ಕೆಲವೊಮ್ಮೆ ವೈದ್ಯರು ನಮಗೆ ಪ್ರತೀ ದಿನವೂ ಇಡ್ಲಿಯನ್ನು ತಿನ್ನಲು ಸಲಹೆಯನ್ನು ನೀಡುತ್ತಾರೆ. ಆದರೆ ಯಾತಕ್ಕಾಗಿ ತಿನ್ನಬೇಕು ಅನ್ನುವ ಮಾಹಿತಿಯನ್ನು ಸಹ ಹೇಳಿರುತ್ತಾರೆ. ಹಾಗೆಯೇ ಇಲ್ಲಿ ಈ ಲೇಖನದಲ್ಲಿ ಪ್ರತೀ ದಿನ ಇಡ್ಲಿಯನ್ನು ತಿನ್ನುವುದರಿಂದ ಏನೆಲ್ಲ ಪ್ರಯೋಜನಗಳು ಇವೆ ಅನ್ನೋದನ್ನ ತಿಳಿದುಕೊಳ್ಳೋಣ.
ಇಡ್ಲಿಯಲ್ಲಿ ಹಲವಾರು ರೀತಿಯ ಲಾಭಗಳು ಇವೆ. ಮುಖ್ಯವಾಗಿ ಇಡ್ಲಿಯಲ್ಲಿ ವಿಟಾಮಿನ್ಸ್ ಮತ್ತು ಪ್ರೊಟೀನ್ ಗಳು ಹೇರಳವಾಗಿ ದೊರೆಯುತ್ತವೆ ಹಾಗೆ ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಕೂಡಾ ಜಾಸ್ತಿ ಇರತ್ತೆ. ಇಡ್ಲಿಗೆ ಎಂದು ನಾವು ಮೊದಲೇ ಹಿಟ್ಟು ತಯಾರಿಸಿ ಇಡುವುದರಿಂದ ಇದರಲ್ಲಿ ಮತ್ತಷ್ಟು ಹೆಚ್ಚು ವಿಟಾಮಿನ್ಸ್ ಮತ್ತು ಪ್ರೊಟೀನ್ ಗಳು ನಮಗೆ ದೊರೆಯುತ್ತವೆ ವಿಟಮಿನ್ ಬಿ ಕೂಡಾ ದೊರೆಯುತ್ತದೆ. ಇಡ್ಲಿಯನ್ನು ತಯಾರು ಮಾಡೋಕೆ ಎಣ್ಣೆಯ ಅವಶ್ಯಕತೆ ಬರುವುದಿಲ್ಲ ಹಾಗಾಗಿ ಇಡ್ಲಿ ತಿನ್ನುವವರಿಗೆ ಇಡ್ಲಿ ತಿಂದರೆ ಎಲ್ಲಿ ನಮಗೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುತ್ತದೆಯೋ ಅನ್ನುವ ಚಿಂತೆ ಕಾಡುವುದಿಲ್ಲ. ಹಾಗಾಗಿ ನಮ್ಮ ಶರೀರದ ತೂಕವನ್ನು ಇಳಿಸಿಕೊಳ್ಳಲು ಸಹ ಇಡ್ಲಿ ಸಹಾಯಕಾರಿ ಆಗಿದೆ. ಬೆಳಗಿನ ಸಮಯದಲ್ಲಿ ಇಡ್ಲಿಯನ್ನು ಸೇವಿಸುವುದರಿಂದ ಶಕ್ತಿ ಕೂಡಾ ಹೆಚ್ಚುತ್ತದೆ.
ಇಡ್ಲಿ ಈಗ ದಕ್ಷಿಣ ಭಾರತದಲ್ಲಿ ಮಾತ್ರ ಅಲ್ಲದೇ ಇಡೀ ಪ್ರಪಂಚದಾದ್ಯಂತ ಪ್ರಸಿದ್ಧಿಯನ್ನು ಹೊಂದಿದೆ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಯಾವುದೇ ವಯಸ್ಸಿನವರಾದರೂ ಸಹ ಇಡ್ಲಿಯನ್ನು ಸೇವಿಸಬಹುದು. ಯಾಕಂದರೆ ಇದು ತುಂಬಾ ಸರಳ ಹಾಗೂ ಮೃದುವಾಗಿ ಇರುವುದರಿಂದ ಬಹಳ ಸುಲಭವಾಗಿ ಜೀರ್ಣ ಆಗುತ್ತದೆ. ಹೀಗಾಗಿ ಅನಾರಿಗ್ಯದಿಂದ ಬಳಲುವ ಜನರಿಗೂ ಕೂಡಾ ಇಡ್ಲಿ ಸೂಕ್ತ ಆಹಾರ ಎಂದು ವೈದ್ಯರು ಸಲಹೆ ನೀಡುತ್ತಾರೆ. ಇನ್ನು ಇಡ್ಲಿಯನ್ನ ಮನೆಯಲ್ಲಿ ತಿಂದರೂ ಸರಿ ಹೊರಗಡೆ ತಿಂದರೂ ಸರಿ ರುಚಿಯಲ್ಲಿ ಯಾವುದೇ ಬೇಧ ಇರದ ಕಾರಣ ಎಲ್ಲರೂ ತಿನ್ನಲು ಇಷ್ಟ ಪಡುತ್ತಾರೆ. ಪ್ರತೀ ದಿನ ಒಂದೇ ರೀತಿಯ ಇಡ್ಲಿ ತಿನ್ನೋಕೆ ಬೇಜಾರ್ ಆದ್ರೆ ಅದರ ಜೊತೆಗೆ ಹಾನುಗಳನ್ನು ಸೇರಿಸಿದರೆ ಬೇರೆ ರುಚಿಯನ್ನೇ ನೀಡುತ್ತದೆ. ಹಣ್ಣುಗಳನ್ನು ಸೇರಿಸುವುದರಿಂದ ಇಡ್ಲಿ ಇನ್ನೂ ಆರೋಗ್ಯದಾಯಕ ಎಂದೇ ಹೇಳಬಹುದು. ಹೀಗೆ ಹಲವಾರು ಲಾಭ ಇರುವ ಇಡ್ಲಿಯನ್ನು ದಿನಕ್ಕೆ ಅಬ್ಬಬ್ಬಾ ಅಂದ್ರೂ ಒಂದು ಪ್ಲೇಟ್ ಆದ್ರು ತಿನ್ನಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.