ಬೆಂಗಳೂರಿನಿಂದ ಜೈಪುರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ವಿಮಾನದಲ್ಲಿ ಹೆಣ್ಣು ಮಗು ಜನನವಾಗಿದೆ. ಬೆಳಿಗ್ಗೆ 5:40 ಕ್ಕೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೈಪುರಕ್ಕೆ ತೆರಳಿದ ಇಂಡಿಗೋ 6 ಇ 469 ದಲ್ಲಿ ಮಾರ್ಗ ಮಧ್ಯದಲ್ಲಿ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ, ಈ ಸಮಯದಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರಾದ ವೈದ್ಯೆ ಡಾ.ಸುಭಾನ್ ನಜಿರ್ ಮತ್ತು
ವಿಮಾನದ ಸಿಬ್ಬಂದಿ ಮತ್ತು ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ, ವಿಮಾನದಲ್ಲಿಯೇ ಮಹಿಳೆಗೆ ಹೆಣ್ಣು ಮಗು ಜನನವಾಗಿದೆ ತಾಯಿ ಮಗು ಆರೋಗ್ಯವಾಗಿದೆ. ಜೈಪುರದಲ್ಲಿ ವಿಮಾನ ಲ್ಯಾಂಡ್ ಆದ ತಕ್ಷಣವೇ ಆಂಬ್ಯುಲೆನ್ಸ್ ನಲ್ಲಿ ತಾಯಿ ಮಗುವನ್ನು ಆಸ್ಪತ್ರೆಗೆ ಕಳಿಸಲಾಗಿತು.
ಕೆಲ ತಿಂಗಳ ಹಿಂದೆ ದಿಲ್ಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲೂ ಅವಧಿಪೂರ್ವ ಸುರಕ್ಷಿತ ಹೆರಿಗೆ ಆಗಿತ್ತು. ಜೈಪುರ ವಿಮಾನದಲ್ಲಿ ಸುರಕ್ಷಿತ ಹೆರಿಗೆ ಮಾಡಿಸಿದ ವೈದ್ಯೆ ಡಾ.ಸುಭಾನ್ ನಜಿರ್ ಮತ್ತು ವಿಮಾನದ ಸಿಬ್ಬಂದಿಯನ್ನ ಗೌರವಿಸಲಾಯಿತು.
ಗುರುಮೂರ್ತಿ ಬೂದಿಗೆರೆ
8861100990