ರಾಷ್ಟಪತಿಗಳ ವಿಶೇಷ ಸೇವಾ ಪದಕ ಪಡೆದ ಪೊಲೀಸ್ ಪೇದೆ ಮುನಾವರ್ ಪಾಷ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಮುಖರು

ರಾಷ್ಟಪತಿಗಳ ವಿಶೇಷ ಸೇವಾ ಪದಕ ಪಡೆದ ಪೊಲೀಸ್ ಪೇದೆ ಮುನಾವರ್ ಪಾಷ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಮುಖರು

 

ತುಮಕೂರು:ಪೊಲೀಸ್ ಇಲಾಖೆಯಲ್ಲಿ ತಳಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೆಚ್ಚು ಶ್ರಮಪಟ್ಟು ಕೆಲಸ ಮಾಡಿದಾಗ ಮಾತ್ರ ಹಿರಿಯ ಅಧಿಕಾರಿಗಳಿಗೆ ಹೆಸರು, ಕೀರ್ತಿ ಲಭಿಸಲು ಸಾಧ್ಯ ಎಂದು ತುಮಕೂರು ನಗರ ಡಿವೈಎಸ್ಪಿ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.

 

ನಗರದ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಅವರ ಗೃಹಕಚೇರಿಯಲ್ಲಿ ಇತ್ತೀಚಗೆ ತಮ್ಮ ಸೇವೆಗಾಗಿ ರಾಷ್ಟಪತಿಗಳ ವಿಶೇಷ ಸೇವಾ ಪದಕ ಪಡೆದ ಪೊಲೀಸ್ ಪೇದೆ ಮುನಾವರ್ ಪಾಷ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ತಮ್ಮ ನಿಸ್ವಾರ್ಥ ಸೇವೆಯಿಂದ ಹಿರಿಯ ಅಧಿಕಾರಿಗಳಿಗೆ ಹೆಸರು ತಂದು ಕೊಡುತ್ತಿದ್ದ ಮುನಾವರ್ ಪಾಷಾ ಅವರಿಗೆ ರಾಷ್ಟçಪತಿಗಳ ಪದಕ ಲಭಿಸಿರುವುದು ಸಂತೋಷದ ವಿಚಾರ ಎಂದರು.

 

 

ಮುನಾವರ್ ಪಾಷ, ನಾನು ಒಂದೇ ಜಿಲ್ಲೆಯಲ್ಲಿ ಕೆಲಸ ಮಾಡಿದ್ದರೂ ನೇರವಾಗಿ ನನ್ನೊಂದಿಗೆ ಯಾವುದೇ ಕ್ರೈಂ ಕೇಸನಲ್ಲಿ ಭಾಗಿಯಾಗಿಲ್ಲ.ಆದರೆ ಹಿರಿಯ ಅಧಿಕಾರಿಗಳಾದ ಕಲ್ಲೇಶಪ್ಪ, ಟಿ.ಆರ್.ಕೃಷ್ಣಮೂರ್ತಿ,ರಾಘವೇಂದ್ರ ಅವರೊಂದಿಗೆ ಹಲವಾರು ಸೂಕ್ಷ್ಮ ಕೇಸುಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ.ಹೊರರಾಜ್ಯಗಳಿಗೂ ಹೋಗಿ ಸರಗಳ್ಳರು, ಎಟಿಎಂ ಕಳ್ಳರನ್ನು ಹಿಡಿದು ತರುವಲ್ಲಿ ಯಶಸ್ವಿಯಾಗಿದ್ದಾರೆ.ರಾಷ್ಟçಪತಿ ಪದಕ ಲಭಿಸಿರುವುದು ಅವರ ಇಷ್ಟು ವರ್ಷದ ಅವಿರತ ಸೇವೆ ಸಿಕ್ಕ ಪುರಸ್ಕಾರ. ಹಾಡುಗಾರನಾಗಿ, ಸರ್ವಧರ್ಮದ ಗೆಳೆಯರನ್ನು ಹೊಂದಿರುವ ಇವರಿಗೆ ಮುಂದೆಯೂ ಇಂತಹ ಹಲವಾರು ಪುರಸ್ಕಾರಗಳು ಲಭಿಸುವಂತಾಗಲಿದೆ ಎಂದು ಡಿವೈಎಸ್ಪಿ ಶುಭ ಹಾರೈಸಿದರು.

