ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಗೆದ್ದು ಬೀಗಿದ ಪತ್ರಕರ್ತರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಗೆದ್ದು ಬೀಗಿದ ಪತ್ರಕರ್ತರು.

 

ತುಮಕೂರು_ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (2022_2025) ನೇ ಸಾಲಿನ ಅವಧಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಚೀ.ನಿ. ಪುರುಷೋತ್ತಮ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಗಾದಿಗೆ ಏರಿದ್ದಾರೆ.

 

 

ಇನ್ನು ಭಾನುವಾರ ನಡೆದ ಚುನಾವಣೆಗೆ ಪತ್ರಕರ್ತರು ಬೆಳಗ್ಗೆಯಿಂದಲೂ ಸರತಿ ಸಾಲಿನಲ್ಲಿ ನಿಂತು ಗರಿಷ್ಠ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ವಿಶೇಷವಾಗಿತ್ತು ಇನ್ನೂ ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಿಂದ ಪತ್ರಕರ್ತರು ಆಗಮಿಸಿ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು.

 

 

ಇನ್ನು ಭಾನುವಾರ ನಡೆದ ಮತದಾನ ಎಣಿಕೆಯಲ್ಲಿ ಗಳಿಸಿದ ಅಭ್ಯರ್ಥಿಗಳ ವಿವರ ಇಂತಿದೆ.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ

ಟಿ. ಇ ರಘುರಾಮ್ (169)

ಕಾರ್ಯದರ್ಶಿ ಹುದ್ದೆಗೆ

ದಶರಥ (107)

ರಂಗಧಾಮಯ್ಯ (144)

ಸತೀಶ್ ಹೆಚ್. ಈ ಹಾರೋಗೆರೆ (139)

 

ಖಜಾಂಚಿ ಸ್ಥಾನಕ್ಕೆ

ದೇವಪ್ರಕಾಶ್ (152)

 

 

ರಾಜ್ಯ ಕಾರ್ಯಕಾರಿ ಸಮಿತಿಗೆ

ಸಿದ್ದಲಿಂಗಸ್ವಾಮಿ (99).

 

 

ನಿರ್ದೇಶಕರ ಸ್ಥಾನಕ್ಕೆ

ಟಿಎಸ್ ಕೃಷ್ಣಮೂರ್ತಿ(228)

ಚಿಕ್ಕಣ್ಣ (152)

ಜಯಣ್ಣ(156)

ಕೆ ನರಸಿಂಹಮೂರ್ತಿ(194)

ನಾಗರಾಜು ಎನ್(131)

ನಾಗೇಂದ್ರಪ್ಪ ಹೆಚ್ ಕೆ(140)

ನಂದೀಶ್ ಬಿ.ಎಲ್(176)

ಹೆಚ್ಎಸ್ ಪರಮೇಶ್(175)

ಪ್ರಸನ್ನ ಡಿ ಆರ್(165)

ಬೈರೇಶ್ ಎಂ.ಬಿ(147)

ಮಲ್ಲಿಕಾರ್ಜುನ ಸ್ವಾಮಿ(125)

ಮಂಜುನಾಥ್ ನಾಯಕ್ (199)

ಮಂಜುನಾಥ್ ಹಾಲ್ಕುರಿಕೆ(162)

ಯಶಸ್ ಕೆ ಪದ್ಮನಾಭ(157)

ಶಂಕರಪ್ಪ ಹೆಚ್ಎನ್(134)

ಮತಗಳನ್ನು ಪಡೆಯುವ ಮೂಲಕ ಭಾನುವಾರ ನಡೆದ ಚುನಾವಣೆಗೆ ಆಯ್ಕೆಯಾಗಿದ್ದಾರೆ.

 

ವಿ.ಸೂ_ಇನ್ನು ಫಲಿತಾಂಶ ಅಧಿಕೃತ ಪ್ರಕಟಣೆಗೆ ಹೈಕೋರ್ಟ್ ಆದೇಶದಂತೆ ತಡೆಯಾಜ್ಞೆ ಇದ್ದು. ಚುನಾವಣಾ ಅಧಿಕಾರಿಗಳು ಅಧಿಕೃತವಾಗಿ ಜಯಗಳಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿಲ್ಲ. ಆದರೆ ಮೇಲಿನ ಫಲಿತಾಂಶ ಅಭ್ಯರ್ಥಿಗಳು ಪಡೆದಿರುವ ಮತದ ಮೇಲೆ ಅವಲಂಬಿತವಾಗಿದೆ. ಹೈಕೋರ್ಟ್ ಆದೇಶದ ನಂತರ ಅಧಿಕೃತವಾಗಿ ಚುನಾವಣಾ ಅಧಿಕಾರಿಗಳು ಚುನಾಯಿತ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಿದ್ದಾರೆ.

 

 

 

ವರದಿ -ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version