ತುಮಕೂರು ನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ

 

 

ತುಮಕೂರಿನ ಎನ್ಆರ್ ಕಾಲೋನಿಯಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ತುಮಕೂರು ನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಜ್ಯೋತಿ ಗಣೇಶ್ ರವರು ಮಾತನಾಡಿ ಒಬ್ಬರಿಗೂ ಆರೋಗ್ಯ ಮುಖ್ಯವಾಗಿದ್ದು ಅದರ ಪೋಷಣೆ ಅಗತ್ಯವಾಗಿದೆ ಹಾಗಾಗಿ ಇಂತಹ ಆರೋಗ್ಯ ಶಿಬಿರಗಳು ಮುಖಾಂತರ ಸಾರ್ವಜನಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಹಾಗೂ ಅದರ ಬಗ್ಗೆ ಕಾಳಜಿ ವಹಿಸಬೇಕು ಎಂದರು.

 

ಇನ್ನು ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಹಂಸಲೇಖರವರು ಮಾತನಾಡಿ ಇಂದಿನ ದಿನಗಳಲ್ಲಿ 40 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಿನ ಆರೋಗ್ಯ ಸಮಸ್ಯೆ ಕಾಡುತ್ತಿದೆ ಅತಿ ಹೆಚ್ಚಾಗಿ ಬಿಪಿ, ಸಕ್ಕರೆ ಕಾಯಿಲೆ ಹಾಗೂ ಇನ್ನಿತರ ಸಮಸ್ಯೆಗಳು ಹೆಚ್ಚಾಗಿ ಕಾಣುತ್ತೇವೆ ಆದ್ದರಿಂದ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಅದರಲ್ಲೂ ಮಹಿಳೆಯರು ಒಂದಿಲ್ಲ ಒಂದು ಸಮಸ್ಯೆಗಳನ್ನು ಇಂದಿನ ದಿನಗಳಲ್ಲಿ ನೋಡುತ್ತಿದ್ದು ಎಲ್ಲರೂ ಕೂಡ ಸರಿಯಾದ ಸಮಯಕ್ಕೆ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಹಾಗೂ ಇಂದಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಕ್ಯಾನ್ಸರ್ ರೋಗಿಗಳು ಹೆಚ್ಚಾಗಿ ಕಂಡುಬರುತ್ತಿದ್ದು ಇದು ಎಲ್ಲರನ್ನು ಆತಂಕಕ್ಕೀಡುಮಾಡಿದೆ. ಹಾಗಾಗಿ ಮಕ್ಕಳು ಹಾಗೂ ವಯೋವೃದ್ಧರ ಆರೋಗ್ಯ ಆರೋಗ್ಯ ತುಂಬಾ ಮುಖ್ಯವಾಗಿದೆ ಎಂದು ತಿಳಿಸಿದರು.

 

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಮಹಿಳಾ ಕೋಷ್ಟ ಕಾರ್ಯದರ್ಶಿಗಳಾದ ಜ್ಯೋತಿ ಯವರು ಮಾತನಾಡಿ. ಇಂದಿನ ದಿನದಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿದ್ದು ಇದು ಮಹಿಳೆಯರಿಗೆ ಒಳ್ಳೆಯ ಬೆಳವಣಿಗೆಯಾಗಿದೆ. ಮಹಿಳೆಯರು ವೈದ್ಯಕೀಯ ಶಿಕ್ಷಣ ಆರೋಗ್ಯ ಕ್ರೀಡೆ ಸೇರಿದಂತೆ ಎಲ್ಲ ರಂಗದಲ್ಲಿ ಮಹಿಳೆಯರ ಪಾಲು ಹೆಚ್ಚಾಗಿದ್ದುಇರುವ ಸೌಲಭ್ಯಗಳನ್ನು ಬೆಳೆಸಿಕೊಂಡು ಮಹಿಳೆಯರು ಮತ್ತಷ್ಟು ಸ್ವಾಮಿ ಸ್ವಾವಲಂಬಿ ಜೀವನ ನಡೆಸುವ ಗಮನಹರಿಸಬೇಕಾಗಿದೆ ಹಾಗೂ ಎಲ್ಲರೂ ತಮ್ಮ ಆರೋಗ್ಯ ಕಾಳಜಿಯನ್ನು ಮರೆಯಬಾರದು ಎಂದು ತಿಳಿಸಿದರು

 

ಇನ್ನು ಕಾರ್ಯಕ್ರಮದಲ್ಲಿ ಮುಖಂಡರಾದ ಕೊಪ್ಪಳ ನಾಗರಾಜ್, ಪ್ರೇಮ ಹೆಗಡೆ, ಎಸ್ ಟಿ ಮೋರ್ಛಾ ವಿಜಯಲಕ್ಷ್ಮಿ , ಶೈಲ ,ವಿಜಯ ಭಾರತಿ,ಸೇರಿದಂತೆ ಬಡಾವಣೆಯ ನಾಗರಿಕರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version