ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ನಡೆಸಿದ್ದ ಲಸಿಕ ಅಭಿಯಾನದ ವಿರುದ್ಧ ದೂರು ನೀಡಿದ RTI ಕಾರ್ಯಕರ್ತ ಗಿರೀಶ್.

ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ನಡೆಸಿದ್ದ ಲಸಿಕ ಅಭಿಯಾನದ ವಿರುದ್ಧ ದೂರು ನೀಡಿದ RTI ಕಾರ್ಯಕರ್ತ ಗಿರೀಶ್.

ತುಮಕೂರು ಗ್ರಾಮಾಂತರ ಶಾಸಕ ಡಿಸಿ ಗೌರಿಶಂಕರ್ ಅವರು ಕೋವಿಡ್ ಲಸಿಕಾ ಅಭಿಯಾನದ ಅಡಿಯಲ್ಲಿ ಜನವರಿ 1/8/2021 ರಂದು ತುಮಕೂರು ಗ್ರಾಮಾಂತರ ಶಾಸಕರ ಬಳಗೆರೆ ನಿವಾಸದಲ್ಲಿ ಬೃಹತ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಸಾವಿರಾರು ಸಾರ್ವಜನಿಕರಿಗೆ ಉಚಿತವಾಗಿ ಲಸಿಕೆಯನ್ನು ನೀಡಲಾಗಿತ್ತು.

 

 

ಇದಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆರ್ಟಿಐ ಕಾರ್ಯಕರ್ತ ಗಿರೀಶ್ ರವರು ಗ್ರಾಮಾಂತರ ಶಾಸಕ ಡಿ ಸಿ ಗೌರಿಶಂಕರ್ ರವರು ನಡೆಸಿದ ಲಸಿಕ ಅಭಿಯಾನದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

 

ತುಮಕೂರು ಗ್ರಾಮಾಂತರ ಶಾಸಕರು ತುಮಕೂರು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸಲ್ಲಿಸಿರುವ ಮಾಹಿತಿಯನ್ನು ಆರ್ಟಿಇ ಮೂಲಕ ಪಡೆಯಲಾಗಿದ್ದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.

 

ತುಮಕೂರು ಗ್ರಾಮಾಂತರ ಶಾಸಕರು ಖರೀದಿಸಿರುವ ಲಸಿಕೆ ಸಂಬಂಧ ನಮೂದಿಸಲಾಗಿರುವ ಬ್ಯಾಕ್ ಸಂಖ್ಯೆಯನ್ನು ಪರಿಶೀಲಿಸಲಾಗಿ ಈ ಬ್ಯಾಚ್ ಸಂಖ್ಯೆಗೆ ಸಂಬಂಧಿಸಿದ ಲಸಿಕೆ ತುಮಕೂರು ಜಿಲ್ಲೆಗೆ ಸರಬರಾಜು ಆಗಿಲ್ಲ ಆದರೆ ಗ್ರಾಮಾಂತರ ಶಾಸಕರು ತುಮಕೂರು ಜಿಲ್ಲೆಯ ಗ್ರಾಮಾಂತರ ಸಾರ್ವಜನಿಕರಿಗೆ ನೀಡಿರುವ ಮಾಹಿತಿಯನ್ನು ಇಲಾಖೆಗೆ ಸಲ್ಲಿಸಿದ್ದಾರೆ ಹಾಗಾಗಿ ಇವರು ನೀಡಿರುವ ಲಸಿಕೆಯ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತಪಡಿಸಿದ್ದಾರೆ.

 

