ಎಲ್ಲರೂ ಉಚಿತ ಲಸಿಕೆ ಪಡೆದು ಕೋವಿಡ್ ಮುಕ್ತರಾಗಿ

ತುಮಕೂರು ನಗರದ 31ನೇ ವಾರ್ಡ್ನಲ್ಲಿರುವ ಮಾರುತಿ ನಗರದ ಸಂಜೀವಿನಿ ಪಾರ್ಕ್ನಲ್ಲಿ ಜಿಲ್ಲಾಡಳಿತ ವತಿಯಿಂದ ಸುಮಾರು 150 ಜನರಿಗೆ ಕೋವಿಡ್ ಲಸಿಕೆ ಹಾಕಿಸುವ ಕಾರ್ಯಕ್ರಮ ಮಾರುತಿ ನಗರದ ಹಿತರಕ್ಷಣಾ ಸಮಿತಿಯ ವತಿಯಿಂದ ಅಧ್ಯಕ್ಷರಾದ ಜಗಜ್ಯೋತಿ ಸಿದ್ಧರಾಮಯ್ಯರವರ ನೇತೃತ್ವದಲ್ಲಿ ನಡೆಯಿತು.

     ಸಂದರ್ಭದಲ್ಲಿ ಮಾತನಾಡಿದ ಮಾರುತಿ ನಗರದ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಜಗಜ್ಯೋತಿ ಸಿದ್ಧರಾಮಯ್ಯನವರು, ಎಲ್ಲ ನಾಗರೀಕರು ತಪ್ಪದೇ 1ನೇ ಮತ್ತು 2ನೇ ಡೋಸೇಜ್ ಉಚಿತ ಲಸಿಕೆ ಪಡೆದು ಕೋವಿಡ್ ಮುಕ್ತ ತುಮಕೂರು ಮಾಡಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

 

     ಇಂದು ಕೋವಿಡ್-19 ತುಮಕೂರು ಜನರಿಗೆ ವ್ಯಾಪಕವಾಗಿ ಹರಡುತ್ತಿದೆ, ಜನರು ಮನೆಯಲ್ಲಿದ್ದರೂ ಸಹ ಮಾಸ್ಕ್ ಧರಿಸಬೇಕು,ಸ್ಯಾನಿಟೈಸರ್ ಬಳಸಬೇಕು ಆಗಾಗ ಸಾಬೂನಿನಿಂದ ಕೈ ತೊಳೆಯಬೇಕು,೬ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು,ನಗರದಲ್ಲಿ ಎಲ್ಲೆಂದರಲ್ಲಿ ಓಡಾಡಬಾರದು ಬಾಲಕರಾದಿಯಾಗಿ ವೃದ್ಧರವರೆಗೆ ಎಲ್ಲರೂ ಸಹ ಬಹಳ ಎಚ್ಚರಿಕೆಯಿಂದ ಇರಬೇಕು,ಮೇ ೧ರಿಂದ ೧೮ ವರ್ಷ ಮೇಲ್ಪಟ್ಟವರಿಗೂ ಸರ್ಕಾರ ಉಚಿತ ಲಸಿಕೆ ಹಾಕುತ್ತಿದೆ ಆದ್ದರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಸಹ ವೆಬ್ ಸೈಟ್ ನಲ್ಲಿ ಇಂದಿನಿಂದಲೇ ನೋಂದಣಿ ಮೇ 1ರಿಂದ ಎಲ್ಲರೂ ಉಚಿತ ಲಸಿಕೆ ಪಡೆದು ಕೋರೋನಾ ಮುಕ್ತ ತುಮಕೂರು ಆಗಲು ಸಹಕಾರ ನೀಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

     ಲಾಕ್ ಡೌನ್ ಇದ್ದರೂ ಸಹ ಪ್ರತಿ ದಿನ ಇಲ್ಲಿ 150-200 ಜನರಿಗೆ ಲಸಿಕೆ ನೀಡಲಾಗುತ್ತಿದೆ ಆದ್ದರಿಂದ ಎಲ್ಲರೂ ಬಂದು ಉಚಿತ ಲಸಿಕೆ ಪಡೆದು ಮನೆಯಲ್ಲಿರುವಂತೆ ಮನವಿ ಮಾಡಿದರು.ಇಂದು ಎಲ್ಲರೂ ಸರದಿ ಸಾಲಿನಲ್ಲಿ ಬಹಳ ಶಿಸ್ತಿನಿಂದ ನಿಂತು ಲಸಿಕೆ ಪಡೆದರು.

     ಸಂದರ್ಭದಲ್ಲಿ ಮಾರುತಿ ನಗರದ ನಾಗರೀಕ ಸಮಿತಿಯ ಕಾರ್ಯದರ್ಶಿ ಡಿ.ನಾರಾಯಣ್ ನಾಯಕ್,ಮಾರುತಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ||ಸುಭಾಷ್ಚಂದ್ರ ಗೂಳೇರ,ಆರೋಗ್ಯ ಸಿಬ್ಬಂದಿಗಳಾದ ಕಮಲ,ಪದ್ಮಾವತಿ,ಭಾನುಮತಿ ಮುಂತಾದವರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version