ಮತ್ತೊಬ್ಬ ಡಿವೈಎಸ್ಪಿ ರಾಘವೇಂದ್ರ ಅವರು ಮಾತನಾಡಿ, ಇಂದು ರಾಷ್ಟçಪತಿಗಳ ಪದಕ ಪಡೆದಿರುವ ಮುನಾವರ್ ಪಾಷ, ನಮ್ಮ ಜೊತೆಗೆ ಹಲವು ಕೇಸುಗಳಲ್ಲಿ ಭಾಗಿಯಾಗಿದ್ದಾರೆ.ನಾನು ಹೊಸದಾಗಿ ಸಬ್ ಇನ್ಸ್ಪೆಕ್ಟರ್ ಆಗಿ ಕಾತ್ಯಾಂದ್ರಗೆ ಬಂದಾಗ ಹಿರಿಯರಾದ ಕಲ್ಲೇಶಪ್ಪ ಅವರು ತಯಾರು ಮಾಡಿದ್ದ ಕ್ರೈಂ ತಂಡದಲ್ಲಿ ಇವರು ಕೆಲಸ ಮಾಡುತ್ತಿದ್ದರು.ಜೈಲಿನಿಂದ ಕೈದಿಗಳು ತಪ್ಪಿಸಿಕೊಂಡ ಪ್ರಕರಣ, ಮಕ್ಕಳ ಕಿಡ್ನಾಪ್, ಸರಗಳ್ಳತನ, ಎಟಿಎಂ ಕಳವು ಸೇರಿದಂತೆ ಹಲವು ಪ್ರಕರಣಗಳಲ್ಲಿ ಮಹಾರಾಷ್ಟçದ ಸಾಂಗ್ಲಿ,ಹರ್ಯಾಣ, ಮದ್ಯಪ್ರದೇಶ ಇನ್ನೂ ಮುಂತಾದ ಕಡೆಗಳಿಗೆ ಹೋಗಿ ಆರೋಪಿಗಳನ್ನು ಹಿಡಿದು ತಂದಿದ್ದೇವೆ. ವೃದ್ದ ದಂಪತಿಗಳ ಕೊಲೆಗೆ ಸುಪಾರಿ ಪಡೆದಿದ್ದ, ಬೆಂಗಳೂರಿನ ಶಿವಾಜಿ ನಗರದ ರೌಡಿಶೀಟರ್‌ಗಳನ್ನು ಹಿಡಿಯುವ ಸಂದರ್ಭದಲ್ಲಿ ತಮಗಾದ ಗಾಯವನ್ನು ಲಕ್ಕಿಸದೆ ಆರೋಪಿಗಳನ್ನು ಹಿಡಿದಿದ್ದಾರೆ. ಅವರಿಗೆ ಅರ್ಹವಾಗಿಯೇ ರಾಷ್ಟçಪತಿಗಳ ಪದಕ ದೊರೆತಿದೆ. ಇದು ನನಗೆ ಹೆಚ್ಚು ಖುಸಿಕೊಟ್ಟಿದೆ ಎಂದರು.

 

ಮಾಜಿ ಶಾಸಕ ಎಸ್.ಷಪಿ ಅಹಮದ್ ಮಾತನಾಡಿ, ಪೊಲೀಸ ಇಲಾಖೆಯಲ್ಲಿ ಪದಕ ಪಡೆಯುವುದೆಂದರೆ ಹುಡುಗಾಟದ ಮಾತಲ್ಲ.ಅದಕ್ಕೆ ಬೆಲೆ ಕಟ್ಟಲಾಗದು. ಸಮಾಜದ ಎಲ್ಲಾ ವರ್ಗಗಳ ಜೊತೆ ಸ್ನೇಹ, ವಿಶ್ವಾಸದಿಂದ ಇದ್ದಿದ್ದೇ ಅವರು ಹೆಚ್ಚು ಕ್ರೈಂಗಳನ್ನು ಪತ್ತೆ ಹೆಚ್ಚಲು ಸಹಕಾರಿಯಾಗಿದೆ ಎಂದರು.

