ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ಖಂಡಿಸಿದ KUWJ ತುಮಕೂರು ಜಿಲ್ಲಾ ಘಟಕ 

ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ಖಂಡಿಸಿದ KUWJ ತುಮಕೂರು ಜಿಲ್ಲಾ ಘಟಕ 

 

 

ತುಮಕೂರು – ಪತ್ರಿಕೆ ಹಾಗೂ ಮಾಧ್ಯಮ ಬಳಸಿ ಕೊಂಡು ಸಂಸದರಾದ ಅನಂತ್ ಕುಮಾರ್ ಹೆಗಡೆ ರವರು ಇಂದು ಮಾದ್ಯಮಗಳನ್ನ ನಾಯಿಗೆ ಹೋಲಿಸಿರುವುದು ನಿಜಕ್ಕೂ ಖಂಡನೆಯ ಇನ್ನು ಪತ್ರಿಕೆ ಹಾಗೂ ಮಾಧ್ಯಮ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಆದರೆ ಇಂದು ಅಂತಹ ಮಾಧ್ಯಮಗಳನ್ನ ಗಳನ್ನು ನಾಯಿಗೆ ಹೋಲಿಸಿರುವ ಅನಂತಕುಮಾರ್ ಹೆಗಡೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಚೀನಿ ಪುರುಷೋತ್ತಮ್ ಒತ್ತಾಯಿಸಿದ್ದಾರೆ.

 

 

 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆ ಹಾಗೂ ಮಾಧ್ಯಮ ಮುಂಚೂಣಿಯಲಿ ಇದ್ದು ಇಂದು ಅಂತಹ ಮಾಧ್ಯಮ ರಂಗವನ್ನ ನಾಯಿಗೆ ಹೋಲಿಕೆ ಮಾಡಿರುವ ಸಂಸದ ಅನಂತ್ ಕುಮಾರ್ ಹೆಗಡೆ ರವರ ಹೇಳಿಕೆಯನ್ನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ ಎಂದರು.

 

ಇನ್ನು ಸಂಸದ ಅನಂತ್ ಕುಮಾರ್ ಹೆಗಡೆ ರವರು ರಾಜಕೀಯವಾಗಿ ಅವರು ಯಾವುದೇ ಹೇಳಿಕೆಗಳನ್ನ ನೀಡಲಿ ಅದನ್ನ ಹೊರತುಪಡಿಸಿ ಮಾಧ್ಯಮಗಳನ್ನು ಈ ರೀತಿ ಅವಮಾನ ಮಾಡುವುದನ್ನೂ ಯಾವುದೇ ಪತ್ರಕರ್ತ ಹಾಗೂ ಮಾಧ್ಯಮ ಮಿತ್ರರು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

 

 

 

ಇನ್ನು ಅವರು ನೀಡುವ ಹೇಳಿಕೆಗಳನ್ನು ಆಧರಿಸಿ ಪತ್ರಿಕೆ ಹಾಗೂ ಮಾಧ್ಯಮಗಳು ಸುದ್ದಿಯನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸವ ನ್ನು ಮಾಡುತ್ತವೆ ಆದರೆ ಅಂತಹ ಹೇಳಿಕೆಗಳನ್ನ ಬಿತ್ತರಿಸುವ ಸಂವಿಧಾನದ ನಾಲ್ಕನೇ ಅಂಗವನ್ನು ಈ ರೀತಿಯಾಗಿ ಅವಮಾನಿಸುವ ವ್ಯಕ್ತಿಯ ವ್ಯಕ್ತಿತ್ವ ಎಂತಹದು ಎಂದು ಎಲ್ಲರಿಗೂ ತಿಳಿಯುತ್ತದೆ ಎಂದು ಪರೋಕ್ಷವಾಗಿ ಸಂಸದ ಅನಂತ್ ಕುಮಾರ್ ಹೆಗಡೆ ರವರ ಹೇಳಿಕೆಯನ್ನ ಖಂಡಿಸಿದ ಅವರು ಇನ್ನು ಅವರ ಹೇಳಿಕೆಯ ಖಂಡಿಸಿ ಗುರುವಾರ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

 

 

 

 

ಇನ್ನು ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಈ ರಘುರಾಮ್, ಕಾರ್ಯದರ್ಶಿ ಸತೀಶ್ ಹಾರೋಗೆರೆ, ನಿರ್ದೇಶಕರಾದ ಹೆಚ್ ಎಸ್ ಪರಮೇಶ್, ಸುರೇಶ್ ಕಾಗೆರೆ, ನಾಗರಾಜು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version