ತುಮಕೂರು ನಗರದಲ್ಲಿ ನಾಡಪ್ರಭು ಕೆಂಪೇಗೌಡರ 512 ನೇ ಜಯಂತಿ ಆಚರಣೆ.

 

ಕೆಂಪೇಗೌಡರು ಕೇವಲ ಬೆಂಗಳೂರು ನಗರಕ್ಕೆ ಸೀಮಿತವಾದವರಲ್ಲ, ಅವರು ದೇಶ ಹಾಗೂ ರಾಜ್ಯದ ಮಹನೀಯರಲ್ಲಿ ಕೆಂಪೇಗೌಡರು ಪ್ರಮುಖರು ಎಂದು ಜೆಡಿಎಸ್ ಮುಖಂಡ ನರಸೆಗೌಡ ರವರು ತಿಳಿಸಿದರು.

 

ತುಮಕೂರು ನಗರದ ಟೌನ್ಹಾಲ್ ವೃತ್ತದಲ್ಲಿ ಸಮುದಾಯದ ಮುಖಂಡರಿಂದ ನಾಡಪ್ರಭು ಕೆಂಪೇಗೌಡರ 112ನೇ ಜಯಂತಿ ಆಚರಣೆ ನಡೆಯಿತು.

 

ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರಾದ ಬೆಳ್ಳಿ ಲೋಕೇಶ್ ರವರು ಮಾತನಾಡಿ ಕೆಂಪೇಗೌಡರು ರಾಜಮನೆತನದಲ್ಲಿ ಹುಟ್ಟಿ ಬೆಳೆದರೂ ಬಡವರ ಏಳಿಗೆಗೆ ಬಹಳಷ್ಟು ಶ್ರಮಿಸಿದ್ದು ಬಡವರು ಹಾಗೂ ರೈತರ ಪಾಲಿಗೆ ಎಂದಿಗೂ ಅಜರಾಮರ , ಬೆಂಗಳೂರಿನಂತಹ ಬೃಹತ್ ನಗರವನ್ನು ಕಟ್ಟಿ ಬೆಳೆಸಿದವರಲ್ಲಿ ಕೆಂಪೇಗೌಡರ ಪಾತ್ರ ಮಹತ್ವದ್ದಾಗಿದ್ದು ಅಂದಿನ ಕಾಲದಲ್ಲೇ ಕೋಟೆಗಳು ,ಕೆರೆ ಕಟ್ಟೆಗಳನ್ನು ಕಟ್ಟಿ ಬಡವರು ರೈತರ ಪಾಲಿಗೆ ಆಶಾಕಿರಣದಂತೆ ಇದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಯನ್ನು ಪ್ರತಿಯೊಬ್ಬರು ಆಚರಿಸುವಂತಾಗಬೇಕು ಅವರು ಕೇವಲ ಒಂದು ಜಾತಿ ಸಮುದಾಯಕ್ಕೆ ಮೀಸಲಾದ ವ್ಯಕ್ತಿಯಲ್ಲ ಅವರು ಇಡೀ ದೇಶದ ಆಸ್ತಿ ಎಂದರು.

 

ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ದೊಡ್ಡಲಿಂಗಪ್ಪ , ಪಾಲಿಕೆ ಸದಸ್ಯರಾದ ಕುಮಾರ್, ಮುಖಂಡರಾದ ಸಿದ್ದಲಿಂಗೇಗೌಡ, ದೇವಿಕಾ ಸಿದ್ದಲಿಂಗೇಗೌಡ ,ಜೆಡಿಎಸ್ ಮುಖಂಡರಾದ ನಾಗರಾಜು, ಶ್ರೀನಾಥ್ ,ಗಿರೀಶ್, ದಿನೇಶ್ ,ಕರಿಯಪ್ಪ,ಉರ್ಡಿಗೆರೆ ಗಂಗಾಧರ, ಮಂಜುನಾಥ್, ಲೋಕೇಶ್ ಚಿನಕವಜ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version