ಕೋವಿಡ್‍ನಿಂದ ಆಸ್ಪತ್ರೆಗೆ ಸೇರಿದ್ದ ಅರ್ಧದಷ್ಟು ರೋಗಿಗಳಲ್ಲಿ ಇನ್ನೂ ಅಸ್ವಸ್ಥತೆ: ಲ್ಯಾನ್ಸೆಟ್ ವರದಿ

ಕೋವಿಡ್‍ನಿಂದ ಆಸ್ಪತ್ರೆಗೆ ಸೇರಿದ್ದ ಅರ್ಧದಷ್ಟು ರೋಗಿಗಳಲ್ಲಿ ಇನ್ನೂ ಅಸ್ವಸ್ಥತೆ: ಲ್ಯಾನ್ಸೆಟ್ ವರದಿ

 

ಹೊಸದಿಲ್ಲಿ: ಕೋವಿಡ್-19 ಸೋಂಕಿತರಾದ ಬಹುತೇಕ ಚೇತರಿಸಿಕೊಂಡು ತಮ್ಮ ಕರ್ತವ್ಯಕ್ಕೆ ಮರಳಿದ್ದರೂ, ತೀವ್ರ ಅಸ್ವಸ್ಥತೆಯಿಂದ ಆಸ್ಪತ್ರೆ ಸೇರಿದ್ದ ರೋಗಿಗಳಲ್ಲಿ, ಸೋಂಕಿನ ಎರಡು ವರ್ಷ ಬಳಿಕವೂ ಕನಿಷ್ಠ ಒಂದು ರೋಗಲಕ್ಷಣ ಉಳಿದುಕೊಂಡಿದೆ ಎಂಬ ಆತಂಕಕಾರಿ ಆಂಶವನ್ನು ಲ್ಯಾನ್ಸೆಟ್ ವರದಿ ಬಹಿರಂಗಪಡಿಸಿದೆ.

 

‘ಲ್ಯಾನ್ಸೆಟ್ ರೆಸ್ಪಿರೇಟರಿ ಮೆಡಿಸಿನ್’ ನಿಯತಕಾಲಿಕ ಪ್ರಕಟಿಸಿದ ಸುಧೀರ್ಘ ಅವಧಿಯ ಅಧ್ಯಯನ ವರದಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ಕಾಲಾನುಕ್ರಮದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸಿದ್ದರೂ, ಕೋವಿಡ್-19 ರೋಗಿಗಳಲ್ಲಿ ಇನ್ನೂ ಆರೋಗ್ಯ ಸ್ಥಿತಿ ಹಾಗೂ ಜೀವನ ಗುಣಮಟ್ಟ ದುರ್ಬಲವಾಗಿದೆ ಎಂದು ಅಧ್ಯಯನ ವರದಿ ಹೇಳಿದೆ.

 

ಸುಧೀರ್ಘ ಅವಧಿಯ ಕೋವಿಡ್ ಸೋಂಕು ಹೊಂದಿದ್ದ ರೋಗಿಗಳಲ್ಲಿ ಎರಡು ವರ್ಷ ಕಳೆದರೂ ಆಯಾಸ, ಉಸಿರಾಟ ತೊಂದರೆ ಮತ್ತು ನಿದ್ರಾಹೀನತೆ ಹೀಗೆ ಕನಿಷ್ಠ ಒಂದು ರೋಗಲಕ್ಷಣ ಉಳಿದುಕೊಂಡಿದೆ ಎಂದು ಹೇಳಲಾಗಿದೆ.

 

2020ರ ಮೊದಲ ಹಂತದಲ್ಲಿ ಸಾಸ್-ಕೋವ್-2 ವೈರಸ್‍ನಿಂದ ಸೋಂಕಿತರಾಗಿ ವೂಹಾನ್‍ನ ಜಿನ್ ಯಿನ್ ತಾನ್ ಆಸ್ಪತ್ರೆಯಲ್ಲಿ 2020ರ ಜನವರಿ 7ರಿಂದ ಮೇ 29ರ ನಡುವೆ ಚಿಕಿತ್ಸೆ ಪಡೆದ 1192 ಮಂದಿ ಚೀನಿ ರೋಗಿಗಳನ್ನು ಅಧ್ಯಯನಕ್ಕೆ ಗುರಿಪಡಿಸಲಾಗಿದೆ.

 

ಆರಂಭಿಕ ರೋಗ ತೀವ್ರತೆಯ ಹೊರತಾಗಿಯೂ ಕಾಲಾನುಕ್ರಮದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸಿದೆ. ಆದರೆ ಶೇಕಡ 55ರಷ್ಟು ರೋಗಿಗಳಲ್ಲಿ ಎರಡು ವರ್ಷ ಬಳಿಕವೂ ಕನಿಷ್ಠ ಒಂದು ರೋಗಲಕ್ಷಣ ಉಳಿದುಕೊಂಡಿದೆ. ಸೋಂಕಿತರಾಗಿ ಆರು ತಿಂಗಳ ಬಳಿಕ ಶೇಕಡ 86 ಮಂದಿಯಲ್ಲಿ ಈ ಸಮಸ್ಯೆ ಇದೆ.

 

ಈ ಅಧ್ಯಯನ ವರದಿಯಲ್ಲಿ ಕಂಡುಬಂದ ಅಂಶಗಳ ಹಿನ್ನೆಲೆಯಲ್ಲಿ ಸುಧೀರ್ಘ ಕೋವಿಡ್ ರೋಗಿಗಳ ರೋಗಕಾರಕ ಅಂಶವನ್ನು ಪತ್ತೆ ಮಾಡಿ ಪರಿಣಾಮಕಾರಿ ವೈದ್ಯಕೀಯ ಹಸ್ತಕ್ಷೇಪ ಕ್ರಮಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!