ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಈ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ನೌಕರರ ಕಲ್ಯಾಣ ಸಂಸ್ಥೆ ವತಿಯಿಂದ ವೃತ್ತ ಸಮಿತಿಯ ಪುನರ್ ರಚನೆ ಕುರಿತು ಪೂರ್ವಭಾವಿ ಸಭೆ ಹಾಗೂ ಸಾಮಾನ್ಯ ಸರ್ವ ಸದಸ್ಯರ ಸಭೆಯ ಪೂರ್ವಭಾವಿ ಸಭೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನುಕೆಪಿಟಿಸಿಎಲ್ ಚೀಫ್ ಇಂಜಿನಿಯರ್ ಆದಿನಾರಾಯಣ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆದಿನಾರಾಯಣ ರವರು ಎಸ್ಸಿಎಸ್ಟಿ ಸಮುದಾಯಗಳು ಒಂದಾಗದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಹಾಗೂ ವ್ಯವಸ್ಥೆಯನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಎಲ್ಲರೂ ಒಗ್ಗಟ್ಟಾಗಿ ಇದ್ದರೆ ಮಾತ್ರ ಎಲ್ಲವನ್ನು ಜಯಿಸಲು ಸಾಧ್ಯ. ಸಂಘಟನೆಯನ್ನು ಬಲಪಡಿಸಬೇಕು, ಒಗ್ಗಟ್ಟಾಗಿರಬೇಕು ಹಾಗೂ ಒಡಕು ಮೂಡಿದಂತೆ ಎಚ್ಚರವಹಿಸಿ ದಾಗ ಮಾತ್ರ ಎಲ್ಲರೂ ಸಂಘಟಿತರಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವೈರಮುಡಿ ರವರು ಮಾತನಾಡಿ ಎಸ್ಸಿ ಎಸ್ಟಿ ನೌಕರರು ಒಗ್ಗಟ್ಟಾಗಿ ಇದ್ದಾಗ ಮಾತ್ರ ಮೇಲಧಿಕಾರಿಗಳ ಕಿರುಕುಳ ಹಾಗೂ ಇಲಾಖೆಗಳಲ್ಲಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಹಾಗಾಗಿ ಎಲ್ಲರೂ ಸಂಘಟಿತರಾಗಿ ಉತ್ತಮ ರೀತಿಯಲ್ಲಿ ಎಲ್ಲರೂ ಸಹಕರಿಸಬೇಕಾಗಿ ತಿಳಿಸಿದರು. ಎಲ್ಲ ರಂಗದಲ್ಲೂ ಇಂದು ಖಾಸಗೀಕರಣದ ಧ್ವನಿ ಹೇಳುತ್ತಿದ್ದು ಇದರ ವಿರುದ್ಧ ನಮ್ಮ ಸಮುದಾಯದ ಅಧಿಕಾರಿಗಳು ಹಾಗೂ ನೌಕರ ವರ್ಗದವರು ಹೋರಾಡಬೇಕಾಗಿದೆ ಇಲ್ಲವಾದರೆ ಮುಂಬರುವ ಕಾನೂನುಗಳು ಮರಣಶಾಸನವಾಗಿ ನಮ್ಮ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತವೆ ಹಾಗಾಗಿ ಎಲ್ಲರೂ ಸಂಘಟಿತರಾಗಬೇಕು ಎಂದರು.
ಇನ್ನು ಕಾರ್ಯಕ್ರಮದಲ್ಲಿ ವೃತ್ತ ಸಂಘಟನೆಯ ಕಾರ್ಯದರ್ಶಿ ಅಂಜಯ್ಯ, ಚಂದ್ರು ,ಕೇಂದ್ರ ಸಮಿತಿ ಸದಸ್ಯರಾದ ರವಿಕುಮಾರ್, ವೈರಮುಡಿ, ರಾಜಶೇಖರ್, ಮಂಜು ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಹನುಮಂತರಾಯಪ್ಪ ಸೇರಿದಂತೆ ಎಲ್ಲಾ ವಿಭಾಗ ಸಮಿತಿಯ ಸದಸ್ಯರು ಪದಾಧಿಕಾರಿಗಳು, ವೃತ್ತ ಶಾಖೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.