ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವುದರಿಂದ ವ್ಯಕ್ತಿಯ ಜೀವ ಉಳಿಸಲು ಸಾಧ್ಯ : ಡಾ.ಮಂಜುನಾಥ್‌.ಡಿ.ಎನ್.

ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವುದರಿಂದ ವ್ಯಕ್ತಿಯ ಜೀವ ಉಳಿಸಲು ಸಾಧ್ಯ : ಡಾ.ಮಂಜುನಾಥ್‌.ಡಿ.ಎನ್.

 

ತುಮಕೂರು _ಪ್ರಾಣಾಪಾಯದಲ್ಲಿ ಇರುವ ಯಾವುದೇ ವ್ಯಕ್ತಿಗೆ ಸನಿಹದಲ್ಲಿ ಇರುವ ಇತರೆ ವ್ಯಕ್ತಿಯು ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಲು ಸಹಕಾರಿ ಆಗುವುದು ಆತ್ಯಾವಶ್ಯಕವಾಗಿದೆ. ಈ ರೀತಿಯ ತರಬೇತಿಯನ್ನು ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರ ತುಮಕೂರು ಇಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ, ಮಾಗಡಿ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು , ಡಾ|ಮಂಜುನಾಥ್‌.ಡಿ.ಎನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತುಮಕೂರು ರವರು ಕಾರ್ಯಕ್ರಮ ಉದ್ಘಾಟಿಸಿ, ಚಾಲನೆ ನೀಡಿದರು, ‘ಡಾ||ರಜನಿ.ಎಂ, ಪ್ರಾಂಶುಪಾಲರು, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರ, ತುಮಕೂರು ಇವರು ಈ ತರಬೇತಿಯ ಉಸ್ತುವಾರಿ ವಹಿಸಿದ್ದರು. ಆರಕ್ಷಕ, ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಮತ್ತು ಶಾಲೆಗಳಲ್ಲಿನ `ದೈಹಿಕ ಶಿಕ್ಷಕರು, ವಿದ್ಯೋದಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳು, ಗೃಹ ರಕ್ಷಕ ದಳದ ಸಿಬ್ಬಂದಿ: ಈ ರೀತಿ, ವಿವಿಧ ಇಲಾಖೆಗಳಿಂದ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

 

 

 

ಇನ್ನೂ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ಸ್ವಯಂ ಪ್ರೇರಿತರಾದ ನಾಗರೀಕರಿಗೆ ಕೂಡ ಶಿಬಿರಾರ್ಥಿಗಳಾಗಿದ್ದರು. ರಸ್ತೆ ಅಪಘಾತ, ಬೆಂಕಿ ಅನಾಹುತ, ವಿದ್ಯುತ್‌ ಆಘಾತ, ಹಾವು ಕಡಿದವರು, ನೀರಿನಲ್ಲಿ ಮುಳುಗಿದವರು, ತಲೆಗೆ ಏಟು ಬಿದ್ದವರು, ಮೂಳೆ ಮುರಿತಗಳು ಈ ಸಂದರ್ಭದಲ್ಲಿ ಆಸ್ಪತ್ರೆ ತಲುಪುವ ತನಕ ಹಾನಿಗೊಳಗಾದ ವ್ಯಕ್ತಿಗೆ ನೀಡುವ ಪ್ರಥಮ ಚಿಕಿತ್ಸೆ ಬಗ್ಗೆ ತಿಳಿಸಿಕೊಡಲಾಯಿತು.

 

 

 

 

ಪ್ರಾಣಾಪಾಯ ಉಂಟಾದಾಗ ಸಂದರ್ಭಕ್ಕೆ ತಕ್ಕಂತೆ ಹತ್ತಿರದಲ್ಲಿ ಇರುವವರು ಯಾರೇ ಆದರೂ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಿದಲ್ಲಿ ಅವರನ್ನು ಕಾನೂನು ಕ್ರಮಕ್ಕೆ ಒಳಪಡಿಸುವುದಿಲ್ಲ ಹಾಗೂ ಅವರಿಗೆ ಕಾನೂನು ರಕ್ಷೆ ಇರುವುದರ ಬಗ್ಗೆ ಅರಿವು ಮೂಡಿಸಲಾಯಿತು, ಹೃದಯಾಘಾತವಾದಾಗ ಮನಶ್ವೇತನ ಮಾಡುವ ರೀತಿಯ ಬಗ್ಗೆ ತಿಳಿಸಿಕೊಡಲಾಯಿತು. ಪಜ್ಞೆ ಇಲ್ಲದವರಿಗೆ ನೀರು ಕುಡಿಸಲು ಪ್ರಯತ್ನಿಸುವುದು. ಜೀವಕ್ಕೆ ಆಪಾಯ ತಂಗಬಹುದು. ಫಿಟ್ಸ್ ಬರುತ್ತಿರುವವರಿಗೆ ನೀರು ಕುಡಿಸುವುದು, ಕಬ್ಬಿಣದ ಕೀಗಾಗಿ ಹುಡುಕುವುದು ಕೂಡ ತಪ್ಪು ಕಲ್ಪನೆ ಆಗಿದೆ. ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆ ಸಿಗುವವರೆಗೂ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕೆಂಬ ಮಾಹಿತಿ ಇದ್ದಲ್ಲಿ ಅನೇಕ ಜೀವಗಳನ್ನು ಉಳಿಸಬಹುದು, ಮನುಷ್ಯಾಕೃತಿ ಗೊಂಬೆ ಆಧಾರಿತವಾಗಿ ಕೌಶಲ್ಯಾಧಾರಿತ ತರಬೇತಿ ನೀಡಲಾಯಿತು.

