ಸ್ವಸಹಾಯ ಗುಂಪುಗಳ ಸದಸ್ಯರ ಜೊತೆ ಸಂವಾದ ಕಾರ್ಯಕ್ರಮ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಬಾಗಿ.

ಸ್ವಸಹಾಯ ಗುಂಪುಗಳ ಸದಸ್ಯರ ಜೊತೆ ಸಂವಾದ ಕಾರ್ಯಕ್ರಮ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಬಾಗಿ.

ಕೆ ಆರ್ ಪೇಟೆ_ ಮಹಿಳೆಯರು ಉಪ ಕಸುಬುಗಳನ್ನು ಕೈಗೊಂಡರೆ ಉತ್ತಮ ಆಧಾಯ ಗಳಿಸಬಹುದು. ಇದಕ್ಕೆ ಬೇಕಾದ ಸೂಕ್ತ ಕೌಶಲ್ಯ ತರಬೇತಿ ಮತ್ತು ಬಂಡವಾಳ ನೀಡಲು ಸರ್ಕಾರ ಸದಾ ಸಿದ್ದವಿದೆ. ಇದನ್ನು‌ ಮಹಿಳೆಯರು ಸದ್ಬಳಕೆ ಮಾಡಿಕೊಂಡು ಆರ್ಥಿಕ ಸಬಲೀಕರಣ ಹೊಂದಬೇಕು ಎಂದು ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ಖಾತೆ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ ನಾರಾಯಣ್ ಸಲಹೆ ನೀಡಿದರು.

ಅವರು

ಕೆ.ಆರ್ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಜಯಶ್ರೀ ರಂಗ ಮಂದಿರದಲ್ಲಿ ತಾಲೂಕು ಪಂಚಾಯತ್ ಕೆ.ಆರ್ ಪೇಟೆ, ಹಾಗೂ ಗ್ರಾಮ ಪಂಚಾಯತ್ ಅಕ್ಕಿಹೆಬ್ಬಾಳು ಹಾಗೂ ಒನಕೆ ಓಬವ್ವ ಸಂಜೀವಿನಿ ಮಹಳಾ ಒಕ್ಕೂಟ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮಹಿಳೆಯರ ಗೃಹ ಕೈಗಾರಿಕಾ ಉತ್ಪನ್ನ ಚಟುವಟಿಕೆ ಗಳ ಪರಿಶೀಲನೆ ಹಾಗೂ ಮಹಿಳಾ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮವನ್ನು‌ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಸ್ವಸಹಾಯ ಸಂಘಗಳನ್ನು ರಚಿಸಿಕೊಂಡರೆ ಇದರ ಮೂಲಕ ಬ್ಯಾಂಕ್ ಗಳ ಮೂಲಕ ಸುಮಾರು 10ರಿಂದ 20ಲಕ್ಷ ರೂಗಳ ವರೆಗೆ ಸುಲಭ ಸಾಲ ಪಡೆದು ಸ್ವಯಂ ಉದ್ಯೋಗ ಕೈಗೊಳ್ಳಬಹುದಾಗಿದೆ. ಪ್ರಮುಖವಾಗಿ ಟೈಲರಿಂಗ್ ವೃತ್ತಿ, ಊಟದ ಎಲೆ ತಯಾರಿಸುವುದು. ಗಂಧದಕಡ್ಡಿ ತಯಾರಿಸುವುದು. ಮೇಣದ ಬತ್ತಿ ತಯಾರಿಕೆ, ಪೆನಾಯಿಲ್ ತಯಾರಿಕೆ, ಸೀಮೆ ಸುಣ್ಣ ತಯಾರಿಕೆಯನ್ನು ಗುಂಪುಗೂಡಿ ಮಾಡಬಹುದಾಗಿದೆ. ಇದಲ್ಲದೆ ಹೈನುಗಾರಿಕೆ, ಅಣಬೆ ಬೇಸಾಯ, ಜೇನು ಕೃಷಿ ಸೇರಿದಂತೆ ಹಲವು ಸ್ವಯಂ ಉದ್ಯೋಗಗಳನ್ನು ಕೈಗೊಂಡರೆ ಮನೆ ಬಳಿಯೇ ಸಾವಿರಾರು ರೂ ಲಾಭ ಗಳಿಸಬಹುದು. ಇದಕ್ಕೆ ಬೇಕಾದ ಕೌಶಲ್ಯ ತರಬೇತಿಯನ್ನು ನೀಡಲಾಗುವುದು. ನೀವು ತಯಾರಿಸಿ್ ಯಾವುದೇ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಜೊತೆಗೆ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ 100 ದಿನಗಳ‌ ಕಾಲ ಕೆಲಸ ನೀಡಲಾಗುವುದು. ಅಲ್ಲದೇ ತಮ್ಮನ್ನು ಫಲಾನುಭವಿಗಳೆಂದು ಪರಿಗಣಿಸಿ ಕೃಷಿ ಹೊಂಡ, ಕೊಟ್ಟಿಗೆ, ಚೆಕ್ ಡ್ಯಾಂ ನಿರ್ಮಾಣಕ್ಕೆ ಅವಕಾಶ ನೀಡಲಾಗುತ್ತದೆ ಇದನ್ನು ತಾವು ಸದುಪಯೋಗ ಪಡಿಸಿ ಕೊಂಡು ಅಭಿವೃದ್ದಿಯ ದಿಕ್ಕಿನತ್ತ ಸಾಗಬೇಕು ಎಂದು ಅಶ್ವತ್ ನಾರಾಯಣ್ ಅವರು ತಿಳಿಸಿದರು.

