ನಿಷ್ಠಾವಂತ ಕಾರ್ಯಕರ್ತರನ್ನ ಕಡೆಗಣಿಸಿದ ಗೋವಿಂದರಾಜು ಬೆಂಬಲಕ್ಕೆ ನಾನಿಲ್ಲ – ಜೆಡಿಎಸ್ ಮುಖಂಡ ನರಸೆಗೌಡ

ನಿಷ್ಠಾವಂತ ಕಾರ್ಯಕರ್ತರನ್ನ ಕಡೆಗಣಿಸಿದ ಗೋವಿಂದರಾಜು ಬೆಂಬಲಕ್ಕೆ ನಾನಿಲ್ಲ – ಜೆಡಿಎಸ್ ಮುಖಂಡ ನರಸೆಗೌಡ

 

 

ತುಮಕೂರು : ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಬೆಂಬಲಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ಮುಖಂಡ ನರಸೆಗೌಡ ತಿಳಿಸಿದ್ದಾರೆ

 

 

 

 

ಎರಡು ದಶಕಗಳಿಂದ ಜೆ.ಡಿ.ಎಸ್.‌ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ  ದುಡಿಯುತ್ತಿರುವ ನನಗೆ ಜೆಡಿಎಸ್‌ ನ ಟಿಕೇಟ್‌ ಲಭಿಸದೇ ಇರುವುದರಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆಂದು ಸ್ಪಷ್ಠನೆಯನ್ನು ನರಸೇಗೌಡರವರು ನೀಡಿದ್ದಾರೆ.

 

 

 

 

 

 

 

ನಾನು ಪ್ರೀತಿ, ವಿಶ್ವಾಸ, ಸಾಮಾಜಿಕ ಭದ್ರತೆಯಿಂದ ಚುನಾವಣಾ ಕಣಕ್ಕೆ ಇಳಿಯುತ್ತಿದ್ದು, ನಾನು ಕಳೆದ 2013ನೇ ಸಾಲಿನ ಚುನಾವಣೆಯಲ್ಲಿ ಜೆ.ಡಿ.ಎಸ್.‌ ಪಕ್ಷದಿಂದ ಟಿಕೇಟ್‌ ಬಹುತೇಕ ಖಚಿತವಾಗಿತ್ತು, ಆದರೆ ಆ ಸಮಯದಲ್ಲಿ ಸನ್ಮಾನ್ಯ ದೇವೇಗೌಡರು ತಾವು ಈ ಭಾರಿ ಸ್ಪರ್ಧಿಸುವುದು ಬೇಡ ಕಾಂಗ್ರೆಸ್‌ ಪಕ್ಷದಿಂದ ಬಂದಿರುವ ಗೋವಿಂದರಾಜು ಅವರನ್ನು ಬೆಂಬಲಿಸಿ ಎಂದು ಹೇಳಿ ನನ್ನನ್ನು ಕಣದಿಂದ ದೂರ ಸರಿಯುವಂತೆ ಸೂಚಿಸಿದ್ದರು, ಅದರಂತೆಯೇ ನಾನು ನನ್ನ ಸ್ಥಾನವನ್ನು ಅವರಿಗೆ ಬಿಟ್ಟುಕೊಟ್ಟಿದ್ದೆ.

 

 

 

 

 

 

 

 

 

 

ಸ್ವತಃ ಗೋವಿಂದರಾಜು ಅವರು ಅಂದಿನಿಂದ ಇಂದಿನವರೆವಿಗೂ ನನ್ನನ್ನು ಕಡೆಗಣಿಸುತ್ತಲೇ ಬರುತ್ತಿದ್ದರೂ, ನಾನು ಎಲ್ಲವನ್ನೂ ಸಹಿಸಿಕೊಂಡು ನಮ್ಮದೇ ಪಕ್ಷದ ಅಭ್ಯರ್ಥಿಯೆಂದು ನೋವನ್ನು ಸಹಿಸಿಕೊಂಡು ನಾನು ನಿಷ್ಠೆಯಿಂದ ರಾಜಕಾರಣ ಮಾಡುತ್ತಾ, ಅವರನ್ನು ಬೆಂಬಲಿಸಿಕೊಂಡು ಬರುತ್ತಿದ್ದೇ.

 

 

 

 

 

 

 

 

 

 

ಕಳೆದ ಬಾರಿಯ ಚುನಾವಣೆಯಲ್ಲಿಯೂ ಸಹ ಸನ್ಮಾನ್ಯ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಗೋವಿಂದರಾಜು ರವರು ತಮ್ಮನ್ನು ಕಡೆಗಣಿಸಿರಬಹುದು ಆದರೆ, ಪಕ್ಷಕ್ಕಾಗಿ ತಮ್ಮ ಸೇವೆ ಅತ್ಯಮೂಲ್ಯವೆಂದು ಹೇಳಿದ್ದರು, ಅದಕ್ಕಾಗಿಯೇ ನಾನು ಅವರು ಆಜ್ಞೆಯನ್ನು ಶಿರಸಾ ಪಾಲಿಸಿ, ಗೋವಿಂದರಾಜು ಅವರಿಗೆ ಸಂಪೂರ್ಣ ಬೆಂಬಲವನ್ನು ಕೊಟ್ಟು ಗೆಲ್ಲುವ ಹಂತದವರೆವಿಗೂ ತರಲು ನಾನು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದ್ದೇ, ಆದರೆ ಅವರ ಸ್ವಂತ  ಕಾರಣಗಳಿಂದಾಗಿ ಕೆಲವೇ ಅಂತರದಲ್ಲಿ ಗೋವಿಂದರಾಜು ಅವರು ಪರಾಜಯಗೊಂಡಿದ್ದು ಸತ್ಯ ಎಂದು ನರಸೇಗೌಡರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

