ಶಾಸಕರ ಹಿಂಬಾಲಕನ ಆಸ್ತಿ ಆಯಿತೆ… ಪಾಲಿಕೆಯ ಆದಾಯ…..?

ಶಾಸಕರ ಹಿಂಬಾಲಕನ ಆಸ್ತಿ ಆಯಿತೆ… ಪಾಲಿಕೆಯ ಆದಾಯ…..?

 

ತುಮಕೂರು_  ನಾಡಿನೆಲ್ಲೆಡೆ ದಸರಾ ಹಾಗೂ ವಿಜಯದಶಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ತುಮಕೂರು ನಗರದಲ್ಲಿ ಸಹ ದಸರಾ ಸಮಿತಿ ವತಿಯಿಂದ ಸಂಭ್ರಮದ ದಸರಾ ಆಚರಣೆಗೆ ತುಮಕೂರು ದಸರಾ ಸಮಿತಿ ತಯಾರಿ ಕೈಗೊಂಡಿತ್ತು ಅದರಂತೆ ದಸರಾ ಉತ್ಸವ ತುಮಕೂರಿನಲ್ಲಿ ಆಯೋಜನೆಗೊಂಡಿತ್ತು.

 

ದಸರಾ ಹಬ್ಬದ ಶುಭಾಶಯಗಳನ್ನು ಕೋರಲು ತುಮಕೂರು ನಗರದಲ್ಲಿ ಸಂಘಟನೆಗಳ ಮುಖಂಡರು ವಿವಿಧ ಪಕ್ಷದ ಪದಾಧಿಕಾರಿಗಳು ಸಾರ್ವಜನಿಕರಿಗೆ ಶುಭ ಕೋರುವ ಸಲುವಾಗಿ ತುಮಕೂರು ನಗರದಾದ್ಯಂತ ಹಲವು ಕಡೆ ಫ್ಲಕ್ಸ್ ಗಳನ್ನು ಅಳವಡಿಸಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ತುಮಕೂರು ನಗರದಲ್ಲಿ ಅಳವಡಿಸಿರುವ ಸಾಕಷ್ಟು ಫ್ಲೆಕ್ಸ್ಗಳಿಗೆ ಅನುಮತಿ ಪತ್ರವಿಲ್ಲದೆ ಅಕ್ರಮವಾಗಿ ಫ್ಲಕ್ಸ್ ಗಳನ್ನು ಕಟ್ಟಲಾಗಿದೆ.

ಇಂತಹ ಅಕ್ರಮವಾಗಿ ಕಟ್ಟಿರುವ ಫ್ಲಕ್ಸ್ ಗಳಿಗೆ ಪಾಲಿಕೆ ಅಧಿಕಾರಿಗಳ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು…. ಇದಕ್ಕೆ ಪುಷ್ಟಿ ನೀಡುವಂತೆ ತುಮಕೂರು ಶಾಸಕರ ಹಿಂಬಾಲಕರಾದ ಯುವ ಮುಖಂಡರೊಬ್ಬರು ದಸರಾ ಹಬ್ಬದ ಪ್ರಯುಕ್ತ ಅಳವಡಿಸಿರುವ ಫ್ಲಕ್ಸ್ ಗಳಿಗೆ ಇಂತಿಷ್ಟು ಹಣ ಪಡೆದು ಪಾಲಿಕೆ ಅಧಿಕಾರಿಗಳಿಗೆ ನಾನು ನೋಡಿಕೊಳ್ಳುತ್ತೇನೆ ಎಂದು ಮೌಖಿಕವಾಗಿ ಆದೇಶ ನೀಡುತ್ತಾ ತುಮಕೂರಿನ ಕೆಲ ಸರ್ಕಲ್ ಗಳಲ್ಲಿ ಫ್ಲೆಕ್ಸ್ ಗಳನ್ನು ಅಳವಡಿಸಿದ್ದಾರೆ ಎನ್ನುವ ಗಂಭೀರ ಆರೋಪವೊಂದು ಕೇಳಿಬಂದಿದೆ .

 

ಪಾಲಿಕೆಗೆ ಒಂದು ರೀತಿ ಆದಾಯ ಮೂಲವಾಗಿರುವ ಫ್ಲಕ್ಸ್ ಅಳವಡಿಕೆಗೆ ಸಂಬಂಧಿಸಿದಂತೆ ತುಮಕೂರಿನ ಶಾಸಕರ ಹಿಂಬಾಲಕರೋಬ್ಬರು ತಾವೇ ಪಾಲಿಕೆ ಅಧಿಕಾರಿಗಳ ರೀತಿ ವರ್ತಿಸುತ್ತಾರೆ. ಮುಖಂಡರು ಹಾಗೂ ಕೆಲ ಸಾರ್ವಜನಿಕರನ್ನು ದಿಕ್ಕುತಪ್ಪಿಸಿ ಅಳವಡಿಸಿರುವ ಅಕ್ರಮ ಫ್ಲೆಕ್ಸ್ ಗಳಿಗೆ ಸಾತ್ ನೀಡುತ್ತಿದ್ದಾನೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

 

ತುಮಕೂರು ಮೇಯರ್ ಬಿ.ಜಿ ಕೃಷ್ಣಪ್ಪ ಅಭಿಮಾನಿಗಳ ಸಂಘದ ಹೆಸರಿನಲ್ಲಿ ಅಳವಡಿಸಿರುವ ಫ್ಲೆಕ್ಸ್ ಗೆ ಅನುಮತಿ ಬೇಡವೆ…..?

