ಜೆಡಿಎಸ್ ಮುಖಂಡ ಆಟಿಕ ಬಾಬು ಕಾರು ಅಡ್ಡಗಟ್ಟಿ ಹಲ್ಲೆಗೆ ಯತ್ನ……?????
ತುಮಕೂರು_ತುಮಕೂರು ನಗರದಲ್ಲಿ ದಿನದಿನ ಚುನಾವಣಾ ಕಾವು ಹೆಚ್ಚಾಗುತ್ತಿದ್ದು ತುಮಕೂರು ನಗರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಸಲುವಾಗಿ ಜೆಡಿಎಸ್ ಪಕ್ಷದ ಮುಖಂಡ ಆಟಿಕ ಬಾಬು ರವರು ಸ್ಥಳೀಯ ಮುಖಂಡರನ್ನು ಭೇಟಿ ಮಾಡುವ ಮೂಲಕ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ.
ಇನ್ನು ಆಟಿಕ ಬಾಬು ರವರು ಚುನಾವಣೆಗೆ ಸ್ಪರ್ಧಿಸಲು ಹಣೆಯಾಗುತ್ತಿದ್ದಂತೆ ಕೆಲ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಗೊಂದಲಕ್ಕೆ ಈಡಾಗಿರುವುದು ಕಂಡುಬಂದಿರುವ ಬೆನ್ನಲ್ಲೇ ತುಮಕೂರು ನಗರ ಜೆಡಿಎಸ್ ಪಕ್ಷದ ಆಕಾಂಕ್ಷಿ ಎನ್ ಗೋವಿಂದರಾಜು ರವರ ಬೆಂಬಲಿಗರು ಅಟಿಕ ಬಾಬು ರವರ ಕಾರನ್ನು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿರುವ ಘಟನೆ ತುಮಕೂರು ನಗರದ ಟೌನ್ ಟೌನ್ ಹಾಲ್ ನಲ್ಲಿ ನಡೆದಿದೆ.
ಇನ್ನು ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ ಟೌನ್ ಹಾಲ್ ನಲ್ಲಿರುವ ಜಲ್ಕ ಮಖಾನ್ ದರ್ಗಾ ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಹೊರಬಂದ ಬೊಮ್ಮನಹಳ್ಳಿ ಬಾಬು ರವರನ್ನ ಜೆಡಿಎಸ್ ಅಭ್ಯರ್ಥಿ ಎನ್ ಗೋವಿಂದರಾಜು ಹಿಂಬಾಲಕರು ಹಾಗೂ ಕಾರ್ಯಕರ್ತರು ಗೋವಿಂದರಾಜು ರವರು ತಮ್ಮ ಬಳಿ ಹಣ ಪಡೆದಿರುವ ವಿಡಿಯೋ ತೋರಿಸಿ ಎಂದು ಪಟ್ಟು ಹಿಡಿದು ಕಾರಿಗೆ ಮುತ್ತಿಗೆ ಹಾಕಿ ದಿಕ್ಕಾರ ಕೂಗಿ ಹಲ್ಲೆಗೆ ಯತ್ನಿಸಿದ್ದು ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲ ವ್ಯಕ್ತಿಗಳು ಅಟಿಕ ಬಾಬು ರವರ ರಕ್ಷಣೆಗೆ ಮುಂದಾದಾಗ ಸುಹೈಲ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿರುವುದು ಸಹ ನಡೆದಿದೆ.
ಇನ್ನು ದೊಡ್ಡ ಮಟ್ಟದಲ್ಲಿ ಗೋವಿಂದರಾಜು ಬೆಂಬಲಿಗರು ಆರ್ಥಿಕ ಬಾಬು ಕಾರನ್ನು ಸುತ್ತುವರಿದ ಹಿನ್ನೆಲೆಯಲ್ಲಿ ಅಟಿಕ ಬಾಬು ರವರು ಮತ್ತೊಂದು ಕಾರಿನಲ್ಲಿ ತೆರಳುವ ವೇಳೆ ಕೆಲ ಕಾರ್ಯಕರ್ತರು ಕಾರಣ ಅಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿಗೆ ಅಡ್ಡ ಮಲಗಿ ತಮ್ಮ ಆಕ್ರೋಶವನ್ನು ಹೊರಹಾಕಿ ದ ಘಟನೆಗೂ ಸಹ ಕಾರಣವಾಗಿದೆ.
ಇದೇ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಟಿಕ ಬಾಬು ರವರನ್ನ ತೆರಳಲು ದಾರಿ ಬಿಡಿಸಲು ಹರಸಾಹಸವೆ ಪಡುವಂತಾಯಿತು.
ಇನ್ನು ಬೃಹತ್ ಮಟ್ಟದ ಕಾರ್ಯಕರ್ತರು ಅಟಿಕ ಬಾಬು ರವರಿಗೆ ಗೆರಾವ್ ಹಾಕಿದ್ದು ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರ ತಂಡ ಪರಿಸ್ಥಿತಿಯನ್ನ ತಿಳಿಗೊಳಿಸಿದರು.
5 ಕೋಟಿ ಡೀಲ್ ಹಿಂದಿದೆಯ ರಹಸ್ಯ…..????
ಇನ್ನು ಆಟಿಕ ಬಾಬು ರವರಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ಎನ್ ಗೋವಿಂದರಾಜುರವರು ತಮ್ಮ ಕುಟುಂಬ ವರ್ಗದವರ ಮೂಲಕ 5 ಕೋಟಿ ಹಣವನ್ನು ಪಡೆದು ಕ್ಷೇತ್ರವನ್ನ ಬಿಟ್ಟು ಕೊಡುವುದಾಗಿ ಅಟಿಕಾ ಬಾಬು ರವರಿಗೆ ಗೋವಿಂದರಾಜುರವರು ಮಾತು ನೀಡಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿತ್ತು ಇದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಗೋವಿಂದರಾಜು ಹಿಂಬಾಲಕರು ಹಣ ಪಡೆದಿರುವ ವಿಷಯಕ್ಕೆ ಸಾಕ್ಷಿ ತೋರಿಸುವಂತೆ ಬಾಬು ರವರ ಕಾರಿಗೆ ಮುತ್ತಿಗೆ ಹಾಕಿರುವುದು ಎಲ್ಲ ವಿಷಯಕ್ಕೂ ಪುಷ್ಟಿ ನೀಡುವಂತಿದೆ.
ಘಟನೆಗೆ ಸಂಬಂಧಿಸಿದಂತೆ ಗೋವಿಂದರಾಜು ರವರು ಯಾವುದೇ ಸ್ಪಷ್ಟನೆ ನೀಡದೆ ಸುಮ್ಮನೆ ಇರುವುದು ಸಹ ಕಾರ್ಯಕರ್ತರಲ್ಲೂ ಸಹ ಗೊಂದಲ ಉಂಟಾಗಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಹಲ್ಲೆಗೊಳಗಾದ ಯುವಕನಿಂದ ದೂರು ದಾಖಲು.
ಶುಕ್ರವಾರ ರಾತ್ರಿ ಆಟ್ಟಿಕ ಬಾಬು ಕಾರು ಅಡ್ಡಗಟ್ಟಿದ ವೇಳೆ ಬಿಡಿಸಲು ಹೋದ ಯುವಕನ ಮೇಲೆ ಗೋವಿಂದರಾಜು ಬೆಂಬಲಿಗರು ಹಲ್ಲೆ ಮಾಡಿದ್ದು ಹಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯುವಕ ದೂರು ದಾಖಲಿಸಿದ್ದಾರೆ.