 

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಡಾ.ರಫೀಕ್ ಅಹಮದ್,ಪೊಲೀಸ್ ಇಲಾಖೆಯಲ್ಲಿ ಪದಕ ಪಡೆಯುವುದು ಸುಲಭದ ಮಾತಲ್ಲ. ದಕ್ಷತೆ, ಪ್ರಾಮಾಣಿಕತೆಯ ಜೊತೆಗೆ, ನಿರಂತರ ಪರಿಶ್ರಮ ಅಗತ್ಯ. ತಮ್ಮ ವೃತ್ತಿ ಜೀವನದಲ್ಲಿ ಮುನಾವರ್ ಪಾಷ ಎಂದಿಗೂ ಹೆಸರು ಕೆಡಿಸಿಕೊಂಡವರಲ್ಲ. ನಿರಂತರವಾಗಿ ಪೊಲೀಸ್ ಇಲಾಖೆಗೆ ಬೆನ್ನೆಲುಬಾಘಿ ಕೆಲಸ ಮಾಡಿದ್ದಾರೆ. ಇವರನ್ನು ಇಂದು ಸನ್ಮಾನಿಸುವ ಮೂಲಕ ಹೊಸದಾಗಿ ಇಲಾಖೆಗೆ ಬರುವವರಿಗೂ ಪದಕಗಳನ್ನು ಪಡೆಯುವ ಸ್ಪೂರ್ತಿ ನೀಡುವುದೇ ಈ ಅಭಿನಂದನೆಯ ಹಿಂದಿನ ಉದ್ದೇಶ ಎಂದರು.

 

ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಾಷ್ಟçಪತಿ ಪದಕ ವಿಜೇತ ಪೊಲೀಸ್ ಪೇದೆ ಮುನಾವರ್ ಪಾಷ, ನಾನು ಮೂಲತಃ ಕಬ್ಬಡಿ ಆಟಗಾರ. ಕಬ್ಬಡಿಯನ್ನು ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂಬ ಮಹಾದಾಸೆ ಹೊಂದಿದೆ. ಕೈಗೂಡದೆ ಇದ್ದಾಗ ಪೊಲೀಸ್ ಇಲಾಖೆಗೆ ಸೇರಿದೆ. ನನ್ನ ಆಟವನ್ನು ಗಮನಿಸಿದ ನನ್ನ ಗುರುಗಳಾದ ಓ.ಬಿ.ಕಲ್ಲೇಶಪ್ಪ ನನ್ನ ಕ್ರೈಂ ತಂಡಕ್ಕೆ ಸೇರಿಕೊಂಡರು. ಅಂದಿನಿoದ ಇಲಾಖೆಗೆ ನಿಷ್ಠನಾಗಿ ಕೆಲಸ ಮಾಡುತ್ತಿದ್ದೇನೆ.ಹಿರಿಯ ಅಧಿಕಾರಿಗಳಾದ ರಾಘವೇಂದ್ರ ಅವರ ಮಾರ್ಗದರ್ಶನದಂತೆ ರಾಷ್ಟçಪತಿ ಪದಕಕ್ಕೆ ಅರ್ಜಿ ಸಲ್ಲಿಸಿ, ಡಿವೈಎಸ್ಪಿ ಶ್ರೀನಿವಾಸ್ ಅವರ ಶಿಫಾರಸ್ಸು ಪಡೆದು ಕಳುಹಿಸಿದ್ದೇ. ಎಲ್ಲಾ ಅಧಿಕಾರಿಗಳ ಹಾರೈಕೆ ನನಗೆ ಪದಕ ಲಭಿಸಿದೆ. ಇದಕ್ಕಾಗಿ ಇಲಾಖೆಗೆ ಹಾಗೂ ಭಾರತ ಸರಕಾರಕ್ಕೆ ಕೃತ್ಯಜ್ಷತೆ ಸಲ್ಲಿಸುವುದಾಗಿ ತಿಳಿಸಿದರು.

 

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಹಾಗೂ ವಕೀಲ ನರೇಂದ್ರಬಾಬು,ಹೆಚ್.ಎಂ.ಎಸ್.ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಅಪ್ತಾಬ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೆಹಬೂಬ್ ಪಾಷ, ಆಟೋರಾಜು, ಪಾಲಿಕೆ ಸದಸ್ಯರಾದ ಕುಮಾರ್.ಜೆ ಸೈಯದ್ ನಯಾಜ್, ಮಹೇಶ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷರುಗಳು, ಮುಖಂಡರಾದ ಮೊಹಮ್ಮದ್ ಪೀರ್ ರವರು, ಜಿಯಾ ರವರು, ಸದಸ್ಯರುಗಳು, ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿ, ರಾಷ್ಟçಪತಿ ಪದಕ ವಿಜೇತ ಮುನಾವರ್ ಪಾಷ ಅವರನ್ನು ಅಭಿನಂದಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version