ತುಮಕೂರಿನಲ್ಲೊಬ್ಬ ಕೌನ್ಸೆಲಿಂಗ್ ಸ್ವಾಮೀಜಿ, ಮುಗ್ಧ ಜನರೇ ಈತನ ಟಾರ್ಗೆಟ್ ದೇವಸ್ಥಾನದಲ್ಲಿ ನಡೆಯಿತು ಹೈ ಡ್ರಾಮಾ.

ತುಮಕೂರಿನಲ್ಲೊಬ್ಬ ಕೌನ್ಸೆಲಿಂಗ್ ಸ್ವಾಮೀಜಿ, ಮುಗ್ಧ ಜನರೇ ಈತನ ಟಾರ್ಗೆಟ್ ದೇವಸ್ಥಾನದಲ್ಲಿ ನಡೆಯಿತು ಹೈ ಡ್ರಾಮಾ.

 

 

 

ತುಮಕೂರು _ ಜನರು ತಮ್ಮ ಕಷ್ಟಗಳನ್ನು ಪರಿಹರಿಸಲು ದೇವರ ಮೇಲೆ ನಂಬಿಕೆ ಇಟ್ಟು ದೇವಸ್ಥಾನಗಳಿಗೆ ಹೋಗುವುದು ಸಹಜ ಆದರೆ ಇನ್ನೊಬ್ಬ ಉಡಾಳ ಪೂಜಾರಿ ದೇವಸ್ಥಾನಕ್ಕೆ ಬರುವ ಮುಗ್ಧ ಜನರನ್ನ ಯಾಮರಿಸಿ ಅವರಿಂದ ಹಣ ಪಿಕೆ ಕುಟುಂಬಗಳನ್ನ ಹೊಡೆಯುವ ಕೆಲಸ ಮಾಡಿ ದೇವರ ಹೆಸರಿನಲ್ಲಿ ಜನರ ಮೂಡನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಜನರನ್ನು ಯಾಮಾರಿಸುವ ಆರೋಪ ಕೇಳಿ ಬಂದಿದೆ.

 

 

 

 

ತುಮಕೂರು ತಾಲೂಕು ಕೋರ ಹೋಬಳಿಯ ಚಿಕ್ಕತೊಟ್ಟಿಲು ಕೆರೆಯಲ್ಲಿ ಇರುವ ಆದಿಶಕ್ತಿ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದ ಹೆಸರಿನಲ್ಲಿ ದೇವಸ್ಥಾನ ನಿರ್ಮಾಣ ಮಾಡಿರುವ ಶಿವಣ್ಣ ಎಂಬ ಹೆಸರಿನ ಪೂಜಾರಿ ಮನೆಯಲ್ಲೇ ದೇವಸ್ಥಾನ ನಿರ್ಮಾಣ ಮಾಡಿಕೊಂಡು ಬೆಂಗಳೂರು ಮೂಲದ ಯುವಕ ನನ್ನ ಪರಿವರ್ತನೆ ಮಾಡಿ ಕುಟುಂಬದಿಂದ ಬೇರ್ಪಡಿಸಿ ಆತನನ್ನ ಅಕ್ರಮವಾಗಿ ದೇವಸ್ಥಾನದಲ್ಲಿ ಇಟ್ಟು ಕೊಂಡಿರುವ ಆರೋಪ ಕೇಳಿ ಬಂದಿತ್ತು.

 

 

 

 

ಅದರ ಮಾಹಿತಿಯ ಮೆರೆಗೆ ನೆಲಮಂಗಲ ಮೂಲದ ಕುಮಾರ್ ಕುಟುಂಬ ಹಾಗೂ ರಣಧೀರ ಕಂಠೀರವ ಸಂಘಟನೆಯ ರಾಜ್ಯಾಧ್ಯಕ್ಷ ರಾಜೇಶ್ ಗೌಡ್ರು ಹಾಗೂ ಸಂಘಟನೆಯ ಕಾರ್ಯಕರ್ತರ ತಂಡ ದಿಡೀರ್ ದೇವಸ್ಥಾನಕ್ಕೆ ಲಗ್ಗೆ ಇಟ್ಟ ಸಂದರ್ಭದಲ್ಲಿ ಪೂಜಾರಿ ಬಳಿ ಇದ್ದ ಯುವಕನಿಂದ ಬೃಹತ್ ಹೈಡ್ರಾಮವೇ ನಡೆಯಿತು.

 

 

 

 

ಪೋಷಕರಿಂದ ದೂರವಿದ್ದ ಯುವಕ ತಾನು ಪೋಷಕರೊಂದಿಗೆ ಹೋಗುವುದಿಲ್ಲ ನಾನು ಇಲ್ಲೇ ಇರುತ್ತೇನೆ ಎಂದು ಮಂಡು ಹಿಡಿದು ಕೂತಿದ್ದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಮತ್ತೊಂದು ಬಾಲಕಿಯನ್ನು ಅಕ್ರಮವಾಗಿ ಇಟ್ಟುಕೊಂಡಿರುವುದು ಕಂಡುಬಂದಿತ್ತು.

