ಹೆಚ್ಡಿಕೆಗೆ ಸಡ್ಡು ಹೊಡೆದ ದೇವೇಗೌಡ: ಸಾರಾಗೆ ಟಕ್ಕರ್ ನೀಡಿ ಸಹಕಾರಿ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆದ ಜಿಟಿಡಿ

 

ಮಾಜಿ ಮುಖ್ಯಮಂತ್ರಿ ಹೆಚ್ ​​ಡಿ  ಕುಮಾರಸ್ವಾಮಿಯವರಿಗೆ ಸಡ್ಡು ಹೊಡೆದು, ಸಾರಾ ಮಹೇಶ್ ಗೆ ಟಕ್ಕರ್​​ ನೀಡಿ ಜಿಟಿ ದೇವೇಗೌಡ ಅವರು ಸಹಕಾರಿ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆದಿದ್ದಾರೆ

 

ನೆನ್ನೆ ಮೈಮೂಲ್ 15 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದು . ಒಟ್ಟು 29 ಮಂದಿ ಚುನಾವಣ ಕಣದಲ್ಲಿದ್ದರು ಇದರಲ್ಲಿ ಮೈಸೂರು ವಿಭಾಗದ 7 ಹಾಗೂ ಹುಣಸೂರು ವಿಭಾಗದ 8 ನಿರ್ದೇಶಕರ ಸ್ಥಾನಕ್ಕೆ ಬನ್ನೂರು ರಸ್ತೆಯಲ್ಲಿರುವ ಮೇಘ ಡೈರಿ ಆವರಣದ ಕೆಎಂಎಫ್ ತರಬೇತಿ ಕೇಂದ್ರದಲ್ಲಿ ಮತದಾನ ನಡೆಯಿತು..

 

4 ಮತಗಟ್ಟೆಗಳನ್ನು ಸ್ಥಾಪಿಸಿ ಒಟ್ಟು 1052 ಮತದಾರರು ಮತ ಚಲಾಸಹಿಸಿದ್ದರು . 15 , ಸ್ಥಾನಗಳ ಪೈಕಿ 11 ಸ್ಥಾನ ಸಾಮನ್ಯ ಕ್ಷೇತ್ರಗಳಿಗೆ , 4 ಮಹಿಳೆಯರಿಗೆ ಮೀಸಲಾಗಿತ್ತು ಸ್ಥಳೀಯ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಸಹಕಾರಿ ಕ್ಷೇತ್ರದಲ್ಲಿ ಬೆಳೆದು ಜಿಲ್ಲೆಯಲ್ಲಿ ಪ್ರಶ್ನಾತೀತ ಸಹಕಾರಿ ನಾಯಕರಾಗಿದ್ದಾರೆ . ಇತ್ತೀಚಿಗೆ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ . ಇವರನ್ನು ಈ ಬಾರಿ ಮೈಮೂಲ್ ಚುನಾವಣೆಯಲ್ಲಿ ಅವರ ಬೆಂಬಲಿಗರು ಗೆಲ್ಲದಂತೆ ಮಾಡಲು ಆ ಮೂಲಕ ಮೈಸೂರು ಜಿಲ್ಲೆಯಲ್ಲಿ ಜಿ ಟಿ ದೇವೇಗೌಡರನ್ನು ಮೂಲೆಗುಂಪು ಮಾಡಲು ಸ್ವತಃ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮುಂದಾಗಿದ್ದರು .

 

ಶನಿವಾರ ಮತ್ತು ಭಾನುವಾರ ಹುಣಸೂರು ಪಿರಿಯಾಪಟ್ಟಣ ಹಾಗೂ ಹೆಚ್ ಡಿ ಕೋಟೆ ಅಲ್ಲದೆ ಮೈಸೂರ ಭಾಗದಲ್ಲಿ ಸ್ಥಳೀಯ ಶಾಸಕ ಸಾ ರಾ ಮಹೇಶ್ ಜೊತೆ ಸೇರಿ ಪ್ರಚಾರ ನಡೆಸಿದ್ದರು..

 

ಮೈಸೂರಿನಲ್ಲಿ ಪತ್ರಿಕಗೋಷ್ಠಿ ನಡೆಸಿ ಜಿ ಟಿ ದೇವೇಗೌಡ ಪಾಲಿಗೆ ಜೆಡಿಎಸ್ ಬಾಗಿಲು ಬಂದ್ , ಅವರನ್ನು ಇನ್ನೂ ಮುಂದೆ ಜೆಡಿಎಸ್‌ಗೆ ಸೇರಿಸಲ್ಲ ಎಂದು ಹೇಳುವ ಮೂಲಕ ಮೈಮೂಲ್ ಚುನಾವಣೆ ರಂಗೇರುವಂತೆ ಮಾಡಿದ್ದರು …ಪಕ್ಷಾತೀತವಾಗಿ ನಡೆದ ಮೈಮೂಲ್ ಚುನಾವಣೆ ಜಿ ಟಿ ದೇವೇಗೌಡ / ಹೆಚ್ ಡಿ ಕುಮಾರಸ್ವಾಮಿ ನಡುವಿನ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿತ್ತು…

 

ಜೆಡಿಎಸ್ ಜಿಟಿ ಬಣ / ಜೆಡಿಎಸ್ ಸಾ ರಾ ಬಣ ನಡುವಿನ ಹೋರಾಟ ಜಿಲ್ಲೆಯ ರಾಜಕಾರಣದಲ್ಲಿ ಯಾರ ಬಣದ ಮೇಲಾಗುತ್ತದೆ ಎಂಬ ಕೂತೂಹಲಕ್ಕೆ ಕಾರಣವಾಗಿತ್ತು..ಆದರೆ ಆಗಿದ್ದೆ ಬೇರೆ , ಕುಮಾರಸ್ವಾಮಿ ಅವರ ಲೆಕ್ಕಾಚಾರ ತಲೆಕೆಳಕಾಗಿದೆ..

