ನಿರೂಗಂಟಿ ನೌಕರರ ಸಂಘ ಉದ್ಘಾಟನೆ ಮತ್ತು ನೌಕರರ ಕುಂದು ಕೊರತೆಗಳ ಚರ್ಚೆ

ನಿರೂಗಂಟಿ ನೌಕರರ ಸಂಘ ಉದ್ಘಾಟನೆ ಮತ್ತು ನೌಕರರ ಕುಂದು ಕೊರತೆಗಳ ಚರ್ಚೆ

 

ಚಾಮರಾಜನಗರ :- ಜಿಲ್ಲೆಯ ವಿವಿಧ ತಾಲೂಕು ವ್ಯಾಪ್ತಿಯಲ್ಲಿ ಬರುವ ಕಾವೇರಿ ನೀರಾವರಿ ಸರಬರಾಜು ಮತ್ತು ಕಬಿನಿ ನೀರು ಸರಬರಾಜು ಅಡಿಯಲ್ಲಿ ಬರುವ ನೀರುಗoಟಿ ನೌಕರರ ಸಂಘವನ್ನು ಉದ್ಘಾಟಿಸಿದರು ನಂತರ ಮಾತನಾಡಿದ ರಾಜ್ಯ ಛಲವಾದಿ ಸಂಘದ ರಾಜ್ಯ ಉಪಾಧ್ಯಕ್ಷರು ಬಸವರಾಜು ಅವರು ನೀರುಗoಟಿ ನೌಕರರ ಕುಂದು ಕೊರೆತೆಗಳ ಬಗ್ಗೆ ಮಾತನಾಡಿದ ಅವರು, ನೌಕರರ ವೇತನ,ಹೊರಗುತ್ತಿಗೆಕೆಲಸ,ಮತ್ತು ವಿವಿಧ ಜಿಲ್ಲೆಗಳಲ್ಲಿ ನೌಕರರಿಗೆ ನೀಡುತ್ತಿರುವ ವೇತನ ಮತ್ತು ಎಲ್ಲಾ ಬಗೆಯ ಸೌಲಭ್ಯಗಳನ್ನು ಈ ಸಂಘದಲ್ಲಿ ವಂಚಿತರಾದ ಎಲ್ಲಾ ಪದಾಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಹೋರಾಟ ನೆಡೆಸಿ, ಹಕ್ಕೋತ್ತಾಯಗಳನ್ನು ಇಡೇರಿಸಲು ಸದಾ ನಿಮ್ಮ ಬೆಂಬಲಕ್ಕೆ ನಮ್ಮ ಸಂಘಟನೆಯು ಸಿದ್ಧವಾಗಿರುತ್ತದೆ ಎಂದು ತಿಳಿಸಿದರು.

 

 

 

 

 

 

 

 

 

ಈ ವೇಳೆ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಕಮಲ್ ಅವರು ಈ ಹಿಂದಿನಗಳಲ್ಲಿ ನಾನು ನೋಡಿರುವ ಹಾಗೆ ನೌಕರರ ಕುಂದು ಕೊರತೆಯನ್ನು ಸರಿಯಾಗಿ ಗಮನಿಸದ ಅಧಿಕಾರದ ದುರುಪಯೋಗ ಮಾಡಿಕೊಂಡಿರುವ ಅಧಿಕಾರಿಗಳನ್ನು ಒಳಗೊಂಡ ವಿಭಾಗದಲ್ಲಿ ಅತೀ ದೊಡ್ಡ ಅಕ್ರಮದ ವಿರುದ್ಧ ಹೋರಾಟ ನಡೆಸಿದ್ದೇನೆ. ಈ ಮುಂದೆಯೂ ಸಹ ಈ ನೀರುoಗಟ್ಟಿ ಸಂಘದ ಪರವಾಗಿ ಮತ್ತು ಎಲ್ಲಾ ಪದಾಧಿಕಾರಿಗಳ ಪರವಾಗಿ ನಿಲ್ಲುತ್ತೇನೆ, ಎಂದು ನೌಕರರಿಗೆ ಧೈರ್ಯ ತುಂಬುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

 

 

 

 

 

 

 

 

 

 

ನಂತರ ಮಾತನಾಡಿದ ರೈತ ಮುಖಂಡರಾದ ದಶರಥ ಅವರು ನೌಕರರ ಸಂಘದ ಕೆಲಸಗಳು, ಸಂಘದ ಉದ್ಧೇಶಗಳು, ಅಧಿಕಾರಿಗಳಿಂದ ನೌಕರರಿಗೆ ಆಗುತ್ತಿರುವ ಆರ್ಥಿಕ ಸಂಕಷ್ಟವನ್ನು ಪರಿಹಾರ ಕಂಡುಕೊಳ್ಳುವ ದಾರಿಯ ಬಗ್ಗೆ ಮಾತನಾಡುವ ಮೂಲಕ ನೌಕರರನ್ನು ಹೊರಗುತ್ತಿಗೆ ಕೆಲಸಗಾರರಾಗಿ ಮಾಡಿಕೊಳ್ಳಬೇಕು , ಪ್ರತಿ ತಿಂಗಳು ವೇತನ ನೇರ ಖಾತೆಗೆ ಜಮಾ ಆಗಬೇಕು, ಇಪಿಎಫ್ ಸೌಲಭ್ಯ ಕಲ್ಪಿಸಿಕೊಡಬೇಕು ಡಿ ಗ್ರೂಪ್ ನೌಕರರ ಹತ್ತಿರವು ಕೂಡ ಅವರ ತಿಂಗಳ ಸಂಬಳ ಪಡೆಯಲು ಎರಡರಿಂದ ಮೂರು ಸಾವಿರ ಲಂಚ ಪಡೆದುಕೊಳ್ಳುವ ಭ್ರಷ್ಟ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳ ಪರವಾಗಿ ಮಾತನಡಿದರು.

 

 

 

 

 

 

 

 

 

 

 

 

 

 

ಇನ್ನು ಇದೆ ಸಂದರ್ಭದಲ್ಲಿ.ದಲಿತ ಸಂಘರ್ಷ ಸಮಿತಿ ಮುಖಂಡರು. ಬಸವರಾಜ್. ರೈತ ಮುಖಂಡ ದಶರಥ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಕಮಲ್. ನಾಗರೀಕ ಹಿತ ರಕ್ಷಣೆ ಸಮಿತಿ ಅಧ್ಯಕ್ಷರು ನಟರಾಜ್ ಮಾಳಿಗೆ. ಮಾಲಂಗಿ ಬಸವರಾಜ್. ಕೊಳ್ಳೇಗಾಲ ಛಾಯಾ ಗ್ರಾಹಕ ಸಂಘ ಅಧ್ಯಕ್ಷರು ಸುರೇಶ್ ಕುಟ್ಟಿ. ಸರಗೂರ್ ವೀರಭದ್ರ ಸ್ವಾಮಿ. ಸಂಘದ ಅಧ್ಯಕ್ಷರು ಪಿ ಸುರೇಶ್ ಶರಗೂರು ಲೋಕೇಶ್ ಮದ್ದೂರು. ಕಾರ್ಯದರ್ಶಿ ಸುರೇಶ್ ಕಾಮಗೆರೆ. ಕಾಮರಾಜ್. ಕೃಷ್ಣ. ಚಂದ್ರು ಹೊನ್ನೂರು. ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version