 

 

 

 

ಇದರ ಜಾಡು ಹಿಡಿದು ಹೊರಟ ಸಂಘಟನೆಯ ಕಾರ್ಯಕರ್ತರು ಬಾಲಕಿ ಹಾಗೂ ಸ್ವಾಮೀಜಿಯ ಬಳಿ ಬಾಲಕಿಯ ಬಗ್ಗೆ ವಿಚಾರಿಸಿದಾಗ ತಾಯಿ ಇಲ್ಲದ ಬಾಲಕಿಯನ್ನು ದೇವಸ್ಥಾನದಲ್ಲಿ ಇಟ್ಟು ಕೊಂಡಿರುವ ಪ್ರಕರಣ ಬೆಳಕಿಗೆ ಬಂದ ಕೂಡಲೇ ಸಂಘಟನೆಯ ಕಾರ್ಯಕರ್ತರು ಮಕ್ಕಳ ರಕ್ಷಣಾ ಘಟಕ ಹಾಗೂ ಸ್ಥಳೀಯ ಪೋಷಕರ ಮರೆ ಹೋದ ಕಾರಣ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಘಟಕದ ತಂಡದಿಂದ ದೇವಸ್ಥಾನದಲ್ಲಿ ಇದ್ದ ಬಾಲಕಿಯನ್ನು ರಕ್ಷಿಸಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

 

 

 

 

ಇನ್ನು ಘಟನೆಯ ಬಗ್ಗೆ ಮಾಹಿತಿ ನೀಡಿರುವ ರಣಧೀರ ಸಂಘಟನೆಯ ರಾಜ್ಯಾಧ್ಯಕ್ಷ ರಾಜೇಶ್ ಗೌಡ ಮಾತನಾಡಿ ಮೌಡ್ಯತೆಯ ಹೆಸರಿನಲ್ಲಿ ಮುಗ್ಧ ಅಮಾಯಕ ಜನರನ್ನ ಈತ ವಂಚಿಸುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

 

 

 

 

ಇದೆ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ಸಹ ದೇವಸ್ಥಾನದ ಕಾರ್ಯ ಚಟುವಟಿಕೆಗಳ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದು ಸ್ಥಳೀಯರು ದೇವಸ್ಥಾನಕ್ಕೆ ಬರುವುದಿಲ್ಲ ಆದರೆ ಬೇರೆ ಊರಿನ ಜನರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದು ಕಂಡುಬಂದಿದ್ದು ಈತ ಸ್ಥಳೀಯ ಹಲವು ಸ್ಥಳಗಳಲ್ಲಿ ವಾಮಾಚಾರದ ಮೊರೆ ಹೋಗಿದ್ದು ಇದರಿಂದ ಸಾರ್ವಜನಿಕರು ಸಹ ಹೈರಾಳಾಗಿದ್ದು ಕೂಡಲೇ ಈ ದೇವಸ್ಥಾನವನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

 

 

 

 

 

ಇನ್ನು ಕೊನೆಗೆ ದೇವಸ್ಥಾನದಲ್ಲಿ ಇದ್ದ ಬಾಲಕಿಯನ್ನು ಒಂದೆಡೆ ರಕ್ಷಿಸಿದರೆ ಮತ್ತೊಂದೆಡೆ ಪೊಲೀಸರು ಯುವಕನಾಗಿ ಬುದ್ಧಿವಾದ ಹೇಳಿ ಪೋಷಕರೊಂದಿಗೆ ಮನೆಗೆ ತೆರಳುವಂತೆ ಸೂಚಿಸಿ ದ ಹಿನ್ನೆಲೆಯಲ್ಲಿ ಯುವಕ ಮನೆ ಸೇರಲು ಮುಂದಾಗಿದ್ದಾನೆ.

 

 

 

 

 

ಅದೇನೇ ಇರಲಿ ದೇವಸ್ಥಾನದ ಹೆಸರಿನಲ್ಲಿ ಮುಗ್ಧ ಅಮಾಯಕ ಜನರನ್ನು ದೇವರ ಹೆಸರಿನಲ್ಲಿ ಮರಿಸುವ ಇಂತಹ ನಕಲಿ ಪೂಜಾರಿಗಳಿಗೆ ತಕ್ಕ ಪಾಠ ಕಲಿಸುವುದು ಎಲ್ಲರ ಕೆಲಸ ಎಂದರೆ ತಪ್ಪಾಗಲಾರದು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version