ಶೋಷಿತ ಸಮುದಾಯಗಳಿಗೆ ರಾಜಕೀಯ ಗೆಲುವು ಬಹುದೊಡ್ಡ ಕೀಲಿಕೈ – ಡಾಕ್ಟರ್ ಜಿ ಪರಮೇಶ್ವರ್.

 

 

ತುಮಕೂರಿನ ಹೆಚ್ಎಂ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ನಡೆದ ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡ ಜನಾಂಗದ ಸಮುದಾಯದ ವತಿಯಿಂದ ನೂತನ ಗ್ರಾಮ ಪಂಚಾಯತ್ ಸದಸ್ಯರಿಗೆ ಅಭಿನಂದನಾ ಸಮಾರಂಭ ನಡೆಯಿತು.

 

ಕಾರ್ಯಕ್ರಮದಲ್ಲಿ ಮಾತನಾಡಿದ ಡಾಕ್ಟರ್ ಜಿ ಪರಮೇಶ್ವರ್ ಅವರು.ಇಂದಿನ ಕಾರ್ಯಕ್ರಮದ ಐತಿಹಾಸಿಕ ಕಾರ್ಯಕ್ರಮವಾಗಿದ್ದು ಸಮುದಾಯದ ಹೋರಾಟಕ್ಕೆ ಮುನ್ನುಡಿ ಸಿಕ್ಕಂತಾಗಿದೆ ಎಂದರು. ಇದರಿಂದ ಎಡ-ಬಲ ಸಮುದಾಯದ ಒಗ್ಗಟ್ಟು ಎಲ್ಲೆಡೆ ಪಸರಿಸಲಿ,ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಒಂದು ದೊಡ್ಡ ಕೀಲಿಕೈ ಆಗಿದ್ದು ಅದನ್ನು ಸದ್ಬಳಕೆ ಮಾಡಿಕೊಂಡರೆ ಎಂತಹ ಸಾಧನೆಯನ್ನು ಬೇಕಾದರೂ ಮಾಡಬಹುದು ಎಂದರು. ಎಡ-ಬಲ ಸಮುದಾಯದ ಕಾರ್ಯಕ್ರಮ ಬೇರೆಯವರಿಗೆ ರಾಜಕೀಯದ ಪ್ರಜ್ಞೆ ಮೂಡಿಸಲು ಸಹಕಾರಿಯಾಗಿದೆ ಎಂದರು.ಎಲ್ಲ ನೂತನ ಗ್ರಾಮ ಪಂಚಾಯತ್ ಸದಸ್ಯರು ಅಂಬೇಡ್ಕರ್ ತತ್ವಸಿದ್ಧಾಂತಗಳನ್ನು ಅನುಸರಿಸಲು ಸಲಹೆ ನೀಡಿದರು ಅವರ ಆಶಯವನ್ನು ಅನುಸರಿಸಬೇಕು ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ದೊಡ್ಡ ಗ್ರಂಥವಾಗಿದೆ ಅದರ ರಕ್ಷಣೆ ಎಲ್ಲರ ಮೇಲಿದೆ ಅಸ್ಪೃಶ್ಯ ಸಮಾಜಕ್ಕೆ ರಾಜಕೀಯ ವೇದಿಕೆ ಬಹುದೊಡ್ಡ ಕೀಲಿಕೈ ಅದನ್ನು ಸರಿಯಾಗಿ ಬಳಸಿ ಸಮುದಾಯವನ್ನು ಮುನ್ನಡೆಸಿ ಎಂದು ನೂತನ ಗ್ರಾಮ ಪಂಚಾಯತ್ ಸದಸ್ಯರಿಗೆ ತಿಳಿಸಿದರು. ಸದಾಶಿವ ಆಯೋಗದ ಜಾರಿಗೆ ನನ್ನ ವಿರೋಧವಿಲ್ಲ ಎಂದು ಪರಮೇಶ್ವರ್ ತಿಳಿಸಿದರು.

 

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ನಾರಾಯಣಸ್ವಾಮಿ ರವರು ಮಾತನಾಡಿ ಎಡ ಹಾಗೂ ಬಲ ಸಮುದಾಯದ ಒಗ್ಗಟ್ಟು ಹೊಡೆಯುವ ಹುನ್ನಾರ ನಡೆಯುತ್ತಿದೆ ಅಸ್ಪೃಶ್ಯ ಸಮಾಜದ ಅಸ್ಪೃಶ್ಯ ಆಚರಣೆಗಳನ್ನು ಮುಂದುವರಿಸುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಅದರ ವಿರುದ್ಧ ನಮ್ಮ ಒಗ್ಗಟ್ಟು ಪ್ರದರ್ಶನ ಮಾಡಬೇಕಾಗಿದೆ ಎಂದರು .

 

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಮಾತನಾಡಿ. ಇಂದಿನ ದಿನಗಳಲ್ಲಿ ಅಸ್ಪೃಶ್ಯ ಸಮಾಜದ ವಿರುದ್ಧ ದೊಡ್ಡ ಹುನ್ನಾರಗಳು ನಡೆಯುತ್ತಿದ್ದು ಎಲ್ಲರೂ ಸಮುದಾಯಗಳ ರಕ್ಷಣೆ ಮಾಡಬೇಕಾಗಿದೆ ಎಂದರು. ಮನುಷ್ಯ ಹಾಗೂ ಜಾತಿಯ ಮಧ್ಯ ಸಮಾನತೆಯಿಂದ ಸಹಬಾಳ್ವೆ ಸಾಧ್ಯ. ಅಸ್ಪೃಶ್ಯ ಸಮಾಜಕ್ಕೆ ಗ್ರಾಮ ಪಂಚಾಯಿತಿಯ ಗೆಲುವು ಬಿಡುಗಡೆಯ ಮೊದಲ ಹಂತದ ಗೆಲುವಾಗಿದ್ದು ಅದನ್ನು ಎಲ್ಲರೂ ಸದ್ಬಳಕೆ ಮಾಡಿ ಸಮುದಾಯಗಳನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದರು.

 

 

ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಎಡ ಹಾಗೂ ಬಲ ಸಮುದಾಯದ ಗ್ರಾಮ ಪಂಚಾಯಿತಿ ಸದಸ್ಯರಿಗೆ ,ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಸನ್ಮಾನ ಸಮಾರಂಭ ನಡೆಯಿತು.

 

ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ತಿಮ್ಮರಾಯಪ್ಪ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ,ದಲಿತ ಚಲವಾದಿ ಮಹಾಸಭಾ ಅಧ್ಯಕ್ಷ ಚಂದ್ರಪ್ಪ ,ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್ ,ಆದಿಜಾಂಬವ ಸಮುದಾಯದ ಅಧ್ಯಕ್ಷ ನರಸಿಯಪ್ಪ , ಜಿಲ್ಲಾ ಪಂಚಾಯತ್ ಸದಸ್ಯ ಕೆಂಚ ಮಾರಯ್ಯ ,ಮರಿ ಚೆನ್ನಮ್ಮ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ನೂತನ ಗ್ರಾಮ ಪಂಚಾಯತ್ ಸದಸ್ಯರುಗಳು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version