ಸಿಡಿ ಪ್ರಕರಣದ ಬಗ್ಗೆ ಮೈಸೂರಿನಲ್ಲಿ ಮಾಜಿ ಸಿಎಂ ಎಚ್ಡಿಕೆ ಪ್ರತಿಕ್ರಿಯೆ

ಮೈಸೂರು

 

 

ಹೆಣ್ಣು ಮಗಳಿಗೆ ಯಾರಿಂದ ರಕ್ಷಣೆ ಸಿಗಬೇಕಿದ್ಯಾಯೋ ಅವರಿಂದ ಸಿಕ್ಕಿದೆ,

ಸರಕಾರಕ್ಕೆ ಆ ಯುವತಿ ಟ್ರೇಸ್ ಹಾಗದೆ ಇದ್ದರೂ.ಯುವತಿಗೆ ಸಿಗಬೇಕಾದ ರಕ್ಷಣೆ ಕೆಲವರಿಂದ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ,

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಅವರುಸರಕಾರದ ಒಳಗಿನವರೋ ಸರಕಾರದ ವಿರುದ್ದ ಇರುವವರೋ.

ಯಾರೋ ಆ ಯುವತಿಗೆ ಹೀಗಾಗಲೇ ಯಾರಾದರೂ ಅದನ್ನು ರೆಕಾರ್ಡ್ ಮಾಡಿ ಕಳಿಸಿದ್ದಾರೆ.ಸರಕಾರದ ಒಳಗೆ ಇದ್ದವರೆ ಆ ಯುವತಿಗೆ ರಕ್ಷಣೆ ಕೊಟ್ಟು ಇಟ್ಟು ಕೊಂಡಿದ್ದಾರೋ ಗೊತ್ತಿಲ್ಲ.

ಈ ಮನುಷ್ಯನ ಸ್ಪಿಡ್ ಗೆ ಬ್ರೇಕ್ ಹಾಕಲು.ಸರಕಾರದ ಒಳಗೆ ಇದ್ದವರೆ ಆ ಯುವತಿಗೆ ರಕ್ಷಣೆ ಕೊಡುತ್ತಿದ್ದಾರೋ ಗೊತ್ತಿಲ್ಲ.

ಒಟ್ಟು ಆ ಯುವತಿಗೆ ಯಾರೋ ಕೆಲವರಿಂದ ರಕ್ಷಣೆಯಂತೂ ಇದೆ.ಡಿಕೆಶಿ ಹೆಸರು ಈ ಪ್ರಕರಣದಲ್ಲಿ ಯಾರಾದರೂ ಹೇಳಿದ್ರಾ?ಅವರೇ ಮಾಡಿದ್ದಾರೆ ಅಂತಾ ಯಾರಾದರೂ ಹೇಳಿದ್ರಾ?

ಈ ರಾಜ್ಯದಲ್ಲಿ ಮಹಾ ನಾಯಕರು ಬಹಳ ಜನ ಇದ್ದಾರೆ.ಬಿಜೆಪಿ ಒಳಗೆ ಒಬ್ಬ ಮಹಾನಾಯಕರು ಬೆಳೆಯುತ್ತಿದ್ದಾರೆ.ಇಂತಹದರಲ್ಲಿ ಡಿಕೆ ಶಿವಕುಮಾರ್ ಯಾಕೆ ತಮ್ಮ ಹೆಸರನ್ನು ತಾವೇ ಈ ಪ್ರಕರಣದಲ್ಲಿ ಸಿಲುಕಿಸಿ ಕೊಂಡ್ರೋ ಗೊತ್ತಿಲ್ಲ.

ಅವರು ಪ್ರಬುದ್ಧ ಪೊಲಿಟೀಶಿಯನ್.ಅವರು ನನಗಿಂತಾ ಪ್ರಬುದ್ಧ ರಾಜಕಾರಣಿ.ಅವರು ದುಡುಕಿ ಯಾಕೆ ಈ ರೀತಿ ಅವರ ಹೆಸರನ್ನು ಅವರೇ ಪ್ರಕರಣದಲ್ಲಿ ಸಿಲುಕಿಸಿ ಕೊಳ್ಳುತ್ತಿದ್ದಾರೋ ಗೊತ್ತಿಲ್ಲ ಎಂದರೂ

 

ಈನ್ನೂ ಜಿಟಿಡಿ ವಿಚಾರವಾಗಿ ಮಾತನಾಡಿದ ಅವರು ನನ್ನ ರಾಜಕೀಯ ಜೀವನದಲ್ಲಿ ಬಹಳ ಅನುಭವ ಆಗಿದೆ.ಜಿ.ಟಿ.‌ ದೇವೇಗೌಡರನ್ನು ವಾಪಾಸ್ ಜೆಡಿಎಸ್ಗೆ‌ ಕರೆಸಿ ಕೊಳ್ಳುವ ಪ್ರಶ್ನೆ ಇಲ್ಲ.

