ತನಿಖೆ ಹೆಸರಿನಲ್ಲಿ ಪೊಲೀಸರ ಕಿರುಕುಳ ಆರೋಪ. ಬೇಸತ್ತು ಚಿನ್ನದ ಅಂಗಡಿ ಬಂದ್ ಮಾಡಿದ ಮಾಲೀಕರು.

 

 

ತುಮಕೂರು _  ಪೊಲೀಸರ ಕಿರುಕುಳದಿಂದ ಬೇಸತ್ತು ಚಿನ್ನದ ಅಂಗಡಿ ಬಂದ್ ಮಾಡಿದ ಮಾಲೀಕರು.

 

 

ಪ್ರತಿನಿತ್ಯ ಪೊಲೀಸರು ತನಿಖೆ ಹೆಸರಿನಲ್ಲಿ ಜುವೆಲ್ಲರಿ ಮಾಲೀಕರು ಹಾಗೂ ಗಿರವಿ ಅಂಗಡಿ ಮಾಲೀಕರಿಗೆ ಪ್ರತಿನಿತ್ಯ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಚಿನ್ನದಂಗಡಿ ಮಾಲೀಕರಾದ ಜೆ.ಪಿ. ಜೈನ್ ಅವರು ಆರೋಪಿಸಿದ್ದಾರೆ.

 

ಇನ್ನೂ ಸೋಮವಾರ ಮಧ್ಯಾಹ್ನ ಬೆಂಗಳೂರಿನ ಹೆಚ್ ಎಸ್ ಆರ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಏಕಾಏಕಿ ತುಮಕೂರಿನ ಜ್ಯುವೆಲರಿ ಅಂಗಡಿಗಳಿಗೆ ಬಂದು ಅಂಗಡಿ ಮಾಲೀಕರನ್ನು ಕಳ್ಳರ ರೀತಿ ಖಾಸಗಿ ವಾಹನದಲ್ಲಿ ಕರೆದೊಯ್ದ ವಿರುದ್ಧ ತುಮಕೂರಿನ ಚಿನ್ನದಂಗಡಿ ಮಾಲೀಕರು ಅಂಗಡಿಗಳನ್ನು ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

 

ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇನ್ನು ಪ್ರತಿನಿತ್ಯ ಪೊಲೀಸರು ತನಿಖೆ ಹೆಸರಿನಲ್ಲಿ ಅಂಗಡಿಗಳಿಗೆ ಬಂದು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸುಖಾಸುಮ್ಮನೆ ಚಿನ್ನದ ಅಂಗಡಿ ಮಾಲೀಕರ ಹೆದರಿಸಿ ಬೆದರಿಸಿ ವಸೂಲಿಗೆ ಇಳಿದಿದ್ದಾರೆ ಪ್ರತಿನಿತ್ಯ ಹೊರ ಜಿಲ್ಲೆಗಳಿಂದ ಬರುವ ಪೊಲೀಸರು ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಬಂದು ವ್ಯಾಪಾರಿಗಳಿಗೆ ತೊಂದರೆ ಹಾಗೂ ಕಿರುಕುಳ ನೀಡುತ್ತಿದ್ದಾರೆ ಇನ್ನೂ ಏನಾದರೂ ಕೇಳಲು ಹೋದರೆ ಇಲ್ಲಸಲ್ಲದನ್ನು ಆರೋಪವನ್ನು ಮಾಡಿ ನಮ್ಮ ಮೇಲೆ ಕೇಸ್ ಗಳನ್ನು ಹಾಕುತ್ತೇವೆ ಎಂದು ಹೆದರಿಸಿ ಲಕ್ಷಾಂತರ ಹಣವನ್ನು ವಸೂಲಿ ಮಾಡುತ್ತಾರೆ ಎಂದು ಚಿನ್ನದ ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.

 

ಇನ್ನು ಹೊರ ಜಿಲ್ಲೆಗಳಿಂದ ಬರುವ ಪೊಲೀಸರು ಆರೋಪಿಗಳ ಹೆಸರಿನಲ್ಲಿ ಕೆಲವರನ್ನು ಕರೆತಂದು ಯಾವುದೇ ದಾಖಲೆಗಳು ಇಲ್ಲದೆ ಇದ್ದರೂ ಸಹ ಚಿನ್ನವನ್ನು ನೀಡಿರುತ್ತೇವೆ ಅವುಗಳನ್ನು ರಿಕವರಿ ಮಾಡಲು ಬಂದಿದ್ದೇವೆ ಎಂದು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದಾರೆ ಇಂತಹ ಕಿರುಕುಳದ ಮಧ್ಯೆ ನಾವು ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ನಮ್ಮ ಅಂಗಡಿಗಳ ಕೀಲಿಕೈಗಳನ್ನು ಪೊಲೀಸರಿಗೆ ನೀಡಲಿದ್ದೇವೆ ಎಂದು ತಮ್ಮ ಅಸಹಾಯಕತೆಯನ್ನು ಚಿನ್ನದ ಅಂಗಡಿ ಮಾಲೀಕರು ವ್ಯಕ್ತಪಡಿಸಿದ್ದಾರೆ.

 

ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಪೊಲೀಸರಿಗೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ ಇಂತಹ ಆತಂಕದ ನಡುವೆ ನಾವು ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ ಇನ್ನೂ ಪೊಲೀಸರು ಒಂದು ಲಕ್ಷಾಂತರ ರೂಗಳನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಅಂಗಡಿ ಮಾಲೀಕರುಗಳು ಆರೋಪಿಸಿದ್ದಾರೆ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version