ವೃಷಭಾವತಿ ನೀರು ತರಲು ಪ್ರಾಮಾಣಿಕ ಪ್ರಯತ್ನ: ಡಿ.ಸಿ.ಗೌರಿಶಂಕರ್

ವೃಷಭಾವತಿ ನೀರು ತರಲು ಪ್ರಾಮಾಣಿಕ ಪ್ರಯತ್ನ: ಡಿ.ಸಿ.ಗೌರಿಶಂಕರ್

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ವೃಷಭಾವತಿ ನೀರನ್ನು ತರಲು ಪ್ರಾಮಾಣಿಕ ಪ್ರಯತ್ನ ನಡೆಸಿರುವುದಾಗಿ ಗ್ರಾಮಾಂತರ ಶಾಸಕರಾದ ಡಿಸಿ ಗೌರಿಶಂಕರ್ ನುಡಿದರು

 

ಅವರು ತಾಲೂಕಿನ ಗೂಳೂರಿನಲ್ಲಿ ಕಂದಾಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮಾಸಾಶನ ಪತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ನೀರಾವರಿ ಯೋಜನೆಗಳನ್ನು ರೂಪಿಸಿದರು ಸಾಧ್ಯವಾಗಿರಲಿಲ್ಲ. ಈ ಭಾಗದ ರೈತರ ಬಹುದಿನದ ಬೇಡಿಕೆಯಾಗಿದ್ದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಶ್ರಮವಹಿಸಿದ ಸಣ್ಣ ನೀರಾವರಿ ಸಚಿವರಾದ ಮಾಧುಸ್ವಾಮಿ ಅವರ ಸಹಕಾರದಲ್ಲಿ ತಾಲೂಕಿನ ಸುಮಾರು 25 ಕೆರೆಗಳಿಗೆ ಸುಮಾರು 850 ಕೋಟಿ ರೂ ವೆಚ್ಚದಲ್ಲಿ ಈಗಾಗಲೇ ಡಿಪಿಆರ್ ಅನುಮೋದಿತ ವಾಗಿದ್ದು ನಿರಂತರ ನೀರು ಹರಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು

 

ಸಚಿವ ಜೆ ಸಿ ಮಾಧುಸ್ವಾಮಿಯವರು ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ಸಹ ರಾಜಕಾರಣ ಮಾಡದೆ ತಾಲೂಕಿನ ನೀರಾವರಿ ಯೋಜನೆಗಳಿಗೆ ಸ್ಪಂದಿಸಿದ್ದಾರೆ ಎಂದು ತಿಳಿಸಿದರು

ಇದೇ ವೇಳೆ ಶಾಸಕರು ಗೂಳೂರು ಹೊನ್ನುಡಿಕೆ, ಹೆತ್ತೇನಹಳ್ಳಿ ಕೆ.ಫಾಲಸಂದ್ರ ಹರಳೂರು ಹೊಳಕಲ್ಲು ಮಸ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ಇನ್ನೂರಕ್ಕೂ ಹೆಚ್ಚು ಜನ ವೃದ್ಧರಿಗೆ ಮಾಸಾಶನ ವೇತನ ಪತ್ರಗಳನ್ನು ವಿತರಣೆ ಮಾಡಿ ಮಾತನಾಡಿದ ಶಾಸಕರು ಅಧಿಕಾರಿಗಳು ತಮ್ಮ ಬಳಿ ಸಮಸ್ಯೆ ಹೊತ್ತು ಬಂದ ಕ್ಷೇತ್ರದ ರೈತರು ಬಡವರು ಮಹಿಳೆಯರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಅವರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವ ಕಾರ್ಯ ಮಾಡಬೇಕು ಯಾವುದೇ ಅಧಿಕಾರಿ ರೈತರಿಗೆ ಅನಗತ್ಯವಾಗಿ ಕಿರುಕುಳ ಕೊಡುವುದನ್ನು ತಾವು ಸಹಿಸುವುದಿಲ್ಲ ಅಂಥ ಯಾವುದೇ ಘಟನೆಗಳು ನಡೆದರೂ ಸಹ ಸಾರ್ವಜನಿಕರು ನೇರವಾಗಿ ತಮ್ಮ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು

 

ಈ ಸಂದರ್ಭದಲ್ಲಿ ಗೂಳೂರು ಗ್ರಾ.ಪಂ.ಕಂದಾಯ ಇಲಾಖೆಯ ಅಧಿಕಾರಿಗಳು, ಗೂಳೂರು ಜಿ.ಪಂ.ಜೆಡಿಎಸ್ ಆದ್ಯಕ್ಷರಾದ ಫಾಲನೇತ್ರಯ್ಯ, ಮುಖಂಡರಾದ ಶ್ರೀಮತಿ ವಿಜಯಕುಮಾರಿ,

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version