ಪೊಲೀಸ್ ಕಾನ್ಸ್ಟೇಬಲ್ ಆಕಾಂಕ್ಷಿಗಳ ಕಣ್ಣೀರಿಗೆ ಸ್ಪಂದಿಸುತ್ತ ಸರ್ಕಾರ….???
ತುಮಕೂರು_ಕಳೆದ ಎರಡು ವರ್ಷದ ಹಿಂದೆ ಬಂದಂತ ಕರೋನಾದಿಂದ ಪೊಲೀಸ್ ಕಾನ್ಸ್ಟೇಬಲ್ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳ ನೇಮಕಾತಿಯಲ್ಲಿ ಲಕ್ಷಾಂತರ ಆಕಾಂಕ್ಷಿಗಳು ಅವಕಾಶ ವಂಚಿತರಾಗಿದ್ದು ಇದರಿಂದ ವಯೋಮಿತಿಯ ವಿನಾಯಿತಿ ನೀಡಿ ವಯೋಮಿತಿಯನ್ನ ಹೆಚ್ಚಳ ಮಾಡಲು ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಇರುವ ಕೆಲಸ ಮಾಡುತ್ತಿದ್ದಾರೆ.
ಇದರ ಬೆನ್ನಲ್ಲೇ ಪೊಲೀಸ್ ಕಾನ್ಸ್ಟೇಬಲ್ ಆಕಾಂಕ್ಷಿಗಳು ರಾಜ್ಯದ ಎಲ್ಲಾ ಶಾಸಕರಿಗೂ ಮನವಿಯನ್ನು ನೀಡುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಸಹ ಮಾಡುತ್ತಿದ್ದು ಸರ್ಕಾರ ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಹಲವು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ನಿರೀಕ್ಷೆಯಲ್ಲಿ ಇದ್ದ ಆಕಾಂಕ್ಷಿಗಳು ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ತುಮಕೂರಿನಲ್ಲಿ ಇಂದು ನಡೆದ 67ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಸಂದರ್ಭದಲ್ಲಿ ಗೃಹ ಸಚಿವರಿಗೆ ತಮ್ಮ ಸಂಕಷ್ಟಗಳ ಬಗ್ಗೆ ಮನವಿ ಮಾಡುತ್ತಾ ಗೃಹ ಸಚಿವರ ಕಾಲಿಗೆ ಎರಗಿ ಕಣ್ಣೀರು ಹಾಕಿದ ಘಟನೆಯು ಸಹ ನಡೆದಿದೆ.
ಇದರ ಬೆನ್ನಲ್ಲೇ ಇಂದು ಗೃಹ ಸಚಿವರಿಗೆ ಮನವಿ ನೀಡುವ ಸಲುವಾಗಿ ತುಮಕೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಕಾಂಕ್ಷಿಗಳು ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿದೆ ತೀವ್ರ ಅನ್ಯಾಯ ಮಾಡುತ್ತಿದ್ದು ಇದರಿಂದ ನಮ್ಮ ಭವಿಷ್ಯ ಹಾಳಾಗುತ್ತಿದ್ದು ಇನ್ನಾದರೂ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಅಭ್ಯರ್ಥಿಗಳ ರಕ್ಷಣೆಗೆ ಮುಂದಾಗುವ ಆ ಮೂಲಕ ವಯೋಮಿತಿಯನ್ನ ಹೆಚ್ಚಳ ಮಾಡಬೇಕು ಎಂದು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ ಆದರೂ ಸಹ ಹಲವು ವಿದ್ಯಾರ್ಥಿಗಳು ಎಂದು ಬೀದಿಗೆ ಬಂದಿದ್ದು ಇದರಿಂದ ನಮ್ಮ ಕುಟುಂಬಗಳು ಸಹ ಸಂಕಷ್ಟದಲ್ಲಿ ಇವೆ ಇನ್ನು ನಾವು ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸಬೇಕು ಎನ್ನುವ ಹಲವು ವರ್ಷಗಳ ಆಸೆಗೆ ತಣ್ಣೀರು ರಚ್ಚುವ ಕೆಲಸವನ್ನು ಇಂದು ಸರ್ಕಾರ ಮಾಡುತ್ತಿದೆ ಈ ಕೂಡಲೇ ಸರ್ಕಾರ ವಿದ್ಯಾರ್ಥಿಗಳು ಹಾಗೂ ಆಕಾಂಕ್ಷಿಗಳ ಮನವಿಗೆ ಸ್ಪಂದಿಸಬೇಕಿದೆ ಎಂದು ಹಲವು ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ.
