ಜೆಡಿಎಸ್ ಪಕ್ಷದಲ್ಲಿ ನನಗೆ ಏನೂ ಉಳಿದಿಲ್ಲ ಅಂದುಕೊಂಡಿದ್ದೇನೆ_ ಗುಬ್ಬಿ ಶಾಸಕ ಎಸ್ಆರ್ ಶ್ರೀನಿವಾಸ್.
ತುಮಕೂರು_ಜೆಡಿಎಸ್ ಪಕ್ಷದಲ್ಲಿ ನನಗೆ ಏನೂ ಉಳಿದಿಲ್ಲ ಅಂದುಕೊಂಡಿದ್ದೇನೆ ಎಂದು ಗುಬ್ಬಿ ತಾಲೂಕಿನ ಶಾಸಕ ಶ್ರೀನಿವಾಸ್ ತಿಳಿಸಿದ್ದಾರೆ.
ಗುರುವಾರ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು ಇನ್ನು ಸಿದ್ದರಾಮಯ್ಯನವರು ವಿಶ್ಲೇಷಣೆ ಮಾಡಿರುವಂತೆ ನನ್ನ ಆತ್ಮಸಾಕ್ಷಿ ಇಲ್ಲ ಇನ್ನು ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ.
ಇನ್ನು ನಿಖಿಲ್ ಕುಮಾರಸ್ವಾಮಿ ಅವರು ಕ್ಷೇತ್ರಕ್ಕೆ ಬಂದಾಗ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಹೇಳಿದ್ದಾರೆ ಇನ್ನು ಅಪ್ಪ-ಮಗ ಇಬ್ಬರೂ ಸಹ ನನ್ನ ಮೇಲೆ ಬಿದ್ದಿದ್ದು ಇದೆಲ್ಲವನ್ನು ಗಮನಿಸಿದಾಗ ಇನ್ನೂ ಅಪ್ಪ ಆಗಲಿ ಮಗ ಆಗಲಿ ಯಾರು ಕೂಡ ನನ್ನನ್ನ ಸಂಪರ್ಕ ಮಾಡುವುದಿಲ್ಲ ಎಂದು ಕೊಂಡಿದ್ದೇನೆ ಎಂದು ನಾಳೆ ನಡೆಯಲಿರುವ ರಾಜ್ಯಸಭೆ ಮತದಾನದ ಸಂಬಂಧ ಮಾಹಿತಿ ನೀಡಿದ್ದು ಇನ್ನು ಗುಬ್ಬಿ ಶಾಸಕ ಶ್ರೀನಿವಾಸ್ ಅವರ ಹೇಳಿಕೆ ತೀವ್ರ ಕುತೂಹಲ ಕೆರಳಿಸಿದೆ ನಾಳೆ ನಡೆಯುವ ಚುನಾವಣೆಯಲ್ಲಿ ಯಾರ ಪರ ಮತದಾನ ಮಾಡಲಿದ್ದಾರೆ ಎನ್ನುವುದು ಗೋಪ್ಯವಾಗಿ ಇಟ್ಟಿದ್ದಾರೆ.
ಇನ್ನು ನನ್ನ ಆತ್ಮಸಾಕ್ಷಿ ಯಾರ ಪರವಾಗಿದೆ ಎನ್ನುವುದು ಈಗಲೇ ಹೇಳಲು ಸಾಧ್ಯವಿಲ್ಲ ನಾನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ನಂತರ ಅದರ ಬಗ್ಗೆ ಗೊತ್ತಾಗಲಿದೆ ಎಂದಿರುವ ಅವರು ಇನ್ನೂ ಚುನಾವಣೆ ಸಂಬಂಧ ಕಾಂಗ್ರೆಸ್ ಆಗಲಿ ಬಿಜೆಪಿ ಪಕ್ಷವಾಗಲಿ ನನ್ನನ್ನ ಸಂಪರ್ಕ ಮಾಡಿಲ್ಲ ಇನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ರವರು ನನ್ನ ಸಂಪರ್ಕ ಮಾಡಿ ದ್ದಾರೆ ಚುನಾವಣೆಗೆ ಮತ ಹಾಕುವ ಬಗ್ಗೆ ಇನ್ನೂ ಸಾಕಷ್ಟು ಕಾಲಾವಕಾಶ ಇದೆ ಎಂದು ಹೇಳಿಕೆ ನೀಡುವ ಮೂಲಕ ನಾಳೆ ನಡೆಯುವ ಮತದಾನದ ಬಗ್ಗೆ ಗೋಪ್ಯತೆ ಕಾಪಾಡಿದ್ದಾರೆ.
ಇನ್ನು ಅಪ್ಪ-ಮಗ ನನ್ನ ಬಗ್ಗೆ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಹೇಳಿಕೊಂಡು ಓಡಾಡುವಾಗ ಸಹಜವಾಗಿಯೇ ನಮಗೂ ಸಹ ಮನಸ್ಸಿಗೆ ನೋವಾಗಿದೆ ಅದರಂತೆ ಮುಂದಿನ ತೀರ್ಮಾನ ಮಾಡಬೇಕಾಗಿದೆ ಎಂದಿರುವ ಅವರು ಇನ್ನು ನನ್ನ ಮುಂದಿನ ನಡೆ ಡಿಸೆಂಬರ್ ವರೆಗೂ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದು ನಂತರ ಕಾರ್ಯಕರ್ತರೊಂದಿಗೆ ಸಭೆ ಸೇರಿ ಚರ್ಚಿಸಿ ನಿರ್ಧಾರ ಕೈಗೊಳ್ಳುವೆ ಎಂದರು.
ಜೆಡಿಎಸ್ ಪಕ್ಷದಿಂದ ನಾನು ಗೆದ್ದಿದ್ದು ಜೆಡಿಎಸ್ ಪಕ್ಷ ನನಗೆ ಬಿ ಫಾರಂ ನೀಡಿದ್ದು ಅದರ ಋಣ ನನ್ನ ಮೇಲಿದೆ ನನ್ನ ಜೀವನದಲ್ಲಿ ಎಂದೂ ಸಹ ರೆಸಾರ್ಟ್ ರಾಜಕಾರಣಕ್ಕೆ ಹೋಗಿಲ್ಲ ಹೋಗುವುದಿಲ್ಲ ಇನ್ನು ಈ ಸಂಬಂಧ ನಾವು ಮಾನಸಿಕವಾಗಿ ಸದೃಢರಾಗಿ ಇದ್ದಾಗ ಯಾರು ಸಹ ಎಲ್ಲಿಗೂ ಎತ್ತಿಕೊಂಡು ಹೋಗುವುದು ಸಾಧ್ಯವಿಲ್ಲ ಇನ್ನು ನಮ್ಮ ಪಕ್ಷದ ವಕ್ತಾರರು ವಿಪ್ ಜಾರಿ ಜಾರಿಮಾಡಿದ್ದಾರೆ ಇದರ ಬಗ್ಗೆ ನಮಗೂ ಸಹ ಮಾಹಿತಿ ಇದೆ ಎಂದು ಅಚ್ಚರಿಯ ಹೇಳಿಕೆಯನ್ನು ನೀಡುವ ಮೂಲಕ ಗುಬ್ಬಿ ಶಾಸಕ ಶ್ರೀನಿವಾಸರವರ ನಡೆ ನಾಳೆ ಏನಾಗಲಿದೆ ಎಂಬುದು ಕುತೂಹಲವಾಗಿದೆ.
ವರದಿ _ಮಾರುತಿ ಪ್ರಸಾದ್ ತುಮಕೂರು