ಡಿಸೆಂಬರ್ 12 ರಂದು ಹಿರೇಮಠದ ತಪೋವನ ಉದ್ಘಾಟನೆ_ಶಿವಾನಂದ ಶಿವಾಚಾರ್ಯ ಶ್ರೀ
ತುಮಕೂರಿನ ಹಿರೇಮಠದ ವತಿಯಿಂದ ನೂತನವಾಗಿ ನಿರ್ಮಾಣ ಮಾಡಿರುವ ತಪೋವನ ಉದ್ಘಾಟನಾ ಕಾರ್ಯಕ್ರಮವನ್ನು ಡಿಸೆಂಬರ್ 12ರಂದು ನೆಲಮಂಗಲ ತಾಲೂಕಿನ ಹಳೆ ನಿಜಗಲ್ ನಲ್ಲಿ ಆಯೋಜಿಸಲಾಗಿದೆ ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಶ್ರೀಗಳು ತಿಳಿಸಿದರು.
ಇನ್ನು ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ನೆರವೇರಿಸಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯ ಮತ್ತು ಆಶೀರ್ವಚನವನ್ನು ಸುತ್ತೂರು ಮಠದ ಶಿವರಾತ್ರಿ ದೇಶಕೇಂದ್ರ ಮಹಾಸ್ವಾಮಿಗಳು, ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದ ಮಹಾಸ್ವಾಮಿಗಳು, ಬೆಂಗಳೂರಿನ ಶಾಂತಲಿಂಗೇಶ್ವರ ವಿರಕ್ತ ಮಠ ದ ಶ್ರೀಗಳಾದ ಜಡೆಯ ಶಾಂತಲಿಂಗ ಮಹಾಸ್ವಾಮಿಗಳು, ಹಾಗೂ ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಲಿದ್ದು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಡಾ. ಜಿ ಪರಮೇಶ್ವರ್, ಸಚಿವರಾದ ಸೋಮಣ್ಣ ,ಬಿ.ಸಿ ನಾಗೇಶ್, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರ, ಸಚಿವ ಮಾಧುಸ್ವಾಮಿ ಸೇರಿದಂತೆ ಹಲವು ನಾಯಕರು ಮುಖಂಡರು ಕಾರ್ಯಕ್ರಮದ ಲ್ಲಿ ಭಾಗವಹಿಸಲಿದ್ದು ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಹ ಭಾಗವಹಿಸಬೇಕು ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.
ಇನ್ನು ಶ್ರೀಮಠದ ವತಿಯಿಂದ ನೂತನವಾಗಿ ನಿರ್ಮಿಸಿರುವ ತಪೋವನ ಹಿರೇಮಠದ ಕನಸಿನ ಕೂಸಾಗಿದ್ದು ಸುಮಾರು ಎರಡುವರೆ ಪ್ರದೇಶದಲ್ಲಿ ನೂತನವಾಗಿ ತಪೋವನವನ್ನು ನಿರ್ಮಾಣವಾಗಿದ್ದು ಕಲಿಯುವುದಕ್ಕೂ ಸಿದ್ಧ ಕಲಿಸುವುದಕ್ಕೂ ಬದ್ಧ ಎನ್ನುವ ಘೋಷವಾಕ್ಯದೊಂದಿಗೆ ಶ್ರೀ ಮಠದ ಕಾರ್ಯಗಳು ಮುಂದಿನ ದಿನದಲ್ಲಿ ಮತ್ತಷ್ಟು ವಿಸ್ತಾರ ಗೊಳಿಸಲಾಗುವುದು ಎಂದರು.
ಆ ಮೂಲಕ ಮಠದ ಭಕ್ತರಿಗೆ ನೂತನ ತಪೋವನದಲ್ಲಿ ಧ್ಯಾನ ಮಂದಿರ ಗುರು ದರ್ಶನ ಮಂದಿರ ಧ್ಯಾನನಿರತ ಶಿವನ ಪ್ರತಿಮೆ , ಸತ್ಸಂಗ ಯೋಗ ಮಂದಿರ, ಜಲಲಿಂಗ ಕಾರಂಜಿ ಗ್ರಂಥಾಲಯ ಸೇರಿದಂತೆ ಹಲವು ವಿಭಾಗಗಳಲ್ಲಿ ತಪೋವನವನ್ನ ನಿರ್ಮಾಣ ಮಾಡಲಾಗಿದೆ ಎಂದರು.
ಇನ್ನು ಶ್ರೀಮಠ ಬೆಳೆದು ಬಂದ ಹಾದಿ ಕಠಿಣವಾಗಿದ್ದು ಮಠದ ಭಕ್ತಾದಿಗಳು ಸಾರ್ವಜನಿಕರು ಹಾಗೂ ದಾನಿಕರ ಸಹಕಾರದೊಂದಿಗೆ ತಪೋವನವನ್ನ ನಿರ್ಮಿಸಲಾಗಿದೆ ಮುಂದಿನ ದಿನದಲ್ಲಿ ಮತ್ತಷ್ಟು ಸಮಾಜಕ್ಕೆ ಆಧ್ಯಾತ್ಮ ಕೇಂದ್ರವಾಗಿ ಮತ್ತಷ್ಟು ಮೇಲ್ದರ್ಜೆಗೆ ಏರಿಸುವ ಪ್ರಯತ್ನವನ್ನು ಶ್ರೀಮಠದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದರು.
ವರದಿ_ಮಾರುತಿ ಪ್ರಸಾದ್ ತುಮಕೂರು.