ಕಾರ್ಯಕ್ರಮಕ್ಕೆ ಬಂದ

ಸಚಿವ ಡಾ. ಅಶ್ವಥ್ ನಾರಾಯಣ್ , ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರನ್ನು ನೂರಾರು ಮಹಿಳಾ ಸದಸ್ಯರು ತಲೆ ಮೇಲೆ ಕಳಸ ಹೊತ್ತು ಭವ್ಯ ಸ್ವಾಗತ ಕೋರಿದರು.

ಮಹಿಳಾ ಸದಸ್ಯರು ಸ್ವಸಹಾಯ ಸಂಘ ದ ವತಿಯಿಂದ ಸ್ವಾವಲಂಬನೆ ಜೀವನಕ್ಕಾಗಿ ವಾಣಿಜ್ಯ ಚಟುವಟಿಕೆಯಲ್ಲಿ ತಯಾರಿಸಿದ ವಿವಿಧ ರೀತಿಯ ಚಟುವಟಿಕೆ ಗಳನ್ನು ಪ್ರದರ್ಶನ ಉದ್ಘಾಟಿಸಲಾಯಿತು. ಕೆಲವರು ಟೈಲರಿಂಗ್ ಕ್ಷೇತ್ರದಲ್ಲಿ ವಿವಿಧ ಶೈಲಿಯಲ್ಲಿ ಬಟ್ಟೆ ತಯಾರಿಸಿ ಪ್ರದರ್ಶನಕ್ಕೆ ಇಟ್ಟಿದ್ದರು ಮತ್ತೆ ಕೆಲವರು ತಿಂಡಿ ತಿನಿಸುಗಳನ್ನು ತಯಾರಿಸಿ ಪ್ರದರ್ಶನ ಮಾಡಿದರು. ಪ್ರದರ್ಶನ ವೀಕ್ಷಿಸಿದ ಸಚಿವರು ಮಹಿಳಾ ಸದಸ್ಯರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಕ್ಕಿ ಸ್ವಾವಲಂಬಿಗಳಾಗಿ ಎಂದು ಹುರಿದುಂಬಿಸಿದರು.

 

ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ ಮಹಿಳೆಯರು ಸ್ವಸಹಾಯ ಗುಂಪುಗಳಲ್ಲಿ ಹಲವಾರು ರೀತಿಯಲ್ಲಿ ಉಪಯೋಗವನ್ನು ಪಡೆದುಕೊಳ್ಳಬಹುದು ಆರ್ಥಿಕವಾಗಿ ಇನ್ನಷ್ಟು ಬಲಗೊಳ್ಳಬಹುದು ಹಾಗೂ ಸದಸ್ಯರು ತಯಾರಿಸಿದ ವಾಣಿಜ್ಯ ಉತ್ಪನ್ನಗಳು ರಾಷ್ಟ್ರಿಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ರೀತಿಯಲ್ಲಿ ಸಾಧನೆಯನ್ನು ಮಾಡಬಹುದು ಎಂದರು ನಂತರ ಸಚಿವ ಡಾ. ಅಶ್ವಥ್ ನಾರಾಯಣ್ ಅವರು ಮಹಿಳಾ ಸದಸ್ಯರ ಜೊತೆ ಸಂವಾದವನ್ನು ನಡೆಸಿ ಕೆಲವು ಸಲಹೆಗಳನ್ನು ಕೊಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣ ಗೌಡ, ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿದ ಗುಡಿ ಕೈಗಾರಿಕಾ ವಸ್ತು ಪ್ರದರ್ಶಕ್ಕೆ ಚಾಲನೆ ನೀಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ರಂಜಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯತ್ ಸಿಇಓ ದಿವ್ಯಪ್ರಭು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ತಹಸೀಲ್ದಾರ್ ಎಂ.ಶಿವಮೂರ್ತಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್. ಚಂದ್ರಶೇಖರ್, ಬಿಜಿಪಿ ಜಿಲ್ಲಾಧ್ಯಕ್ಷ ಕೆ.ಜೆ ವಿಜಯ್ ಕುಮಾರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎ.ಜಿ.ಪರಮೇಶ್ ಅರವಿಂದ್, ರಾಜ್ಯ ಬಿಜೆಪಿ‌ ಮಹಿಳಾ ಉಪಾಧ್ಯಕ್ಷೆ ಪ್ರಮೀಳಾವರದರಾಜೇಗೌಡ, ತಾಲ್ಲೂಕು ಬಿಜೆಪಿ ಎಸ್.ಟಿ.ಮೋರ್ಚಾ ಅಧ್ಯಕ್ಷ ಮಹೇಶ್ ನಾಯಕ್, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಶೀಳನೆರೆ ಭರತ್, ಗ್ರಾ.ಪಂ.ಸದಸ್ಯರಾದ ಅಣ್ಣಯ್ಯ ಇತರರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

 

ವರದಿ : ಸಿ.ಆರ್ ಜಗದೀಶ್ ಕೆ.ಆರ್ ಪೇಟೆ, ಮಂಡ್ಯ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version