 

ಮೈಮುಲ್ ಚುನಾವಣೆಯಲ್ಲಿ ಜಿಟಿಡಿ ಬಣವನ್ನು ಸೋಲಿಸಿ, ಎಟಿಗೆ-ಎದುರೇಟು ನೀಡಲೇ ಬೇಕೆಂದು ಹೆಚ್‌‌.ಡಿ.ಕೆ ಹಾಗೂ ಶಾಸಕ ಸಾ.ರಾ.ಮಹೇಶ್ ಪಟ್ಟ ಕಷ್ಟ ಈಗ ಪಲಿಸಿಲ್ಲ. ಸಹಕಾರಿ ಕೇತ್ರದಲ್ಲಿ ನನಗೆ 50 ವರ್ಷದ ಅನುಭವ ಇದೆ ಎನ್ನುವುದನ್ನ ಜಿಟಿಡಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಶಾಸಕ ಸಾರಾ ಮಹೇಶ್​ಗೆ ಟಕ್ಕರ್ ಕೊಡುವ ಮೂಲಕ ಸಹಕಾರ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಎಷ್ಟಿದೆ ಎಂದು ಜೆಡಿಎಸ್ ದಳಪತಿಗಳಿಗೆ ಶಾಸಕ ಜಿ ಟಿ ದೇವೇಗೌಡ ತೋರಿಸಿ ಕೊಟ್ಟಿದ್ದಾರೆ…

 

ಹೌದು, ಮೈಸೂರು ಮೇಯರ್ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಂತೆ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕೆ ಹಾಗೂ ಸಾ.ರಾ ಮಹೇಶ್, ಮೈಮುಲ್ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡು ಜಿ.ಟಿ.ದೇವೇಗೌಡರಿಗೆ ಶಾಕ್ ನೀಡಲು ಮುಂದಾಗಿದ್ದರು. ಆದರೆ, ಅದೇ ರಿವರ್ಸ್ ಆಗಿದ್ದು, ಈಗ ಇಬ್ಬರು ನಾಯಕರು ಭಾರಿ ಮುಖಭಂಗ ಅನುಭವಿಸಿದ್ದಾರೆ.ಸಹಕಾರಿ ಕ್ಷೇತ್ರದಲ್ಲಿ ಪ್ರಾಬಲ್ಯ ಮೇರೆದ ಜಿ ಟಿ ದೇವೇಗೌಡಮೈಮುಲ್ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ, ಹೇಗಾದರೂ ಮಾಡಿ ಜಿ.ಟಿ.ದೇವೇಗೌಡರ ಪ್ರಾಬಲ್ಯ ತಗ್ಗಿಸಿ ಅವರಿಗೆ ಮುಖಭಂಗ ಮಾಡಬೇಕು ಎಂಬ ಉದ್ದೇಶದಿಂದ ಹೆಚ್ ಡಿ ಕೆ ಮೈಸೂರಿನಲ್ಲಿ ಪ್ರವಾಸ ಕೈಗೊಂಡು ಜಿ.ಟಿ.ಡಿ. ವಿರುದ್ಧ ತಿರುಗಿ ಬಿದ್ದಿದ್ದರು‌. ಸಾ.ರಾ ಮಹೇಶ್ ಕೂಡ ಹೆಚ್​ಡಿಕೆ ಜೊತೆ ನಿಂತು, ಶ್ರಮಿಸಿದ್ದರು. ಆದರೆ, ಮೈಮುಲ್ ಫಲಿತಾಂಶದಲ್ಲಿ ಜಿಟಿಡಿ ಬಣದ 12 ಜನ ಗೆಲುವು ಸಾಧಿಸಿದ್ದು, ನನ್ನ ‘ಸಹಕಾರ’ವಿಲ್ಲದೇ ಮೈಸೂರಿನಲ್ಲಿ ಪಕ್ಷ ಬೆಳೆಯುವುದು ಕಷ್ಟವೆಂದು ತೋರಿಸಿದ್ದಾರೆ.

ಒಟ್ಟಾರೆ ಮೈಮುಲ್ ಚುನಾವಣೆಯಲ್ಲಿ ಜಿಟಿಡಿ ಬಣವನ್ನು ಸೋಲಿಸಿ, ಎಟಿಗೆ – ಎದುರೇಟು ನೀಡಲೇಬೇಕೆಂದು ಹೆಚ್‌‌.ಡಿ.ಕೆ ಹಾಗೂ ಶಾಸಕ ಸಾ.ರಾ.ಮಹೇಶ್ ಪಟ್ಟ ಕಷ್ಟ ಈಗ ಪಲಿಸಿಲ್ಲ.

 

ಸಹಕಾರಿ ಕೇತ್ರದಲ್ಲಿ ನನಗೆ 50 ವರ್ಷದಿಂದ ಅನುಭವ ಇದೆ ಎನ್ನುವುದನ್ನ ಜಿಟಿಡಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version