ಅವರಾಗೆ ಅವರು ನಮ್ಮಿಂದ ದೂರ ಹೋಗಿದ್ದಾರೆ.ಸಾರಾ ಮಹೇಶ್ ಕಾರಣಕ್ಕೆ ದೂರು ಹೋಗ್ತಿದ್ದಿನಿ ಅಂತಾ ಹೇಳಿದ್ದಾರೆ.ಸಾರಾ ಮಹೇಶ್ ಅವರಿಗೆ ಅಂತದ್ದು ಏನ್ ಮಾಡಿದ್ದಾರೋ ಗೊತ್ತಿಲ್ಲ.

ಸಾರಾ ಮಹೇಶ್ ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಲು ನಾನೇನೂ ಕೋಲೆ ಬಸವನಾ?

ಅವರು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಿ ಬರುವುದಕ್ಕೆ.ಜಿಟಿಡಿ ಮತ್ತೆ ಜೆಡಿಎಸ್ ಗೆ ಬರ್ತಿನಿ ಅಂದ್ರೂ ನಾವು ಕರೆಸಿಕೊಳ್ಳಲ್ಲ.ಜಿಟಿಡಿ ಬಗ್ಗೆ ಎಚ್ಡಿ ದೇವೇಗೌಡರಿಗೆ ಸ್ವಲ್ಪ ಸಾಫ್ಟ್ ಕಾರ್ನರ್ ಇತ್ತು.ಈಗ ಅವರಿಗೂ ಇರುವ ಸತ್ಯ ಹೇಳಿ ಕನ್ವಿಸ್ ಮಾಡ್ತಿನಿ.ಇಂಥವರ ಸಹವಾಸ ಬಿಡಬೇಕು.

ಇಲ್ಲದೆ ಇದ್ದರೆ ಸ್ಲೋ ಪಾಯಿಸನ್ ಆಗಿ ಪಕ್ಷ ಹಾಳು ಮಾಡುತ್ತಾರೆ.ಈಗಂತ ಹೇಳಿ ಅವರಿಗೆ ಕನ್ವಿಸ್ ಮಾಡ್ತಿನಿ.ನಾನು ಈ ಪಕ್ಷದಲ್ಲಿ ಸಕ್ರಿಯಾನಾಗಿ ಕೆಲಸ ಮಾಡುವ ದಿನದವರೆಗೂ.ಜಿಟಿಡಿಯನ್ನು ಜೆಡಿಎಸ್ ಗೆ ಮತ್ತೆ ಸೇರಿಸುವ ಪ್ರಶ್ನೆ ಇಲ್ಲ.ಈದೇ ಫೈನಲ್ ನಿರ್ಧಾರ.

ಸಿದ್ದರಾಮಯ್ಯ ಅವರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಜಿಟಿಡಿಗೆ ಆರ್ಥಿಕ ನಿರ್ವಹಣೆ ಕೊಡಲಿಲ್ಲ ಅಂತಾ.ಅವರು ಚುನಾವಣೆಯಲ್ಲಿ ಆಸಕ್ತಿ ತೋರಲಿಲ್ಲ.

ಇಲ್ಲದೆ ಇದ್ದರೆ ಅವತ್ತೆ ಆ ಚುನಾವಣೆಯನ್ನು 10 ಸಾವಿರ ಮತಗಳಿಂದ ಗೆಲ್ತಿದ್ದೇವು.ನಮ್ಮ ಪಕ್ಷದಿಂದ ಬೆಳೆದವರೆ ನಮ್ಮ ಪಕ್ಷ ಮುಗಿಸಲು ಹೊರಟಿದ್ದಾರೆ.ನನಗೆ ಸಹಕಾರ ಕ್ಷೇತ್ರದ ಎಬಿಸಿಡಿಯೂ ಗೊತ್ತಿಲ್ಲ.ಆದರೂ, ಕಾರ್ಯಕರ್ತರಿಗೆ ಶಕ್ತಿ ತುಂಬಲು ಸ್ಪರ್ಧೆಗೆ ಇಳಿದಿದ್ದೇವೆ ಎಂದು ತಿಳಿಸಿದರು..

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version