ಕೆ.ಯು.ಡಬ್ಲ್ಯೂ.ಜೆ ವತಿಯಿಂದ ನೀಡುವ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ವರದಿಗಾರ ಶಾಂತಿನಾಥ್ ಜೈನ್.

‎ಕೆ .ಯು .ಡಬ್ಲ್ಯೂ. ಜೆ ವತಿಯಿಂದ ನೀಡುವ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ವರದಿಗಾರ ಶಾಂತಿನಾಥ್ ಜೈನ್.

 

ತುಮಕೂರು_ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕದ ವತಿಯಿಂದ 2019 -20 2020- 21 ನೇ ಸಾಲಿನ ದತ್ತಿ ಪ್ರಶಸ್ತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು ಈಟಿವಿ ಭಾರತ ತುಮಕೂರು ಜಿಲ್ಲಾ ವರದಿಗಾರ ಶಾಂತಿನಾಥ್ ಜೈನ್ ರವರು ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 

 

ಇನ್ನು ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಹೆಚ್ ಶಾಂತಿನಾಥ್ ಜೈನ್ ರವರು ಪ್ರಸ್ತುತ ಈಟಿವಿ ಭಾರತ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು ತುಮಕೂರಿನ ಜಿಲ್ಲಾ ಘಟಕದ ವತಿಯಿಂದ ನೀಡಲಾಗುವ 2019-2020 2020-21 ನೇ ಸಾಲಿನ ಸಿ.ಎನ್ ಭಾಸ್ಕರಪ್ಪ ಅವರ ಹೆಸರಿನಲ್ಲಿ ನೀಡಲಾಗುವ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಇದುವರೆಗೂ ಅವರು ಮಾಡಿರುವ ಗ್ರಾಮೀಣ ವರದಿಗಳಿಗೆ ಸಂದ ಪ್ರಶಸ್ತಿಯಾಗಿದೆ.

 

ಇನ್ನೂ ಶಾಂತಿನಾಥ್ ಜೈನ್ ರವರು ಇಂದ್ರಕುಮಾರ್ ಹಾಗೂ ತಾಯಿ ಜ್ವಾಲಮ್ಮ ಅವರು ಕುಟುಂಬದವರು ಜನಿಸಿದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿಯನ್ನು ಪಡೆದಿದ್ದಾರೆ. ನಂತರ ಪತ್ರಿಕೋದ್ಯಮ ವೃತ್ತಿಗೆ ಪಾದಾರ್ಪಣೆ ಮಾಡಿ ಉಷಾಕಿರಣ ಪತ್ರಿಕೆ ,ಟಿವಿ9 ,ರಾಜ್ ನ್ಯೂಸ್ ಈಟಿವಿ ಭಾರತ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಸುಮಾರು 17 ವರ್ಷಗಳಿಂದ ನಿರಂತರವಾಗಿ ಪತ್ರಿಕೋದ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಹಲವು ಉತ್ತಮ ವರದಿಗಳನ್ನು ಮಾಡಿದ್ದಾರೆ.

ಇನ್ನು ಮೂಲತಹ ಶಾಂತಿನಾಥ್ ಜೈನ್ ರವರು ಹೆಚ್ಚು ಗ್ರಾಮೀಣ ಭಾಗದ ಸುದ್ದಿಗಳನ್ನು ಮಾಡುತ್ತಿದ್ದು ಅವುಗಳನ್ನು ಪರಿಗಣಿಸಿದ್ದು ಈ ಬಾರಿಯ ದತ್ತಿ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ.

 

 

ಮೇ1ರಂದು ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

 

 

ಇನ್ನು ಪ್ರಶಸ್ತಿಗೆ ಆಯ್ಕೆಯಾಗಿರುವ ವರದಿಗಾರ ಶಾಂತಿನಾಥ್ ಜೈನ್ ರವರು ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ದಕ್ಕೆ ಸಂತಸ ವ್ಯಕ್ತಪಡಿಸಿದ್ದು ಇನ್ನು ತಾವು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿರುವ ಎಲ್ಲ ಸದಸ್ಯರಿಗೂ ಅಭಿನಂದನೆಗಳನ್ನು ಸಲ್ಲಿಸಿದರು ಇನ್ನು ದತ್ತಿ ಪ್ರಶಸ್ತಿ ಲಭಿಸಿರುವುದು ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚು ಮಾಡಿದ್ದು ಮುಂದಿನ ದಿನದಲ್ಲಿ ಮತ್ತಷ್ಟು ಒಳ್ಳೆಯ ಸುದ್ದಿಗಳನ್ನು ಮಾಡುವ ಬಗ್ಗೆ ಗಮನ ಹರಿಸುವುದಾಗಿ ತಮ್ಮ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

 

 

ಮೇ1ರಂದು ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಮತ್ತಷ್ಟು ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿರುವ ಪತ್ರಕರ್ತರಾದ ಚಂದ್ರಕಾಂತ, ವೆಂಕಟಾಚಲ, ಮಂಜುನಾಥ್ ಅರಸ್, ಚಿದಂಬರ, ವಿಜಯಕುಮಾರ್ ರವರು ಸಹ ಆಯ್ಕೆಯಾಗಿದ್ದಾರೆ.

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version