ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ್‌ಗೌಡ ನೇತೃತ್ವದಲ್ಲಿ ಹಸಿದವರಿಗೆ ಅನ್ನ ನೀಡುವ ಕಾರ್ಯಕ್ರಮಕ್ಕೆ ಚಾಲನೆ

 

ದೇವನಹಳ್ಳಿ: ಕೋವಿಡ್‌ನಂತಹ ಸಂಕಷ್ಟದ ಕಾಲದಲ್ಲಿ ದಾನಿಗಳಿಂದ ವಿವಿಧ ರೀತಿಯ ಸೇವಾಕಾರ್ಯಗಳು ನಡೆಯುವ ನಡುವೆ ಬೂದಿಗೆರೆ ಗ್ರಾಪಂ ಮಾಜಿ ಅಧ್ಯಕ್ಷರ ನೇತೃತ್ವದಲ್ಲಿ ಹಸಿದವರಿಗೆ ಅನ್ನ ನೀಡುವ ಸೇವೆ ಅನ್ನದಾಸೋಹ ಕಾರ್ಯಕ್ರಮವನ್ನು ಮಾಡಲಾಯಿತು.

 

ಬೂದಿಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ, ಸರಕಾರದ ಬಿಗಿ ಕರ್ಫ್ಯೂದಿಂದಾಗಿ ಯಾವುದೇ ಉದ್ದಮಿಗಳು ಕಾರ್ಯನಿರ್ವಹಿಸದೆ ಬಾಗಿಲು ಮುಚ್ಚಿರುವ ಹಿನ್ನಲೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಅಲೆಯುವ ಪರಿಸ್ಥಿತಿ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ತಾಂಡವವಾಡುತ್ತಿದೆ.

ಇದನ್ನು ಅರಿತು ಒಂದು ದಿನದ ಮಟ್ಟಿಗೆ ಹಸಿದವರಿಗೆ ಅನ್ನ ನೀಡುವ ಕಾಯಕವನ್ನು ಮಾಡಲಾಗುತ್ತಿದೆ.

 

 

ಇದು ನಿರಂತರವಾಗಿ ನಡೆಸಲು ಚಿಂತನೆಯೂ ಸಹ ಮಾಡಲಾಗಿದೆ. ದಾನಿಗಳ ಸಹಕಾರದಲ್ಲಿ ಮತ್ತಷ್ಟು ಹೆಚ್ಚಿನ ಸೇವಾ ಕಾರ್ಯವನ್ನು ಸಹ ಮಾಡಲು ಚಿಂತನೆ ನಡೆಸಲಾಗಿದೆ. ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸ ಎಂದು ಭಾವಿಸಿ ಸೇವೆ ಸಲ್ಲಿಸಲಾಗುತ್ತಿದೆ ಎಂದರು.

 

ಈ ವೇಳೆಯಲ್ಲಿ ತಾಪಂ ಅಧ್ಯಕ್ಷೆ ಭಾರತಿಲಕ್ಷ್ಮಣ್‌ಗೌಡ, ಬೂದಿಗೆರೆ ಗ್ರಾಪಂ ಅಧ್ಯಕ್ಷೆ ಗೀತಾಆನಂದ್, ಉಪಾಧ್ಯಕ್ಷ ಗಜೇಂದ್ರ, ಸದಸ್ಯರಾದ ಶ್ರೀನಿವಾಸ್, ಮೋಹನ್, ವೆಂಕಟೇಶ್, ನಾರಾಯಣಸ್ವಾಮಿ, ಆರ್ತಿಅಪ್ಪಯ್ಯ, ಚೌಡಪ್ಪ, ಬೂದಿಗೆರೆ ಗ್ರಾಮದ ಮುಖಂಡರು, ಮತ್ತಿತರರು ಇದ್ದರು.

 

ಬೂದಿಗೆರೆ ಗ್ರಾಮದ ಪಂಚಾಯಿತಿ ಮುಂಭಾಗ

 

ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಪಂ ವ್ಯಾಪ್ತಿಯ ಅಂಗವಿಕಲರಿಗೆ ೧೨೦ ದಿನಸಿ ಕಿಟ್‌ಗಳನ್ನು ಗ್ರಾಪಂ ವತಿಯಿಂದ ವಿತರಿಸಲಾಯಿತು.

 

ಗುರುಮೂರ್ತಿ ಬೂದಿಗೆರೆ

8861100990

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version