ಶಿರಾ ತಾಲೂಕಿನಲ್ಲಿ 20 ವರ್ಷದ ನಂತರ ವ್ಯಾಪಕ ಮಳೆ ತುಂಬಿದ ಕೆರೆಕಟ್ಟೆಗಳು ಹಳ್ಳ-ಕೊಳ್ಳಗಳು .
ಕಳೆದ ರಾತ್ರಿ ಶಿರಾ ತಾಲೂಕಿನಲ್ಲಿ ವ್ಯಾಪಕ ಮಳೆಯಾಗಿದ್ದು ತಾಲೂಕಿನಲ್ಲಿ ಸುಮಾರು 20 ವರ್ಷದ ನಂತರ ವ್ಯಾಪಕ ಮಳೆ ಕಳೆದ ರಾತ್ರಿ ಆಗಿದ್ದು ಇದರಿಂದ ತಾಲೂಕಿನಲ್ಲಿ ಕೆರೆ ತುಂಬಿ ಕೋಡಿ ಬಿದ್ದಿದೆ.
ಕಳ್ಳಂಬೆಳ್ಳ ದಿಂದ ಸಿರಾ ಕೆರೆಗೆ ಹರಿಯುವ ಹಳ್ಳದ ದೊಡ್ಡ ಹಳ್ಳ ಹರಿದು ಸುಮಾರು ಇಪ್ಪತ್ತು ವರ್ಷಗಳು ಕಳೆದಿದ್ದವು ಆದರೆ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ದೊಡ್ಡಹಳ್ಳ ಹರಿಯುವ ಮೂಲಕ ಹಳ್ಳದಲ್ಲಿ ಭಾರಿ ಪ್ರಮಾಣದ ನೀರು ಶಿರಾ ಕೆರೆಯತ್ತ ಸಾಗುತ್ತಿದೆ.
ಇದನ್ನ ಕಣ್ತುಂಬಿಕೊಳ್ಳಲು ಶಿರಾ ಭಾಗದ ಜನತೆ ಕಾತರದಿಂದ ಹಲವು ವರ್ಷಗಳಿಂದ ಕಾದಿದ್ದ ಸಮಯ ಈಗ ಬಂದಿದ್ದು ಇದನ್ನು ನೋಡಲು ಹಳ್ಳ ಹಾಗೂ ಕೆರೆಗಳ ತಾ ಊರಿನ ರೈತರು ಹೆಜ್ಜೆ ಹಾಕಿದ್ದಾರೆ.
ಇನ್ನು ಶಿರಾ ತಾಲೂಕಿನಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿದ್ದು ಗರಿಷ್ಠ ಪ್ರಮಾಣದ ಕೆರೆಗಳು ಕೋಡಿ ಬಿದ್ದಿದೆ.