 

 

 

 

 

 

 

 

 

 

ಮುಂದುವರೆದಂತೆ ಈ ಭಾರಿಯ ಚುನಾವಣೆಯಲ್ಲಿಯೂ ಸಹ ಗೋವಿಂದರಾಜುರವರಿಗೆ ಟಿಕೇಟ್‌ನ್ನು ಪಕ್ಷದಿಂದ ನೀಡಿದ್ದು, ಇನ್ನುಳಿದಂತೆ ಕುಮಾರಣ್ಣನವರು ಪಂಚರತ್ನ ಯಾತ್ರೆ ತುಮಕೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ನಮ್ಮ ಮನೆಗೆ ಭೇಟಿ ನೀಡಿದ್ದರು, ಆ ಸಮಯದಲ್ಲಿ ಗೋವಿಂದರಾಜು ಸಹ ನಮ್ಮ ಮನೆಗೆ ಆಗಮಿಸಿದ್ದು, ಆ ಸಮಯದಲ್ಲಿ ಸ್ವತಃ ಕುಮಾರಣ್ಣನವರು ನರಸೇಗೌಡರನ್ನು ಮೊದಲ್ಗೊಂಡು ಪಕ್ಷದ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು, ಚುನಾವಣೆಯನ್ನು ನಡೆಸಿ ಎಂದು ಬಹಿರಂಗವಾಗಿಯೇ ಹೇಳಿದ್ದರು, ಆದರೆ ಇದುವರೆವಿಗೂ ಸಹ ಗೋವಿಂದರಾಜು ಕುಮಾರಣ್ಣನ ಮಾತು ಕೇಳದೇ ನಮ್ಮಗಳನ್ನು ಕಡೆಗಣಿಸಿದ್ದಾರೆ.

 

 

 

 

 

 

 

ಜೊತೆಗೆ ಗೋವಿಂದರಾಜುರವರ ನಾಯಕತ್ವವನ್ನು ಬೇಸತ್ತಿರುವ ಹಲವಾರು ಕಾರ್ಯಕರ್ತರಿಗೆ ನ್ಯಾಯ ದೊರಕಿಸಿಕೊಡಬೇಕಾದ ಕರ್ತವ್ಯವನ್ನು ನಾನು ಮಾಡುತ್ತಿದ್ದೇನೆಂದರು. ಇನ್ನು ಮಾಜಿ ಪ್ರಧಾನ ಮಂತ್ರಿಗಳು ಹೆಚ್.ಡಿ. ದೇವೇಗೌಡರವರು ತುಮಕೂರಿನಿಂದ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಗೋವಿಂದರಾಜುರವರು ಮಾಜಿ ಪ್ರಧಾನಿಗಳು ಸೋಲಲು ಇವರೂ ಸಹ ಒಬ್ಬರು ಎಂದರಲ್ಲದೇ, ದೇವೇಗೌಡರು ಮತ್ತು ಕುಮಾರಣ್ಣನಿಗೆ ವಿಶ್ವಾಸದ್ರೋಹವನ್ನು ಮಾಡಿದ್ದಾರೆಂದರು.

 

 

 

 

 

 

 

ಇನ್ನು ನಾನು ಅತೀ ಶೀಘ್ರದಲ್ಲಿ ಬೃಹತ್‌ ಮಟ್ಟದಲ್ಲಿ ನನ್ನ ಬೆಂಬಲಿಗರ ಸಭೆಯನ್ನು ಕರೆದಿದ್ದು, ತದ ನಂತರ ನಾನು ಈ ಬಾರಿ ನಾಮಪತ್ರವನ್ನು ಸಲ್ಲಿಸುವುದಾಗಿಯೂ ಹಾಗೂ ನನಗೆ ನನ್ನದೇ ಕಾರ್ಯಕರ್ತರ ಕುಟುಂಬವಿದ್ದು, ಅವರೆಲ್ಲರ ಬೆಂಬಲ, ವಿಶ್ವಾಸ, ಸಹಕಾರ, ಸಲಹೆ ನಾನು ಈ ಭಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ, ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಮೇಯವೇ ಇಲ್ಲವೆಂದು ಪುನರುಚ್ಛಿರಿಸಿದ್ದರು.

 

 

 

 

 

ಇನ್ನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ನರಸೇಗೌಡರ ಚುನಾವಣಾ ಸ್ಪರ್ಧೆ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ  ಗೋವಿಂದರಾಜು ರವರು ಮಂಕಾಗಿರುವುದಂತೂ ಸತ್ಯ

 

 

ಯಾವುದು ಏನೇ ಆಗಲಿ ನರಸೇಗೌಡರ ಈ ನಡೆಯಿಂದ ವ್ಯಾಪಕ ಚರ್ಚೆಗಳು ಜನರಲ್ಲಿ ಮೂಡಿದ್ದು, ಮುಂದಿನ ನಡೆ ಏನಾಗುವುದೋ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version