ಸ್ವಂತ ದುಡಿಮೆಯಲ್ಲಿ ಮಾಕನಹಳ್ಳಿ ಜಂಗಮಠಕ್ಕೆ ಹೈಟೆಕ್ ಮಾದರಿ ಶೌಚಾಲಯ ನಿರ್ಮಿಸಿ ಕೊಟ್ಟ ಜಿ.ಫಾಲನೇತ್ರೆಯ್ಯ
ತುಮಕೂರು– ತನ್ನ ಸ್ವಂತ ದುಡಿಮೆಯಲ್ಲಿ ಸಮಾಜ ಸೇವೆಗಳನ್ನು ಮಾಡುತ್ತಾ ಖ್ಯಾತಿಗಳಿಸಿರುವ ಸಮಾಜ ಸೇವಕ ಹಾಗೂ ಗೂಳೂರು ಜಿಲ್ಲಾ ಪಂಚಾಯತ್ ಜೆಡಿಎಸ್ ಉಸ್ತುವಾರಿ ಅಧ್ಯಕ್ಷ ಜಿ. ಫಾಲನೇತ್ರಯ್ಯ ತುಮಕೂರು ತಾಲೂಕಿನ ಮಾಕನಹಳ್ಳಿ ಜಂಗಮಠದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಸುಮಾರು 18 ಲಕ್ಷ ವೆಚ್ಚದಲ್ಲಿ ಹೈಟೆಕ್ ಮಾದರಿಯ ಶೌಚಾಲಯ ನಿರ್ಮಾಣ ಮಾಡಿ ಮಾನವೀಯತೆ ಮೆರೆದಿದ್ದಾರೆ.
ತುಮಕೂರು ತಾಲೂಕಿನ ಇತಿಹಾಸ ಪ್ರಸಿದ್ಧ ಜಂಗಮ ಸುಕ್ಷೇತ್ರಗಳಲ್ಲಿ ಮಾಕನಹಳ್ಳಿ ಜಂಗಮ ಮಠವೂ ಸಹ ಒಂದಾಗಿದ್ದು, ಶ್ರೀಮಠದ ವತಿಯಿಂದ ಶಿಕ್ಷಣ ಸಂಸ್ಥೆಯು ನಡೆಯುತ್ತಿದೆ. ನೂರಾರು ಮಂದಿ ವಿದ್ಯಾರ್ಥಿಗಳು ಶ್ರೀಮಠದಲ್ಲಿ ಉಳಿದುಕೊಂಡು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ಹಾಗೂ ಬಂದ ಭಕ್ತಾದಿಗಳಿಗೆ ಶೌಚಾಲಯದ ವ್ಯವಸ್ಥೆ ಅತ್ಯವಶ್ಯಕವಾಗಿ ಬೇಕಾಗಿದ್ದು ಇದನ್ನು ಮನಗಂಡ ಫಾಲನೇತ್ರಯ್ಯ ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 18 ಲಕ್ಷ ರು ವೆಚ್ಚದಲ್ಲಿ 9 ಶೌಚಾಲಯಗಳನ್ನು ನಿರ್ಮಿಸುವುದರ ಮೂಲಕ ತಮ್ಮ ಸಮಾಜ ಸೇವಾ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಸಂಪೂರ್ಣ ಆರ್ ಸಿ ಸಿ ಕಟ್ಟಡವನ್ನು ನಿರ್ಮಾಣ ಮಾಡುವುದರ ಮೂಲಕ ಪ್ರತಿಯೊಂದು ಶೌಚಾಲಯದಲ್ಲಿಯೂ ಗೀಸರ್ ಕಮೋಡ್ ಹಾಗೂ ವಾಶ್ ಬೇಸಿನ್ ಒಳಗೊಂಡಿದೆ.
ಇನ್ನು ಇದರ ಉದ್ಘಾಟನೆಯನ್ನು ಭಾನುವಾರ ಶ್ರೀಮಠದ ಗಂಗಾಧರ ಮಹಾಸ್ವಾಮಿಗಳು ನೆರವೇರಿಸಿದ್ದು ಪಾಲನೆತ್ರೆಯನವರ ಸಮಾಜ ಸೇವಾ ಮನೋಭಾವವನ್ನು ಅಭಿನಂದಿಸಿದರು.