ಇನ್ನು ಸರ್ಕಾರದ ಅಧಿಕೃತ ಆಪ್ ಕೋವಿನಲ್ಲಿ ಈ ಬ್ಯಾಚ್ ಸಂಖ್ಯೆಯನ್ನು ಪರಿಶೀಲಿಸಿದಾಗ ಶಾಸಕರು ಇಲಾಖೆಗೆ ಸಲ್ಲಿಸಿರುವ ಬ್ಯಾಚ್ ಸಂಖ್ಯೆಯ ಲಸಿಕೆಯು ಬೆಳಗಾವಿಯ ಪ್ರಭಾಕರ್ ಕೋರೆ ಆಸ್ಪತ್ರೆ, ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆ ಹಾಗೂ ಎಂವಿಜೆ ಆಸ್ಪತ್ರೆಗೆ ಸರಬರಾಜು ಆಗಿದೆ ಹಾಗಾದರೆ ಶಾಸಕರು ನೀಡಿರುವ ಬ್ಯಾಚ್ ಸಂಖ್ಯೆಯ ಲಸಿಕೆ ಎಲ್ಲಿಂದ ಬಂದಿದೆ ಹಾಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಯುವ ಸಂಬಂಧ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕ್ಕೆ ದೂರು ಸಲ್ಲಿಸಲಾಗಿದೆ ಈ ಮೂಲಕ ತುಮಕೂರು ಗ್ರಾಮಾಂತರ ಶಾಸಕರು, ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ,ತುಮಕೂರು ತಾಲ್ಲೂಕು ಅಧಿಕ ಆರೋಗ್ಯಾಧಿಕಾರಿ, ಆರ್ ಸಿ ಎಚ್ ಸೇರಿದಂತೆ ಲಸಿಕೆ ಸರಬರಾಜು ಮಾಡಿರುವ ಬೆಂಗಳೂರಿನ ಆಸ್ಪತ್ರೆಯ ವಿರುದ್ಧವೂ ತನಿಖೆ ಗೆ ದೂರು ಸಲ್ಲಿಸುವುದಾಗಿ ತಿಳಿಸಿದರು.

 

ಇನ್ನು ಸರಕಾರಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ ಎರಡರಿಂದ 2500 ಮಂದಿಗೆ ಲಸಿಕೆ ನೀಡಲು ಅನುಮತಿ ಪಡೆಯಲಾಗಿದ್ದು ಅವರು ಮಾಧ್ಯಮಗಳು ಹಾಗೂ ಪತ್ರಿಕೆಗಳಿಗೆ ನೀಡಿರುವ ಹೇಳಿಕೆ ಗಮನಿಸಿದಾಗ ಹತ್ತು ಸಾವಿರ ಮಂದಿಗೆ ಲಸಿಕೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ, ಹಾಗೂ ಅವರು ಲಸಿಕೆ ಖರೀದಿಗಾಗಿ ನೀಡಿರುವ ಹಣದ ಬಿಲ್ ಮೊತ್ತದಲ್ಲೂ ಸಹ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ ಹೀಗಾಗಿ ಸಾಕಷ್ಟು ಗೊಂದಲಗಳು ಉಂಟಾಗಿವೆ ಎಂದರು.

 

ತುಮಕೂರು ಗ್ರಾಮಾಂತರ ಭಾಗದ ಸಾರ್ವಜನಿಕರು ಮುಗ್ಧರಾಗಿದ್ದರು ಶಾಸಕರು ನೀಡಿರುವ ಲಸಿಕೆಯ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ ಇನ್ನು ಬ್ಯಾಚ್ ಸಂಖ್ಯೆಯೇ ಸರಬರಾಜಾಗದ ಲಸಿಕೆಯನ್ನು ತುಮಕೂರು ಜಿಲ್ಲೆಯ ಗ್ರಾಮಾಂತರ ಭಾಗಕ್ಕೆ ನೀಡಿರುವುದನ್ನು ಗಮನಿಸಿದರೆ ಇನ್ನು ಅವರು ನೀಡಿರುವ ಲಸಿಕೆ ನೈಜತೆಯಿಂದ ಕೂಡಿದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ ಹಾಗಾಗಿ ಅವರು ನೀಡಿರುವುದು ಲಸಿಕೆಯೋ…. ನೀರೋ…. ಡಿಸ್ಟಿಲ್ ವಾಟರ್…ನೋ… ಅನ್ನುವ ಅನುಮಾನ ವ್ಯಕ್ತವಾಗಿದೆ ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆಯಾಗಿ ಸತ್ಯಾಸತ್ಯತೆಯ ವರದಿಯನ್ನು ಸಾರ್ವಜನಿಕರ ಮುಂದಿಡಬೇಕಾಗಿದೆ ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕ್ಕೆ ದೂರು ಸಲ್ಲಿಸಲಾಗಿದೆ ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version