 

ಈ ರೀತಿ ತರಬೇತಿ ಪಡೆದವರಿಗೆ “ಪ್ರಥಮ ಪ್ರತಿಕ್ರಿಯರು”(First Responder) ಎಂಬ ಗುರುತಿನ ಚೀಟಿ ನೀಡಲಾಯಿತು. ಈ ತರಬೇತಿಯನ್ನು ಜಿಲ್ಲಾ ಆಸ್ಪತ್ರೆ ತುಮಕೂರು ಮತ್ತು ನಿಮಣ ಸ್ತ್ರೀಲ್ ಲ್ಯಾಬ್, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಗೌರಿಬಿದನೂರು: ಇಲ್ಲಿನ ನುರಿತ ತರಬೇತುದಾರರು ತರಬೇತಿ ನೀಡಿದರು.

 

 

 

 

 

 

 

 

ಡಾ||ಮಂಜುನಾಥ್, ಡಿ.ಹೆಚ್.ಓ ರವರು ಮಾತನಾಡಿ ಶಿಕ್ಷಣದಲ್ಲೇ ಒಂದು ಭಾಗವಾಗಿ ಪ್ರಥಮ ಚಿಕಿತ್ಸೆ ಬಗ್ಗೆ ತಿಳುವಳಿಕೆ ನೀಡುವುದು ಅನೇಕ ದೇಶಗಳಲ್ಲಿದೆ. ಈ ರೀತಿಯ ತರಬೇತಿಯಿಂದ ಜೀವ ಹಾನಿ ಆಗುವ ಸಂದರ್ಭದಲ್ಲಿ ಮೂಕ ಪ್ರೇಕ್ಷಕರಾಗುವುದರ ಹೊರತು CPR (Cardiopulmonary resuscitation) ಗೊತ್ತಿದ್ದರೆ ಜೀವ ಉಳಿಸಬಹುದೆಂದು ತಿಳಿಸಿದರು.

 

ಡಾ|ಚಂದ್ರಶೇಖರ್ ಮಾತನಾಡಿ ಒಬ್ಬ ವೈದ್ಯರಿಗೆ ಇಂತ ಸಂದರ್ಭದಲ್ಲಿ ಕೇವಲ 03 ನಿಮಿಷ ಇರುತ್ತದೆ. ಈ 03 ನಿಮಿಷದಲ್ಲಿ ಸಿ.ಪಿ.ಆರ್ ಮಾಡಿ ಮೆದುಳಿಗೆ ಆಮ್ಲಜನಕ ಸಿಗುವ ಹಾಗೆ ಮಾಡದೆ ಇದ್ದರೆ ರೋಗಿಯ ಮೆದುಳಿಗೆ ಹಾನಿ ಆಗುತ್ತದೆ’ ಎಂದು ತಿಳಿಸಿದರು. ಅತ್ಯಂತ ಕ್ಷಿಪ್ರವಾಗಿ ಪ್ರತಿಕ್ರಿಯಿಸಿ CPR (Cardiopulmonary resuscitation) ಮಾಡಿದಾಗ ಮಾತ್ರ ಹೃದಯ ಮತ್ತೊಮ್ಮೆ ಬಡಿದುಕೊಂಡು ಮೆದುಳಿಗೆ ಆಮ್ಲಜನಕ ದೊರಕುವಂತೆ ಮಾಡಬಹುದು ಎಂದು ತಿಳಿಸಿದರು.

 

 

 

ಡಾ||ರಜನಿ.ಎಂ, ಪ್ರಾಂಶುಪಾಲರು, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರ, ತುಮಕೂರು ಮಾತನಾಡಿ ಇಂತ ಸನ್ನಿವೇಶಗಳಲ್ಲಿ ಮುನ್ನುಗ್ಗಿ ಜೀವ ಉಳಿಸಿದರೆ ಈ ತರಬೇತಿ ನೀಡಿದ್ದು ಸಾರ್ಥಕವೆಂದು ತಿಳಿಸಿದರು.

 

 

 

ಕಾರ್ಯಕ್ರಮದಲ್ಲಿ ಡಾ|ರಘುನಂದನ್, ಬಿ.ಎಲ್.ಎಸ್‌. ಮತ್ತು ಎ.ಸಿ.ಎಲ್.ಎಸ್. ತರಬೇತುದಾರರು, ಆಮೇರಿಕ ಆಸೋಸಿಯೇಷನ್‌, ಡಾ||ಚಂದ್ರಶೇಖರ್.ಸಿ.ಎಸ್‌. ಡಾ||ಶಿವಲಿಂಗಪ್ಪ.ಎಂ.ಪಿ.ಜಿಲ್ಲಾ ಆಸ್ಪತ್ರೆ, ತುಮಕೂರು ಸೇರಿದಂತೆ ಹಲವರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version