ತುಮಕೂರು ನಗರದ ಬದ್ರಮ್ಮ ವ್ರುತ್ತದಲ್ಲಿ ದಸರಾ ಹಾಗೂ ವಿಜಯದಶಮಿ ಹಬ್ಬಕ್ಕೆ ಶುಭ ಕೋರಲು ಅಳವಡಿಸಿರುವ ತುಮಕೂರು ಮೇಯರ್ ಅವರ ಭಾವಚಿತ್ರದೊಂದಿಗೆ  ಬಿಜಿ ಕೃಷ್ಣಪ್ಪ ಅಭಿಮಾನಿಗಳ ಸಂಘದ ಹೆಸರಿನಲ್ಲಿ  ಫ್ಲಕ್ಸ್ ಒಂದನ್ನ ಅಳವಡಿಸಲಾಗಿದೆ ಈ ಫ್ಲೆಕ್ಸ್ ಗೆ ಯಾವುದೇ ಆದೇಶ ಪತ್ರ ಇಲ್ಲದೆ ಅಕ್ರಮವಾಗಿ ಫ್ಲೆಕ್ಸ್ ಕಟ್ಟಲಾಗಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪಾಲಿಕೆ ಮೇಯರ್ ರವರೇ ಈ ರೀತಿ ಫ್ಲಕ್ಸ್ ಅಳವಡಿಸುತ್ತಾರೆ ಎಂದರೆ ಮಿಕ್ಕವರ ಪಾಡೇನು ಅದೇನೇ ಇರಲಿ ತುಮಕೂರು ಮಹಾನಗರ ಪಾಲಿಕೆಯ ಮೇಯರ್ ರವರೇ ಆಗಲಿ ಅವರ ಅಭಿಮಾನಿಗಳ ಸಂಘದ ಹೆಸರಿನಲ್ಲಿ  ಸರ್ಕಾರಿ ಆದೇಶವನ್ನು  ಗಾಳಿಗೆ ತೂರಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ದಸರಾ ಸಮಿತಿಯ ಫ್ಲೆಕ್ಸ್ಗಳಿಗೆ ಅನುಮತಿ ಪತ್ರ ಇದ್ದು ಅದನ್ನು ಹೊರತುಪಡಿಸಿ ವಿವಿಧ ಸರ್ಕಲ್ ಗಳಲ್ಲಿ ಅಳವಡಿಸಿರುವ ಸಾಕಷ್ಟು ಫ್ಲಕ್ಸ್ ಗಳಿಗೆ ಯಾವುದೇ ಆದೇಶ ಪತ್ರ ಇಲ್ಲದಿರುವುದು ಸ್ಪಷ್ಟವಾಗಿದೆ.

 

ಇನ್ನು ಪಾಲಿಕೆ ವತಿಯಿಂದಲೇ ಆದೇಶ ಪತ್ರ ಇಲ್ಲದೆ ಫಲಕಗಳನ್ನು ಅಳವಡಿಸಲು ಅನುಮತಿ ನೀಡಲಾಗಿದೆಯೇ…? ಇದಕ್ಕೆ ಪಾಲಿಕೆ ಅಧಿಕಾರಿಗಳು ಉತ್ತರ ನೀಡಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

 

ಮುಂದಾದರು ಇಂತಹ ಅಕ್ರಮ ಫ್ಲಕ್ಸ್ ಗಳಿಗೆ ಪಾಲಿಕೆ ಕಡಿವಾಣ ಹಾಕಬೇಕಾಗಿದೆ ಹಾಗೂ ಕೆಲ ರಾಜಕೀಯ ಪಕ್ಷಗಳ ಮುಖಂಡರ ಹಿಂಬಾಲಕರೇ ಪಾಲಿಕೆ ಅಧಿಕಾರಿಗಳ ಇತಿ ವರ್ತಿಸುತ್ತಾ ಅಕ್ರಮಗಳಿಗೆ ಸಾತ್ ನೀಡುವ ಇಂತಹ ಪುಡಾರಿಗಳಿಗೆ ಪಾಲಿಕೆ ಕಡಿವಾಣ ಹಾಕುವುದೇ….. ಎಂದು ಕಾದುನೋಡಬೇಕಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version