ಪಕ್ಕದ ಮನೆಯವನ ವಿಷಪ್ರಾಶನಕ್ಕೆ ಸತ್ತ ಕೋಳಿಗಳು. ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪ್ರಕರಣ.

ಪಕ್ಕದ ಮನೆಯವನ ವಿಷಪ್ರಾಶನಕ್ಕೆ ಸತ್ತ ಕೋಳಿಗಳು. ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪ್ರಕರಣ.

 

 

ಸಿರಾ _ಕ್ಷುಲ್ಲಕ ವಿಚಾರಕ್ಕೆ ನೆರೆಮನೆಯವರು ಸಾಕಿದ್ದಾರೆ ಕೋಳಿಗಳಿಗೆ ಪಕ್ಕದ ಮನೆಯವನು ವಿಷ ಹಾಕಿದ ಪರಿಣಾಮ ಸುಮಾರು ಮೂವತ್ತಕ್ಕೂ ಹೆಚ್ಚು ಕೋಳಿಗಳು ಬಲಿಯಾದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹೊನ್ನಗೊಂಡನಹಳ್ಳಿ ಯಲ್ಲಿ ನಡೆದಿದೆ.

 

ಪರಿಶಿಷ್ಟಜಾತಿಯ ಈರಮ್ಮ ಎನ್ನುವ ಮಹಿಳೆ ತನ್ನ ಜೀವನೋಪಾಯಕ್ಕಾಗಿ ಸಂಘದಲ್ಲಿ ಸಾಲಸೋಲ ಮಾಡಿ ಸುಮಾರು ಮೂವತ್ತಕ್ಕೂ ಹೆಚ್ಚು ಕೋಳಿಗಳನ್ನು ಸಾಕಿದ್ದು ,ಅವುಗಳನ್ನೇ ಜೀವನಕ್ಕೆ ಆಸರೆಯಾಗಿ ಮಾಡಿಕೊಂಡಿದ್ದರು.

 

 

ಇನ್ನು ಪಕ್ಕದ ಮನೆಯ ವ್ಯಕ್ತಿ ಪ್ರತಿನಿತ್ಯ ಈರಮ್ಮ ಎನ್ನುವ ಮಹಿಳೆಯ ಜೊತೆ ಕ್ಷುಲ್ಲಕ ಕಾರಣಕ್ಕೆ ಪ್ರತಿನಿತ್ಯ ಗಲಾಟೆ ಮಾಡುವ ಮೂಲಕ ಪ್ರತಿನಿತ್ಯ ನಿಂದಿಸುತ್ತಿದ್ದ ಎಂದು ಕೋಳಿಗಳ ಮಾಲೀಕರಾದ ಈರಮ್ಮ ಆರೋಪಿಸಿದ್ದಾರೆ.

 

 

ಇನ್ನೂ ಅದೇ ವ್ಯಕ್ತಿ ತನ್ನ ಕೋಳಿಗಳಿಗೆ ವಿಷ ಹಾಕಿದ್ದಾನೆ ಆದಕಾರಣ ಸುಮಾರು ಮೂವತ್ತಕ್ಕೂ ಹೆಚ್ಚು ಕೋಳಿಗಳು ಸತ್ತು ಹೋಗಿದ್ದು ಸಂಕಷ್ಟದಲ್ಲಿರುವ ಮಹಿಳೆ ಇರಮ್ಮ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ ವರದಿಯಾಗಿದೆ.

 

 

ಸಂಕಷ್ಟಕ್ಕೊಳಗಾದ ಮಹಿಳೆ ಈರಮ್ಮ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದು ಘಟನೆಗೆ ಕಾರಣನಾದ ವ್ಯಕ್ತಿಯನ್ನು ಕೂಡಲೇ ವಿಚಾರಣೆ ಮಾಡಿ , ನಷ್ಟಕ್ಕೊಳಗಾದ ತನಗೆ ನ್ಯಾಯ ದೊರಕಿಸುವ ಜೊತೆಗೆ ರಕ್ಷಣೆ ನೀಡಬೇಕು ಎಂದು ಪೊಲೀಸರಿಗೆ ದೂರು ಸಹ ನೀಡಿದ್ದಾರೆ.

 

 

 

ಇನ್ನು ಮನುಷ್ಯನ ದ್ವೇಷ ಕೋಳಿಗಳ ಮೇಲೂ ಸಹ ತೀರಿಸಿಕೊಳ್ಳುವ ಹಂತಕ್ಕೆ ಮನುಷ್ಯನ ದ್ವೇಷ ಮುಂದುವರೆದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

 

ಈ ವಿಶೇಷ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಸಂಕಷ್ಟ ಕೊಳಗಾದ ಮಹಿಳೆಗೆ ನ್ಯಾಯ ದೊರಕುವುದೆ…? ಕಾದುನೋಡಬೇಕು.

 

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!