ನಕಲಿ ಎನ್ಕೌಂಟರ್ ವಿರುದ್ಧ ಸಿಡಿದೆದ್ದ ಭಾರತ.
ಬೆಂಗಳೂರು_ಅಮಾಯಕರ ಎನ್ಕೌಂಟರ್ ಗೆ ಸಮಾಜ ಹಾಗೂ ದೇಶದಲ್ಲಿ ಸ್ಥಾನವಿಲ್ಲ ಎಂಬುದು ಬಹಳ ಮುಖ್ಯವಾದ ಸಂಗತಿಯಾಗಿದೆ ದೇಶದ ಪ್ರತಿಯೊಬ್ಬ ನಾಗರಿಕರು ಕಾನೂನನ್ನು ಗೌರವಿಸುವಂಥಗಾಬೇಕು ಎಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಾಯಭಾರಿಗಳ ಸಂಘಟನೆಯ ಮತ್ತು ಸಮಿತಿಯ(IHRAO) ರಾಷ್ಟ್ರೀಯ ಉಪಾಧ್ಯಕ್ಷರಾದ ಡಾಕ್ಟರ್ ಲೋಹಿತ್ ಮುನಿಯಪ್ಪ ಅವರು ಹೈದರಾಬಾದ್ನ ಪಶುವೈದ್ಯ ಮೇಲಿನ ಸಾಮೂಹಿಕ ಅತ್ಯಾಚಾರ ಆರೋಪಿಗಳ ವಿರುದ್ಧ ನಡೆದ ಎನ್ಕೌಂಟರ್ ಘಟನೆಯನ್ನು ಖಂಡಿಸಿದ್ದಾರೆ.
ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಾಯಭಾರಿಗಳ ಸಂಘಟನೆ ಮತ್ತು ಸಮಿತಿಯು ತನ್ನ ವರದಿಯಲ್ಲಿ ಹೇಳಿರುವಂತೆ ನಕಲಿ ಎನ್ಕೌಂಟರ್ ಘಟನೆಯೂ ಕೊಲೆಗೆ ಸಮಾನವಾದದ್ದು ಎಂದು ಡಾ.ಲೋಹಿತ್ ಮುನಿಯಪ್ಪ ರವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಇನ್ನು 2019 ರಲ್ಲಿ ಹೈದರಾಬಾದ್ನ 26ರ ಹರೆಯದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ಮೂಲಕ ಕೊಂದಿದ್ದರು. ಅದೇ ನವಂಬರ್ ತಿಂಗಳಿನಲ್ಲಿ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಾದ ಮಹಮ್ಮದ್ ಆರೀಫ್, ಚಿಂತಕುಂಟ ಚೆನ್ನಕೇಶವ, ಶಿವ ಮತ್ತು ನವೀನ್ ಅವರನ್ನು ಪೊಲೀಸರು ಬಂಧಿಸಿ ಹೈದರಾಬಾದ್ ಬಳಿ ಆರೋಪಿಗಳನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದರು.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ಎನ್ಕೌಂಟರ್ ನಂತರ ದೇಶಾದ್ಯಂತ ಆರೋಪಿಗಳ ವಿರುದ್ಧ ಪೊಲೀಸರು ನಡೆಸಿದ ಎನ್ಕೌಂಟರ್ ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ನಂತರ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಬ್ಯೂರೋ ಗೌರವಾನ್ವಿತ ಸುಪ್ರೀಂಕೋರ್ಟ್ ನಿಂದ ರಚಿಸಲ್ಪಟ್ಟ ಈ ಸತ್ಯಶೋಧನಾ ತಂಡದ ಭಾಗವಾಗಿದ್ದ ಸಿಬಿಐ ನಿರ್ದೇಶಕ ಡಾಕ್ಟರ್ ಬಿ.ಆರ್ ಕಾರ್ತಿಕೇಯನ್ ಅವರನ್ನು ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಾಯಭಾರಿಗಳ ಸಂಘಟನೆ ಮತ್ತು ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಲೋಹಿತ್ ಮುನಿಯಪ್ಪ ನವರು ಕಾರ್ತಿಕೇಯನ್ರವರನ್ನು ಅಭಿನಂದಿಸಿದ್ದಾರೆ.