ರಾಸುಗಳಿಗೆ ಅಲಂಕಾರ
ದೇವನಹಳ್ಳಿ: ಸುಗ್ಗಿ ಹಬ್ಬ ಸಂಕ್ರಾಂತಿಗೆ ವಿವಿಧೆಡೆ ರೈತರು ಮೆರವಣಿಗೆ ನಡೆಸಿ ಕಿಚ್ಚು ಹಯಿಲಿ ಸಭ್ರಮಪಟ್ಟರು.
ರೈತರು ಹಸುಗಳಿಂದ ವರ್ಷವಿಡೀ ಜಮೀನುಗಳಲ್ಲಿ ದುಡಿಸಿಕೊಂಡು ಅನೇಕ ರೀತಿಯ ಫಸಲುಗಳನ್ನು ಬೆಳೆಯುತ್ತಾರೆ. ರೈತ ಸಂಘ ಜೀವಿ ಹಸುಗಳಾಗಿದ್ದು, ಹಸುಗಳು ಯಾವುದೇ ತರಹದ ಭಾದೆಗಳು ಎದುರಾಗದಂತೆ ತಡೆಯುವ ಸಲುವಾಗಿ ಸುಗ್ಗಿ ಹಬ್ಬದ ಸಂಕ್ರಾಂತಿ ದಿನದಂದು ಗ್ರಾಮಗಳಲ್ಲಿ ಈ ರೀತಿಯ ಎತ್ತುಗಳನ್ನು ಅಲಂಕರಿಸಿ ಕಿಚ್ಚಾಯಿಸುವ ಕಾರ್ಯ ವಿಶೇಷವಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಸಂಕ್ರಾಂತಿ ಹಬ್ಬದ ಸಂಜೆ ಸಮಯದಲ್ಲಿ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡುವುದರ ಮೂಲಕ ಹಳ್ಳಿಗಾಡಿನಲ್ಲಿ ಬೆಂಕಿ ಕಿಚ್ಚು ಹಾಯಿಸುವ ಕಾರ್ಯ ನಡೆಸಲಾಗಿದ್ದು,
ತಾಲೂಕಿನ ಹೆಗ್ಗನಹಳ್ಳಿ ಗ್ರಾಮದಲ್ಲಿ ಇ-ಹೊಸೂರು ಗ್ರಾಮದ ನಂಜುಂಡಪ್ಪ ಕುಟುಂಬದವರಿಂದ ಜೋಡೆತ್ತುಗಳನ್ನು ಸಿಂಗರಿಸಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಊರಿನ ಗ್ರಾಮಸ್ಥರನ್ನು ಒಳಗೊಂಡಂತೆ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಮ್ಮಿಕೊಂಡು, ತಮಟೆ ವಾದ್ಯದ ಮೂಲಕ ರಾಜ ಬೀದಿಗಳಲ್ಲಿ ಮೆರವಣಿಗೆಗೆ ಸಜ್ಜುಗೊಳಿಸಲಾಗಿತ್ತು.
ಗ್ರಾಮದ ಮುಖಂಡ ಹನುಮಂತಪ್ಪ ಮಾತನಾಡಿ, ಸಂಕ್ರಾಂತಿ ಹಬ್ಬದ ದಿನದಲ್ಲಿ ನಮ್ಮ ಹಿಂದಿನ ಕಾಲದಿಂದಲೂ ಎತ್ತುಗಳ ಮೆರವಣಿಗೆ ಮಾಡಿಕೊಂಡು ಬರಲಾಗಿದೆ. ವಿಶೇಷವಾಗಿ ಗ್ರಾಮಗಳ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಂಜೆ ವೇಳೆಗೆ ಮೆರವಣಿಗೆ ಕಾರ್ಯಕ್ರಮ ನಡೆಯುತ್ತದೆ. ಭಕ್ತಾಗಳು ಹಾಗೂ ಗ್ರಾಮಸ್ಥರು ಇದನ್ನು ಕಂಡು ಮುಂದಿನ ಪಿಳೀಗೆಗೆ ಉಳಿಸಿಕೊಂಡು ಹೋಗುವಂತೆ ಪ್ರೇರೆಪಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಊರಿನ ಮುಖಂಡರಾದ ಚಂದ್ರ, ಹೆಗ್ಗನಹಳ್ಳಿ ಗ್ರಾಮಸ್ಥರು ಇದ್ದರು.
ಸಂಕ್ರಾಂತಿ ಪ್ರಯುಕ್ತ ಜೋಡೆತ್ತುಗಳನ್ನು ಅಲಂಕರಿಸಿರುವುದು.
ಗುರುಮೂರ್ತಿ ಬೂದಿಗೆರೆ