ಇನ್ನು ಗೃಹ ಸಚಿವರು ನಮ್ಮ ಮನವಿಗೆ ಸ್ಪಂದಿಸದೆ ಇರುವುದರಿಂದ ಪೊಲೀಸ್ ಕಾನ್ಸ್ಟೇಬಲ್ ಆಕಾಂಕ್ಷಿಗಳು ಉಪವಾಸ ಸತ್ಯಾಗ್ರಹವನ್ನು ಸಹ ನಡೆಸುವ ತೀರ್ಮಾನಕ್ಕೆ ಬಂದಿದ್ದು ಇನ್ನೂ ಅಭ್ಯರ್ಥಿಗಳ ಸಂಕಷ್ಟಕ್ಕೆ ಸ್ಪಂದಿಸಬೇಕಿದ್ದ ಸರ್ಕಾರ ಇಂದು ಸುಮ್ಮನೆ ಕೂತಿದೆ ಅಭ್ಯರ್ಥಿಗಳ ಭವಿಷ್ಯ ಸಂಕಷ್ಟದಲ್ಲಿ ಇದೆ ಇನ್ನು ವಯೋಮಿತಿ ಸಡಿಲಿಕೆ ಇಲ್ಲದ ಕಾರಣ ನಾವು ಇಂದು ಬೀದಿಯಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಇನ್ನಾದರೂ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಅಭ್ಯರ್ಥಿಗಳ ಮನವಿಯನ್ನು ಪುರಸ್ಕರಿಸಿ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಸರ್ಕಾರದ ಮುಂದೆ ಶಾರದಾ ಎನ್ನುವ ಹಾವೇರಿ ಮೂಲದ ಆಕಾಂಕ್ಷಿಯೊಬ್ಬರು ಕಣ್ಣೀರು ಹಾಕುತ್ತ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮತ್ತೋರ್ವ ವಿದ್ಯಾರ್ಥಿ ರಾಜು ಮಾತನಾಡಿ ವಯೋಮಿತಿ ಸಡಿಲಿಕೆ ಇಲ್ಲದ ಕಾರಣ ರಾಜ್ಯದ್ಯಂತ ಮೂರು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಇಂದು ಅವಕಾಶದಿಂದ ವಂಚಿತರಾಗಿದ್ದಾರೆ ಇನ್ನು ರಾಜ್ಯದ್ಯಂತ ಶಾಸಕರಿಗೆ ,ಸಚಿವರಿಗೆ ಮನವಿ ಮಾಡುತ್ತಿದ್ದರು ಸಹ ನಮ್ಮ ಮನವಿಗೆ ಯಾರು ಕೂಡ ಸ್ಪಂದಿಸುತ್ತಿಲ್ಲ ಇದರಿಂದ ನಾವು ಇಂದು ಬೀದಿಗೆ ಬಿದ್ದಿದ್ದು ವಿಷ ಕುಡಿಯುವ ಪರಿಸ್ಥಿತಿಗೆ ಬಂದಿದ್ದೇವೆ ತಮ್ಮ ಅಸಹಾಯಕ ಸ್ಥಿತಿಯನ್ನು ತೋಡಿಕೊಂಡಿದ್ದಾರೆ