ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದ ಶಾಸಕ ಚಿದಾನಂದ ಗೌಡ.

ಮಾನ್ಯ .ವಿಧಾನ ಪರಿಷತ್ ಶಾಸಕರಾದ ಶ್ರೀ ಚಿದಾನಂದ್ ಎಂ ಗೌಡ* ರವರು ಇಂದು 66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಿರಾ ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ದ್ವಜರೋಹಣ ನೆರವೇರಿಸಿ, ತಾಯಿ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಭಕ್ತಿ ಪೂರ್ವಕ ಗೌರವ ನಮನ ಸಲ್ಲಿಸಿದರು.
ಈ ಕಾರ್ಯಕ್ರಮವನ್ನು ಉದ್ದೇಶಸಿ ಮಾತನಾಡಿದ ವಿಧಾನ ಪರಿಷತ್ ಶಾಸಕರಾದ ಚಿದಾನಂದ ಗೌಡ್ರು ಕನ್ನಡ ಈ ದೇಶದ ಮುಖಮಣಿ ಇದ್ದಹಾಗೆ, ಕನ್ನಡ ಈ ನಾಡಿನ ಜನರ ಸಂಸ್ಕೃತಿ, ಕನ್ನಡ ಈ ನಾಡಿನ ಜನರ ಬದುಕು, ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ. ಈ ನಾಡಿನ ಹೆಮ್ಮಯ ಕನ್ನಡದ ಮಾಣಿಕ್ಯ ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣ ತುಂಬಾ ದುಃಖ ತಂದಿದೆ. ಪುನೀತ್ ರಾಜಕುಮಾರ್ ಕೇವಲ ನಟರಾಗದೆ ಈ ನಾಡಿನ ಮಗನಾಗಿ, ಕನ್ನಡದ ಕಣ್ಮಣಿಯಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ಆಚಾರ, ವಿಚಾರ, ನಡೆ, ನುಡಿ, ಕನ್ನಡತನ ಅವರಲ್ಲಿ ಎದ್ದು ಕಾಣುತಿತ್ತು. *ಪುನೀತ್ ರಾಜ್ ಕುಮಾರ್ ಈ ನಾಡಿಗೆ ಅಪಾರ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ವೃದ್ಧಾಶ್ರಮ, ಗೋಶಾಲೆ, ನೊಂದವರಿಗೆ ಸಹಾಯ, ಅನಾಥಾಶ್ರಮ ಗಳಂತಹ ಪುಣ್ಯ ಕೆಲಸಗಳನ್ನು ಮಾಡಿದ್ದಾರೆ. ನಮ್ಮ ಯುವಕರು ಪುನೀತ್ ರಾಜಕಮಾರ್ ರವರಿಗೆ ಗೌರವ, ಶ್ರದ್ಧಾಂಜಲಿ ಕೊಡಬೇಕೆಂದಿದ್ದರೆ ಅವರ ಆದರ್ಶಗಳನ್ನು ಪಾಲಿಸಿ ಮುಂದುವರಿಸಬೇಕಿದೆ ಹಾಗೂ ಕನ್ನಡ ನಮ್ಮ ತಾಯಿ ಅದನ್ನು ಉಳಿಸುವ ಕೆಲಸ ಮಾಡಬೇಕು ಎಂದು ಯುವಕರಿಗೆ ಕರೆನೀಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕರಾದ ಸಿ. ಎಂ ರಾಜೇಶ್ ಗೌಡ ರವರು, ವಿಧಾನ ಪರಿಷತ್ ಶಾಸಕರಾದ ತಿಪ್ಪೇಸ್ವಾಮಿ ಯವರು ತೆಂಗು ಮತ್ತು ನಾರು ಅಭಿವೃದ್ದಿ ನಿಗಮ ಮಂಡಳಿ ಅಧ್ಯಕ್ಷರಾದ ಬಿ. ಕೆ ಮಂಜಣ್ಣ ನವರು, ಸಿರಾ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಈರಣ್ಣ ನವರು, ತಹಶೀಲ್ದಾರ್ ಮಮತಾ ರವರು, ಎಂ. ಬಿ ಲಕ್ಷ್ಮೀಶ್ ರವರು, ಮಾದ್ಯಮಮಿತ್ರರು, ಎಲ್ಲಾ ಇಲಾಖೆಗಳ ಅಧಿಕಾರಿಗಳು, ಕನ್ನಡ ಪ್ರೇಮಿಗಳು, ಕಲಾ ತಂಡದವರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಮಾನ್ಯ ವಿಧಾನ ಪರಿಷತ್ ಶಾಸಕರಾದ ಶ್ರೀ ಚಿದಾನಂದ್ ಎಂ ಗೌಡ* ರವರು ಇಂದು 66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಿರಾ ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ದ್ವಜರೋಹಣ ನೆರವೇರಿಸಿ, ತಾಯಿ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಭಕ್ತಿ ಪೂರ್ವಕ ಗೌರವ ನಮನ ಸಲ್ಲಿಸಿದರು.