ಅಂತರಾಷ್ಟ್ರೀಯ ದಾದಿಯರ ದಿನಾಚರಣೆ ಅಂಗವಾಗಿ ಹೋಲಿಕ್ರಾಸ್ ಮುಖ್ಯ ಆಡಳಿತ ಅಧಿಕಾರಿಗೆ ಸನ್ಮಾನ
ಕೊಳ್ಳೇಗಾಲ :- ಅಂತರರಾಷ್ಟ್ರೀಯ ದಾದಿಯರ ದಿನಚಾರಣೆ ಅಂಗವಾಗಿ ಸುಪ್ರೀಮ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕೊಳ್ಳೇಗಾಲ ವತಿಯಿಂದ ಪಟ್ಟಣದ ಗುರುಭವನ ದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಚಾಮರಾಜನಗರ ಜಿಲ್ಲೆಯಲ್ಲೇ ಹೆಸರುವಾಸಿಯಾಗಿರುವ ಮೂವತ್ತರಿಂದ ನಲವತ್ತು ವರ್ಷಗಳಿಂದಲೂ ಕೂಡ ಉತ್ತಮ ವೈದ್ಯಕೀಯ ಸೇವೆ ನೀಡುತ್ತಾ ಬಂದಿರುವ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಧಿಕಾರಿಗಳಾದ ಡಾಕ್ಟರ್ ಎಸ್ ಆರ್ ಡೆಲಿನ್ ರವರಿಗೆ ಸನ್ಮಾನ ಮಾಡಲಾಯಿತು.
ಎಸ್ ಆರ್ ಡೆಲಿನ್ ಅವರು ಸುಮಾರು 40 ವರ್ಷಕ್ಕೂ ಹೆಚ್ಚು ವೈದ್ಯಕೀಯದ ಅನುಭವವಿದ್ದು ಕೇರಳ ಆಂಧ್ರ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ತಮ್ಮದೇ ಆದ ಸೇವೆಯನ್ನು ನೀಡಿದ್ದಾರೆ. ಹಲವು ವರ್ಷಗಳ ಕಾಲ ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಕ್ಷಕಿಯಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.ಪ್ರಪಂಚದಾದ್ಯಂತದ ದಾದಿಯರ ಅಮೂಲ್ಯ ಕೊಡುಗೆಗಳನ್ನು ಗೌರವಿಸುವ ಮತ್ತು ಗುರುತಿಸುವ ಪ್ರಮುಖ ದಿನವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸುತ್ತಾರೆ ಮತ್ತು ರೋಗಿಗಳ ಯೋಗಕ್ಷೇಮ, ಸುರಕ್ಷತೆ ಮತ್ತು ಚೇತರಿಕೆಗೆ ಜವಾಬ್ದಾರರಾಗಿರುತ್ತಾರೆ.
ನರ್ಸ್‌ಗಳು ಎದುರಿಸುವ ಅನೇಕ ಸವಾಲುಗಳ ಪ್ರವೇಶಿಸಲು ಮತ್ತು ಅನಾರೋಗ್ಯ ಮತ್ತು ಗಾಯಗೊಂಡವರನ್ನು ನೋಡಿಕೊಳ್ಳಲು ಅವರು ದಣಿವರಿಯಿಲ್ಲದೆ ಕೆಲಸ ಮಾಡುತ್ತಾರೆ. ಚಿಕಿತ್ಸೆಗಳನ್ನು ನಿರ್ವಹಿಸುವುದು, ರೋಗಿಗಳನ್ನು ಮೇಲ್ವಿಚಾರಣೆ ಮಾಡುವುದು, ಜೂನಿಯರ್ ದಾದಿಯರಿಗೆ ಮಾರ್ಗದರ್ಶನ ನೀಡುವುದು ಮತ್ತು ವೈದ್ಯಕೀಯ ದಾಖಲೆಗಳನ್ನು ನಿರ್ವಹಿಸುವುದು ಹೊರತಾಗಿಯೂ, ಹೊಸ ಜೀವನವು ಜಗತ್ತನ್ನು ಸೇರಿದಂತೆ ದಾದಿಯರು ವೈವಿಧ್ಯಮಯ ಜವಾಬ್ದಾರಿಗಳನ್ನು ಹೊಂದಿದ್ದಾರೆ.
ಅವರ ಕೆಲಸವು ರೋಗಿಗಳು ಅತ್ಯುತ್ತಮವಾದ ಆರೈಕೆ ಮತ್ತು ಬೆಂಬಲವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪ್ರಪಂಚದಾದ್ಯಂತ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವಲ್ಲಿ ಅವರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಹಾಗಾಗಿ, ಅಂತರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸುವುದು ಮತ್ತು ಎಲ್ಲೆಡೆ ದಾದಿಯರ ಸಮರ್ಪಣೆ ಮತ್ತು ಬದ್ಧತೆಗೆ ನಮ್ಮ ಮೆಚ್ಚುಗೆಯನ್ನು ತೋರಿಸುವುದು ಮುಖ್ಯವಾಗಿದೆ. ಇನ್ನು ಇದೆ ವೇಳೆ ಮಾತನಾಡಿದ
ಡಾ ಎಸ್ ಆರ್ ಡೆಲಿನ್ ರವರು ನಾವು ಮಾಡುವ ಸೇವೆಗೆ ಸಾರ್ವಜನಿಕರ ಪ್ರೋತ್ಸಾಹ ಮತ್ತು ಧೈರ್ಯ ಬಲು ಮುಖ್ಯ ಪ್ರತಿಯೊಬ್ಬ ವೈದ್ಯರು ಕೂಡ ರೋಗಿಗಳಿಗೆ ಉತ್ತಮವಾದ ಚಿಕಿತ್ಸೆ ಮತ್ತು ಪ್ರೀತಿ.ಗೌರವ ಕೊಡುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಹೆಚ್ಚಾಗಿ ನೀಡುವುದು ನಮ್ಮ ಸಾಮಾಜಿಕ ಬದ್ಧತೆಯಾಗಿರುತ್ತದೆ.
ಎಂದೆಂದಿಗೂ ನಾವು ನಮ್ಮ ಸೇವೆಯನ್ನು ನಿರಂತರವಾಗಿ ನೀಡುತ್ತೇವೆ ಎಂದು ಹೇಳಿದರು. ಇನ್ನು ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಎನ್ ಮಹೇಶ್. ಸುಪ್ರೀಮ್ ವೈದ್ಯಕೀಯ ಸಂಸ್ಥೆಯ ಪ್ರಾಂಶುಪಾಲರು ರೋಜಾ. ಕಾರ್ಯದಕ್ಷರು ಮಹೇಶ್ ಹಾಗೂ .ವಿದ್ಯಾರ್ಥಿಗಳು.ಸಾರ್ವಜನಿಕರು ಉಪಸ್ಥಿತರಿದ್ದರು
ವರದಿ :- ನಾಗೇಂದ್ರ ಪ್ರಸಾದ್