ಪರಿಸರದ ನಿಸ್ವಾರ್ಥ ಕಾಳಜಿಯನ್ನು ವಹಿಸುವುದು ರೈತರೇ:ಆರ್.ಕೆ.ನಂಜೇಗೌಡ
ದೇವನಹಳ್ಳಿ:ಚನ್ನರಾಯಪಟ್ಟಣ ರೈತರ ಹೋರಾಟ ಕೃಷಿಭೂಮಿ ಸ್ವಾಧಿನ ವಿರೋಧಿಸಿ ಧರಣಿ ಪ್ರಾರಂಭಿಸಿ 456 ದಿನಗಳಾಗಿದ್ದು,ಈ ರೀತಯಲ್ಲಿ ದೇಶಕ್ಕೆ ಅನ್ನ ಕೊಡುವ ರೈತನನ್ನು ಇಷ್ಟರ ಮಟ್ಟಿಗೆ ಅನುಚಿತವಾಗಿ ನಡೆಸಿಕೊಳ್ಳಬಾರದು, ಇದರಿಂದ ದೇಶದ ಆರ್ಥಿಕ ಪರಿಸ್ಥಿತಿಗೆ ಮಾರಕವಾಗುವುದು,ಪರಿಸರದ ನಿಸ್ವಾರ್ಥವಾಗಿ ಕಾಳಜಿಯನ್ನು ವಹಿಸುವುದು ಕೂಡ ರೈತರೇ ಅಂತಹ ರೈತರನ್ನು ಸಮಾಜದಲ್ಲಿ ಪ್ರತಿಯೊಬ್ಬರು ಗೌರವಿಸಬೇಕು ಹಾಗೂ ಜೊತೆ ಜೊತೆಯಲ್ಲಿ ಮಾತೃಭಾಷೆಯ ಕುರಿತು ಅಗಾಧ ಅಭಿಮಾನವನ್ನು ಬೆಳಸಿಕೊಳ್ಳಬೇಕು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಆರ್.ಕೆ. ನಂಜೇಗೌಡರು ಹೇಳಿದರು.
ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿ ರೈತರ ಭೂಸ್ವಾಧೀನ ಹೋರಾಟದ ಸ್ಥಳದಲ್ಲಿ ಎನ್.ರಾಜಗೋಪಾಲ್ ಸಂಸ್ಥಾಪಕ ಅಧ್ಯಕ್ಷರ ಸ್ಥಾಪಿಸಿದಂತಹ ದೇವನಹಳ್ಳಿ ತಾಲ್ಲೂಕು ಕನ್ನಡ ಕಲಾವಿದರ ಸಂಘದ ವತಿಯಿಂದ “ಕನ್ನಡದ ದೀಪ” ಸಾಂಸ್ಕೃತಿಕ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದಿನ ಜನನಾಯಕರು ಎಂದುಬಬಿಂಬಿಸಿಕೊಂಡಿರುವ ರಾಜಕಾರಣೀಗಳು ಗೆಲುವು ಸಾಧಿಸಿ ಅವರದೇ ಆದ ಐಶಾರಾಮಿ ಜೀವನವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದಾರೆ, ಸಮಾಜದ ಕುರಿತು ಮುಖ್ಯವಾಗಿ ರೈತರ ಬಗ್ಗೆ ಕಾಳಜಿಯನ್ನು ಯಾರು ಗಮನ ಹೊಂದಿಲ್ಲ ಎಂಬುದು ವಿಷಾದನೀಯ ಸಂಗತಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಪ್ರೋ. ಬಿ.ಎನ್.ಕೃಷ್ಣಪ್ಪ ಮಾತನಾಡಿ ನಮ್ಮ ನಾಡು ಎಲ್ಲ ರೀತಿ ಪ್ರಕೃತಿ ವಿಕೋಪಗಳನ್ನು ಎದುರಿಸದ ಸುರಕ್ಷಿತ ಸ್ಥಳ ಎಂದು ಕೃಷಿಭೂಮಿಗಳನ್ನು ಕಬಳಿಸಿಕೊಂಡು ಕೈಗಾರಿಕೆಗಳ ಹೆಸರಿನಲ್ಲಿ ಉದ್ಯಮಿಗಳ ಶ್ರೇಯೋಭಿಲಾಶೆಯನ್ನು ಹೊಂದಿರುವದನ್ನು ನಾವು ಸಹ ವಿರೋಧಿಸುತ್ತೇವೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಧ್ಯಕ್ಷ ಚಂದ್ರಶೇಖರ್ ಮಾತನಾಡಿ ಹಿಂದಿನ ಸರ್ಕಾರ ಚುನಾವಣೆಯ ಸಮಯದಲ್ಲಿ ಮನವೊಲಿಸುವ ಕಾರ್ಯ ನಡೆಸಿದೆ ಇಂದಿನ ಸರ್ಕಾರಕ್ಕೆ ಮಾಹಿತಿ ಮುಟ್ಟುವಂತೆ ಹೋರಾಟವನ್ನು ಚುರುಕುಗೊಳಿಸಿ ನ್ಯಾಯವನ್ನು ಶೀಘ್ರವಾಗಿ ಪಡೆಯುವಂತಾಗಬೇಕು,ನಮ್ಮ ಈ ಹೋರಾಟ ಉತ್ತಮ ಫಲಶ್ರುತಿಯ ನಂತರ ಹೋರಾಟಗಾರರ ಮಾಹಿತಿಯೊಂದಿಗೆ ಶಿಲಾಸನವನ್ನು ಅಳವಡಿಸಿ ಮುಂದಿನ ಪೀಳಿಗೆಯ ಮಕ್ಕಳಿಗೆ ಮಾರ್ಗದರ್ಶನವಾಗಲಿದೆ ಎಂದು ಹೇಳಿದರು.
ಚನ್ನರಾಯಪಟ್ಟಣ ರೈತರಾದಂತಹ ನಂಜಪ್ಪ ಮತ್ತು ನಾರಾಯಣಸ್ವಾಮಿ ರವರಿಗೆ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ದೇವನಹಳ್ಳಿ ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ಡಾ.ಮೋಹನ್ ಬಾಬು ಮುಖಂಡರಾದ ನಂಜಪ್ಪ, ಸುಬ್ರಮಣಿ,ಮುನಿರಾಜು,ಭೂಸ್ವಾಧೀನ ಹೋರಾಟ ಸಮಿತಿಯ ಮುಖಂಡರಾದ ಮಾರೇಗೌಡರು ಮತ್ತು ತಿಮ್ಮರಾಯಪ್ಪ ,ಕಾರಹಳ್ಳಿ ಶ್ರೀನಿವಾಸ್,ಸಂಚಾಲಕ ಪ್ರಮೋದ್ ,ವೆಂಕಟರಮಣಪ್ಪ ಸೇರಿದಂತೆ ಕಲಾವಿದರು ಮತ್ತು ರೈತರು ಉಪಸ್ಥಿತರಿದ್ದರು.
ಮಂಜು ಬೂದಿಗೆರೆ
9113813926