ಕಾನೂನು ಉಲ್ಲಂಘಿಸಿ ಹೆದ್ದಾರಿ ರಸ್ತೆ ಅಡ್ಡಲಾಗಿ ಕುಣಿಗಲ್ ಪುರಸಭಾ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ : ಕೆ.ಆರ್.ಎಸ್. ಪಕ್ಷ ಆಕ್ರೋಶ.
ಕುಣಿಗಲ್: ತಾಲೂಕಿನ ಪುರಸಭೆ ಕಾರ್ಯಾಲಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಮುಖ್ಯ ರಸ್ತೆಗೆ ಅಡ್ಡಲಾಗಿ ಪೆಂಡಾಲ್ ಹಾಕುವ ಮೂಲಕ ಕಾನೂನು ಉಲ್ಲಂಘನೆ ಮಾಡಿರುವ ಪುರಸಭಾ ಅಧಿಕಾರಿಗಳು.
ನೂತನವಾಗಿ ನಿರ್ಮಾಣವಾಗಿರುವ ಪುರಸಭೆ ಕಾರ್ಯಾಲಯ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಸಂಸದ ಡಿ.ಕೆ.ಸುರೇಶ್, ಶಾಸಕ ರಂಗನಾಥ್ ಆಗಮಿಸಿದ್ದರು. ರಸ್ತೆ ಅಡ್ಡಲಾಗಿ ನಡೆಸುತ್ತಿರುವ ಸಮಾರಂಭದಿಂದ ಕುಣಿಗಲ್ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು, ಈ ಸಾರ್ವಜನಿಕ ವಿರೋಧಿ ಕೃತ್ಯವನ್ನು ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ ಅವರ ನೇತೃತ್ವದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷರಾದ ಹೆಚ್.ಜಿ.ರಮೇಶ್, ಕೆ.ಆರ್.ಎಸ್. ಪಕ್ಷದ ತುಮಕೂರು ಜಿಲ್ಲಾ ಕಾರ್ಯದರ್ಶಿ ಕಾರ್ತಿಕ್, ಯುವ ಘಟಕದ ಅಧ್ಯಕ್ಷ ಕಿರಣ್, ಪದಾಧಿಕಾರಿಗಳಾದ ಶ್ರೀನಿವಾಸ್, ಪ್ರಮೋದ್, ಶಿವರಾಜ್ ಇನ್ನಿತರರನ್ನು ಕುಣಿಗಲ್ ಪೋಲಿಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.