕಾರಣ ಅತಿಥಿ ಉಪನ್ಯಾಸಕಾರು ಕೇವಲ ತಮಗಾಗಿ ಸೇವಾ ಭದ್ರತೆ ಕೇಳುತ್ತಿಲ್ಲ ಇನ್ನು ತಮ್ಮ ಕುಟುಂಬವನ್ನು ಹೊಂದಿರುವ ಕಾರಣ ಸೇವಾ ಭದ್ರತೆ ಕೇಳುತ್ತಿದ್ದಾರೆ ಅದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

 

 

 

 

ಇನ್ನು ಇದೇ ಸಂದರ್ಭದಲ್ಲಿ ಸಿದ್ದಲಿಂಗ ಶ್ರೀಗಳು ಅತಿಥಿ ಉಪನ್ಯಾಸಕರ ಪಾದಯಾತ್ರೆಗೆ ಹಸಿರು ಬಾವುಟ ತೋರುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

 

 

 

 

ಇದೇ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಸಂಘ RUPSA ಅಧ್ಯಕ್ಷ ಲೋಕೇಶ್ ತಾಳಿ ಕಟ್ಟೆ, ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತ ಗೌಡ ಕಾನಿಮಠ, ತುಮಕೂರು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾಕ್ಟರ್ ಕೆ.ಎಚ್ ಧರ್ಮವೀರ್, ಶಂಕರ್ ಹಾರೋಗೆರೆ ಸೇರಿದಂತೆ ಸಂಘದ ಪದಾಧಿಕಾರಿಗಳು ಸೇರಿದಂತೆ ರಾಜ್ಯದ ವಿವಿಧಡೆಯಿಂದ ಆಗಮಿಸಿದ ಅತಿಥಿ ಉಪನ್ಯಾಸಕರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.

 

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version