ತುಮಕೂರು ಬಾಣಂತಿ ಹಾಗೂ ಮಕ್ಕಳ ಸಾವು ಪ್ರಕರಣ ಆಸ್ಪತ್ರೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ .
ತುಮಕೂರು_ನವಂಬರ್ ಎರಡರಂದು ತುಮಕೂರಿನ ಭಾರತಿ ನಗರದಲ್ಲಿ ಬಾಣಂತಿ ಹಾಗೂ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರ ರವರು ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು ಬಾಣಂತಿ ಸಾವಿನ ಬಗ್ಗೆ ಆಸ್ಪತ್ರೆಯ ಸ್ಟಾಫ್ ಜೊತೆ ಚರ್ಚೆ ನಡೆಸಿದ್ದೇನೆ. ಆಸ್ಪತ್ರೆಗೆ ಬಂದಂತಹ ರೋಗಿಗಳಿಗೆ ಪ್ರೀತಿಯಿಂದ ಹಾಗೂ ಉಚಿತವಾಗಿ ಚಿಕಿತ್ಸೆ ಕೊಟ್ರೆ ಮಾತ್ರ ಅದು ಸರ್ಕಾರಿ ಆಸ್ಪತ್ರೆ ಆಗುತ್ತೆ ಇಲ್ಲ ಅಂದ್ರೆ ಅದು ನರ್ಸಿಂಗ್ ಹೋಮ್ ಆಗುತ್ತೆ ಎಂದರು.
ಆಸ್ಪತ್ರೆಯ ವೈದ್ಯರಿಗೆ ಸರಿಯಾಗಿ ಕೆಲಸ ಮಾಡುವಂತೆ ಎಚ್ಚರಿಕೆ ಕೊಟ್ಟಿದ್ದೇನೆ ಎಂದ ಅವರು ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ವೈದ್ಯರು ಔಷಧಿಗಾಗಿ ಚೀಟಿಯನ್ನು ಹೊರಗಡೆ ಬರೆದು ಕೊಡಬಾರದು ಆಸ್ಪತ್ರೆಯ ಒಳಗಡೆ ಔಷಧಿ ನೀಡಬೇಕು ಇದರ ಬಗ್ಗೆಯೂ ಸಹ ವೈದ್ಯರಿಗೆ ಎಚ್ಚರಿಕೆ ಕೊಟ್ಟಿದ್ದು.
ಬಾಣಂತಿ ಮತ್ತು ಶಿಶುಗಳ ಸಾವು ಪ್ರಕರಣ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ತನಿಖಾ ವರದಿ ಆಧರಿಸಿ ಮುಂದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ಆಸ್ಪತ್ರೆಯಲ್ಲಿ ಹಲವಾರು ಕೊರತೆಗಳಿದ್ದು ಅವುಗಳನ್ನು ಸರಿದೂಗಿಸುವ ಕೆಲಸವನ್ನು ಮಾಡುತ್ತೇವೆ ಎಂದಿದ್ದಾರೆ.