ಬೆಳಗುಂಬ ಸರಕಾರಿ ಶಾಲೆ ದುರಸ್ತಿಗೆ ಕರವೇ ಕಾರ್ಯಕರ್ತರ ಒತ್ತಾಯ
ತುಮಕೂರು:ನಗರಕ್ಕೆ ಸಮೀಪದಲ್ಲಿರುವ ಬೆಳಗುಂಬ ಸರಕಾರಿ ಶಾಲೆಯು ಶಿಥಿಲಗೊಂಡಿದ್ದು, ದುರಸ್ತಿಗೊಳಿಸುವಂತೆ ಒತ್ತಾಯಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಅರುಣ್ ಕುಮಾರ್ ಅವರ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಅರುಣ್ ಕುಮಾರ್ ಶತಮಾನ ಕಳೆದಿರುವ,ಸಾವಿರಾರು ಮಕ್ಕಳಿಗೆ ಜ್ಞಾನದ ಬೆಳಕು ನೀಡಿದ ಬೆಳಗುಂಬ ಸರಕಾರಿ ಶಾಲೆ ಅತ್ಯಂತ ದುಸ್ಥಿತಿಯಲ್ಲಿದೆ. ಪ್ರಸ್ತುತ ೧೧೫ ಮಕ್ಕಳು ಕಲಿಯುತ್ತಿದ್ದು, ಪ್ರಮುಖ ರಸ್ತೆಗೆ ಹೊಂದಿಕೊAಡAತೆ ಇದ್ದರೂ ಅಭಿವೃದ್ದಿಯಿಂದ ವಂಚಿತವಾಗಿವೆ. ಇರುವ ಎಂಟು ಕೊಠಡಿಗಳಲ್ಲಿ ಐದು ಹೆಂಚಿನ ಕೊಠಡಿಗಳು ಸಂಪೂರ್ಣವಾಗಿ ಶಿಥಿಲವಾಗಿವೆ. ಉಳಿದ ಮೂರರ ಸ್ಥಿತಿಯೂ ವಿಭಿನ್ನವಾಗಿಲ್ಲ. ಎಂದು ಬಿಳಲಿದೆಯೋ ಎಂಬ ಶಾಲೆಗೆ ಹೇಗೆ ಮಕ್ಕಳನ್ನು ಕಳುಹಿಸುವುದು ಎಂಬುದು ಪೋಷಕರ ಆತಂಕವಾಗಿದೆ ಎಂದರು.
ಶಾಲೆಯ ಆವರಣದಲ್ಲಿಯೇ ಗ್ರಾಮಪಂಚಾಯಿತಿ ಕಚೇರಿ ಇದ್ದು, ಆರ್.ಸಿ.ಸಿ. ಕಟ್ಟಡದಲ್ಲಿ ನಡೆಯುತ್ತಿದ್ದು ೭ನೇ ತರಗತಿಯನ್ನು ಬದಲಾಯಿಸಿ, ಸದರಿ ಕಟ್ಟಡವನ್ನು ಗ್ರಾಮಪಂಚಾಯಿತಿಯವರು ಬಳಸಿಕೊಳ್ಳುವ ಮೂಲಕ ಶಿಕ್ಷಣಕ್ಕೆ ತಿಲಾಂಜಲಿ ಇಡಲು ಹೊರಟಿದ್ದಾರೆ. ಕೂಡಲೇ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸಿ, ಕಲಿಯುತ್ತಿರುವ ಮಕ್ಕಳ ಉತ್ತಮ ಭಿವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕೆಂದು ಕರವೇ ಒತ್ತಾಯಿಸುತ್ತದೆ ಎಂದು ಅರುಣ್ ಕುಮಾರ್ ತಿಳಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಾಬಾ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜು, ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಾಧಿಕ್, ಮಹಿಳಾ ಘಟಕದ ಪೂಜಾಶ್ರೀ,ಆಶ್ವಿನಿ,ನಗರಾಧ್ಯಕ್ಷ ಇಂದ್ರಕುಮಾರ್ ಇತರರು ಪಾಲ್ಗೊಂಡಿದ್ದರು.