ಗಾರ್ಮೆಂಟ್ಸ್ ಬಸ್ ಪಲ್ಟಿ, ಒಂದು ಸಾವು ಹಲವರಿಗೆ ಗಾಯ.

ಗಾರ್ಮೆಂಟ್ಸ್ ಬಸ್ ಪಲ್ಟಿ, ಒಂದು ಸಾವು ಹಲವರಿಗೆ ಗಾಯ.

 

 

ತುಮಕೂರು ತಾಲೂಕು ಉರ್ಡಿಗೆರೆ ಬಳಿಯ ವದೇಕಲ್ಲು ಹಾಗೂ ಪೆಮ್ಮನಹಳ್ಳಿ ಗ್ರಾಮದ ಬಳಿ ಮಂಗಳವಾರ ಸಂಜೆ ಗೋಲ್ಡನ್ ಸಿಮ್ಸ್ ಫ್ಯಾಕ್ಟರಿಗೆ ಸೇರಿದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದ್ದು ಅಪಘಾತದಲ್ಲಿ ಗಾರ್ಮೆಂಟ್ಸ್ ನೌಕರನೊಬ್ಬ ಸಾವನ್ನಪ್ಪಿದ್ದಾನೆ.

 

ಬಸ್ನಲ್ಲಿ 35ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಚಾಲಕನ ಅತಿವೇಗ ಅಪಘಾತಕ್ಕೆ ಕಾರಣವಾಗಿದೆ ಎಂದು ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತಿಳಿಸಿದ್ದಾರೆ.

 

ಪ್ರತಿನಿತ್ಯ ತುಮಕೂರು ತಾಲೂಕಿನ ಪೆಮ್ಮನಹಳ್ಳಿ ಗ್ರಾಮದಿಂದ ಮಾಕಳಿ ಹಾಗೂ ಹೊಸಕೋಟೆ ಭಾಗಕ್ಕೆ ನೌಕರರು ಬಸ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು.

 

ಆದರೆ ಮಂಗಳವಾರ ಸಂಜೆ ಪೆಮ್ಮನಹಳ್ಳಿ ಬಳಿ ಚಾಲಕನ ಅತಿವೇಗದಿಂದ ನಿಯಂತ್ರಣಕ್ಕೆ ಸಿಗದ ಅಪಘಾತ ಸಂಭವಿಸಿದೆ.

 

ಘಟನೆ ನಡೆದ ಕೂಡಲೇ ಗಾಯಾಳುಗಳನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 8 ಮಂದಿಗೆ ತೀವ್ರ ಪೆಟ್ಟಾಗಿದ್ದು ಚಿಕಿತ್ಸೆ ಮುಂದುವರೆಸಲಾಗಿದೆ.

 

 

ಉರ್ಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version